ಐಪಿಎಲ್ 2020- ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್… ಗೆಲುವು ಯಾರಿಗೆ
ಐಪಿಎಲ್ ಟೂರ್ನಿಯ 55ನೇ ಪಂದ್ಯ.
ಕುತೂಹಲ, ರೋಚಕ, ಜಿದ್ದಾಜಿದ್ದಿನ ಹಾಗೂ ಆತ್ಮಾಭಿಮಾನದ ಪಂದ್ಯವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಕಾದಾಟ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇದಕ್ಕೆ ಕಾರಣ.. ಪ್ಲೇ ಆಫ್ ಎಂಟ್ರಿ..
ಹೌದು, ಟೂರ್ನಿಯಲ್ಲಿ ಗೆದ್ದ ತಂಡ ಪ್ಲೇ ಆಫ್ ಗೆ ಸುಲಭವಾಗಿ ಎಂಟ್ರಿಯಾಗುತ್ತೆ. ಸೋತ ತಂಡ ಮತ್ತೆ ರನ್ ಧಾರಣೆಯ ಲೆಕ್ಕಚಾರಕ್ಕೆ ಹೋಗಬೇಕಾಗುತ್ತದೆ.
ಹೀಗಾಗಿ ಟೂರ್ನಿಯ 55ನೇ ಪಂದ್ಯ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
ಹಾಗೇ ನೋಡಿದ್ರೆ ಆರ್ ಸಿಬಿ ಮತ್ತು ಡಿಸಿ ತಂಡಗಳು ಒಂದೇ ದೋಣಿಯ ಪಯಣಿಗರಂತಿದೆ.
ಆರ್ ಸಿಬಿ ತಂಡ ಈ ಹಿಂದಿನ ಮೂರು ಪಂದ್ಯಗಳನ್ನು ಸೋತಿದೆ. ಸಾಲು ಸಾಲು ಸೋಲುಗಳಿಂದ ಹೊರಬರಲು ಆರ್ ಸಿಬಿ ಸಾಕಷ್ಟು ಹೋರಾಟ ನಡೆಸಬೇಕಿದೆ.
ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಾದಿ ಕೂಡ ಭಿನ್ನವೇನೂ ಇಲ್ಲ.
ಟೂರ್ನಿಯ ಮೊದಲ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಲಯದಲ್ಲಿತ್ತು. ಆದ್ರೆ ಎರಡನೇ ಹಂತದಲ್ಲಿ ಸಾಲು ಸಾಲು ಸೋಲುಗಳನ್ನು ಅನುಭವಿಸಿದೆ. ಸತತ ನಾಲ್ಕು ಪಂದ್ಯಗಳನ್ನು ಸೋತಿರುವ ಶ್ರೇಯಸ್ ಅಯ್ಯರ್ ಬಳಗ ಒತ್ತಡಕ್ಕೆ ಸಿಲುಕಿದೆ.
ಆರಂಭದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ನಿರಾಸೆ ಮೂಡಿಸುತ್ತಿದೆ.
ತಂಡದಲ್ಲಿ ಸ್ಥಿರ ಪ್ರದರ್ಶನ ಹೊರಬರುತ್ತಿಲ್ಲ. ಸಾಂಘಿಕ ಆಟವಂತೂ ಇಲ್ಲವೇ ಇಲ್ಲ. ಅದೇ ರೀತಿ ಏಕಾಂಗಿ ಹೋರಾಟವೂ ಕಂಡು ಬರುತ್ತಿಲ್ಲ.
ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ. ತಂಡದಲ್ಲಿ ಯುವ ಆಟಗಾರರು ಇದ್ರೂ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ಬರುತ್ತಿಲ್ಲ.
ಪೃಥ್ವಿ ಶಾ, ಶಿಖರ್ ಧವನ್, ರಿಷಬ್ ಪಂತ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟ್ ನಿಂದಲೂ ಸರಾಗವಾಗಿ ರನ್ ಗಳು ಹರಿದುಬರುತ್ತಿಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ರಬಾಡ, ಸ್ಟೋನಿಸ್, ಅಕ್ಷರ್ ಪಟೇಲ್, ಅನ್ರಿಚ್ ಪ್ರಮುಖ ಪಾತ್ರ ವಹಿಸಿದ್ರೂ ಇತ್ತೀಚಿನ ನಾಲ್ಕು ಪಂದ್ಯಗಳಲ್ಲಿ ಕೂಡ ಲಯ ಕಳೆದುಕೊಂಡಿದ್ದಾರೆ.
ಹೀಗಾಗಿ ತಂಡ ಆತ್ಮವಿಶ್ವಾಸದೊಂದಿಗೆ ಆಟವನ್ನಾಡಬೇಕಿದೆ. ಸೋಲನ್ನು ಮರೆತು ಗೆಲುವಿನತ್ತ ಚಿತ್ತವನ್ನಿಡಬೇಕಿದೆ.
