ಕೊಹ್ಲಿ ಬ್ಯಾಟ್ ನಿಂದ ರನ್ ಪ್ರವಾಹ : ಗೌತಿ ಭವಿಷ್ಯ Gautham saaksha tv
ಮುಂಬೈ : ಟಿ 20 ಮತ್ತು ಏಕದಿನ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ರನ್ ಪ್ರವಾಹ ಹರಿಯಲಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದಾರೆ.
ಸದ್ಯ ಟೀಂ ಇಂಡಿಯಾದಲ್ಲಿ ರೋಹಿತ್ ಯುಗ ಆರಂಭವಾಗಿದೆ. ಸೀಮಿತ ಓವರ್ ಗಳ ಕ್ರಿಕೆಟ್ ಗೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರೆಯಲಿದ್ದಾರೆ.
ಏಕದಿನ ಕ್ರಿಕೆಟ್ ನಾಯಕತ್ವದಲ್ಲಿ ಮುಂದುವರೆಯುವುದಾಗಿ ಹೇಳಿದ್ದರೂ ವಿರಾಟ್ ರಿಂದ ಬಿಸಿಸಿಐ ನಾಯಕತ್ವ ಕಿತ್ತುಕೊಂಡ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಕೆಲವರು ವಿರಾಟ್ ಪರ ಬ್ಯಾಟ್ ಬೀಸಿದರೇ ಇನ್ನೂ ಕೆಲವರು ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ. ಈ ವಿಚಾರವಾಗಿ ಇದೀಗ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಆಸಕ್ತಿಕರ ಹೇಳಿಕೆಗಳನ್ನು ನೀಡಿದ್ದಾರೆ.
ನಾವು ಶೀಘ್ರದಲ್ಲಿಯೇ ಹಳೆ ವಿರಾಟ್ ರನ್ನ ನೋಡಲಿದ್ದೇವೆ ಎಂದು ಗೌತಿ ಭವಿಷ್ಯ ನುಡಿದ್ದಾರೆ.ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಗೌತಮ್ ಗಂಭೀರ್, ವಿರಾಟ್ ಗೆ ನಾಯಕತ್ವದ ಹೊರೆ ಇಲ್ಲದ ಕಾರಣ ಬ್ಯಾಟರ್ ಆಗಿ ಮಿಂಚಲಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ರೋಹಿತ್ ಒಬ್ಬ ಬ್ಯಾಟರ್ ಆಗಿ ಯಾವ ಪಾತ್ರವನ್ನ ನಿರ್ವಹಿಸಲಿದ್ದರೋ ಅದೇ ಪಾತ್ರವನ್ನ ವೈಟ್ ಬಾಲ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ನಿರ್ವಹಿಸಲಿದ್ದಾರೆ ಎಂದಿದ್ದಾರೆ.
ನಿಜ ಹೇಳಬೇಕಂದರೇ ವಿರಾಟ್ ಈಗ ನಾಯಕನಾಗಿ ಇರುವುದಿಲ್ಲ ಅಷ್ಟೆ. ಆದರೆ ಒಬ್ಬ ಬ್ಯಾಟರ್ ಆಗಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಇದು ವೈಯುಕ್ತಿಕವಾಗಿ ವಿರಾಟ್ ಗೂ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಿದೆ.
ನಾಯಕತ್ವದ ಹೊರೆಯಿಂದ ಮುಕ್ತರಾದ ವಿರಾಟ್, ಈಗ ಹೆಚ್ಚು ಮುಕ್ತವಾಗಿ ಬ್ಯಾಟ್ ಬೀಸಬಲ್ಲರು. ಇದು ಅವರನ್ನ ಹೆಚ್ಚು ಅಪಾಯಕಾರಿ ಬ್ಯಾಟರ್ ಮಾಡಲಿದೆ ಎಂದು ಗಂಭೀರ್ ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ.
ಟಿ 20, ಏಕದಿನ, ಟೆಸ್ಟ್ ಗಳಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದಾರೆ. ಈಗ ವಿರಾಟ್ ನಲ್ಲಿರುವ ಅತ್ಯುತ್ತಮ ಬ್ಯಾಟರ್ ಅನ್ನ ದೇಶ ನೋಡಲಿದೆ. ಕ್ಯಾಪ್ಟನ್ ಆಗಿರಲಿ.. ಇಲ್ಲದಿರಲಿ ಆತನಲ್ಲಿನ ಬ್ಯಾಟರ್ ಆಗೇ ಇರುತ್ತಾನೆ ಎಂದು ಕೊಹ್ಲಿಯನ್ನು ಗೌತಮ್ ಹೊಗಳಿದ್ದಾರೆ.