ಇನ್ನು ಆರ್ ಸಿಬಿ.. ಟೂರ್ನಿಯಲ್ಲಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಟವಾಡಿದ್ರೂ ಸ್ಥಿರ ಪ್ರದರ್ಶನವಿಲ್ಲ.
ತಂಡ ಮುಖ್ಯವಾಗಿ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ.
ದೇವದತ್ತ್ ಪಡಿಕ್ಕಲ್ ಮತ್ತು ಫಿಲಿಪ್ಟೆ ಉತ್ತಮ ಆರಂಭ ನೀಡಿದ್ರೂ ಮಧ್ಯಮ ಕ್ರಮಾಂಕದಲ್ಲಿ ಎಡವಿ ಬೀಳುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ನಿಂದಲೂ ನಿರೀಕ್ಷೆಗೆ ತಕ್ಕಂತೆ ರನ್ ಗಳು ಬರುತ್ತಿಲ್ಲ.
ಅದೇ ರೀತಿ 360 ಡಿಗ್ರಿ ಆಟಗಾರ ಎಬಿಡಿ ವಿಲಿಯರ್ಸ್ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.
ಇನ್ನುಳಿದಂತೆ ಬೌಲಿಂಗ್ ನಲ್ಲಿ ಕ್ರಿಸ್ ಮೋರಿಸ್, ಚಾಹಲ್, ಸೈನಿ ಮತ್ತು ಮಹಮ್ಮದ್ ಸಿರಾಜ್ ಹಾಗೂ ವಾಷಿಂಗ್ಟನ್ ಸುಂದರ್ ನಿಖರ ದಾಳಿ ನಡೆಸುವ ಅಗತ್ಯವಿದೆ.
ಒಟ್ಟಿನಲ್ಲಿ ಇಂದಿನ ಪಂದ್ಯ ಹೆಚ್ಚು ಪಡೆದುಕೊಂಡಿದೆ. ಗೆದ್ದವರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಳ್ಳಲಿದ್ದಾರೆ.
ಅದೇ ರೀತಿ ಸೋತ ತಂಡ ಉತ್ತಮ ರನ್ ಧಾರಣೆಯನ್ನು ಹೊಂದಿರಬೇಕು. ಒಂದು ವೇಳೆ ಕಡಿಮೆ ರನ್ ಧಾರಣೆಯೊಂದಿಗೆ ಸೋತ್ರೆ ಪ್ಲೇ ಆಫ್ ಕನಸು ಭಗ್ನಗೊಳ್ಳಲಿದೆ.
ಯಾಕಂದ್ರೆ ಸನ್ ರೈಸರ್ಸ್ ಹೈದ್ರಬಾದ್ ತಂಡ ಮುಂಬೈ ವಿರುದ್ಧ ಗೆದ್ರೆ ಎಲ್ಲವೂ ಉಲ್ಟಾಪಲ್ಟಾವಾಗಲಿದೆ. ಅದಕ್ಕಾಗಿ ಕಾಯಬೇಕು.
ಆದ್ರೆ ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾಯುವಷ್ಟು ತಾಳ್ಮೆಯಿಲ್ಲ. ಗೆದ್ದು ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಉಭಯ ತಂಡಗಳು ಹೋರಾಟ ನಡೆಸಲಿವೆ.
ಆರ್ ಸಿಬಿ ಸಂಭವನೀಯ ತಂಡ
ವಿರಾಟ್ ಕೊಹ್ಲಿ (ನಾಯಕ), ಎಬಿಡಿ ವಿಲಿಯರ್ಸ್, ದೇವದತ್ತ್ ಪಡಿಕ್ಕಲ್, ಜೋಶ್ ಫಿಲಿಪ್ಪೆ, ವಾಷಿಂಗ್ಟನ್ ಸುಂದರ್, ಗುರ್ ಕೀರತ್ ಸಿಂಗ್ ಮಾನ್, ಯುಜುವೇಂದ್ರ ಚಾಹಲ್, ನವದೀಪ್ ಸೈನಿ, ಮಹಮ್ಮದ್ ಸಿರಾಜ್, ಇಸುರು ಉಡಾನೆ, ಶಿವಮ್ ದುಬೆ. ಕ್ರಿಸ್ ಮೋರಿಸ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ರಿಷಬ್ ಪಂತ್, ಮಾರ್ಕಸ್ ಸ್ಟೋನಿಸ್, ಅಕ್ಷರ್ ಪಟೇಲ್, ಕಾಗಿಸೊ ರಬಾಡ, ಶಿಮ್ರೋನ್ ಹೆಟ್ಮೇರ್, ಹರ್ಷೆಲ್ ಪಟೇಲ್, ಆರ್. ಅಶ್ವಿನ್, ಆನ್ರಿಚ್ ನೊರ್ಟೆಝ್,