ರಷ್ಯಾ: 28 ಮಂದಿ ಪ್ರಯಾಣಿಸುತ್ತಿದ್ದ ಎಎನ್-26 ವಿಮಾನ ನಾಪತ್ತೆ

1 min read

ರಷ್ಯಾ: 28 ಮಂದಿ ಪ್ರಯಾಣಿಸುತ್ತಿದ್ದ ಎಎನ್-26 ವಿಮಾನ ನಾಪತ್ತೆ

ರಷ್ಯಾ :  28 ಮಂದಿ ಪ್ರಯಾಣಿಸುತ್ತಿದ್ದ ರಷ್ಯಾದ ಎಎನ್-26 ವಿಮಾನ ರಷ್ಯಾದ ಪೂರ್ವಭಾಗದಿಂದ ಧೀಡೀರ್ ನಾಪತ್ತೆಯಾಗಿದ್ದು, ಆತಂಕಕಾರಿ ಮಾಹಿತಿಯನ್ನ ದೇಶ್ ದೇಶದ ತುರ್ತು ಸಚಿವಾಲಯ ಹಂಚಿಕೊಂಡಿದೆ.

ಎಎನ್ 26 ವಿಮಾನ ಭೂಸ್ಪರ್ಶ ಮಾಡುವ ಪ್ರಯತ್ನದಲ್ಲಿರುವ ವೇಳೆಯಲ್ಲಿಯೇ ಸಂಪರ್ಕ ಕಳೆದುಕೊಂಡಿರುವುದಾಗಿ ವರದಿ ಹೇಳಿದೆ. ಈ ವಿಮಾನ ಪೆಟ್ರೋಪವ್ಲೊವಸ್ಕ್ ನಿಂದ ಕಾಮ್ಚಾಟ್ಸಿಕಿಯಲ್ಲಿರುವ ಪಲಾನಾ ಗ್ರಾಮದ ಮಾರ್ಗದ ಸಮೀಪದಲ್ಲಿರುವಾಗ ವಾಯು ಸಂಚಾರ ನಿಯಂತ್ರಣ ವಿಭಾಗದ ಜತೆಗಿನ ಸಂಪರ್ಕ ಕಳೆದುಕೊಂಡಿತ್ತು ಎಂದು ಸಚಿವಾಲಯ ವಿವರಿಸಿದೆ.

ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ಮತ್ತು ಶೋಧಕಾರ್ಯಾಚರಣೆ ತಂಡ ತೆರಳುತ್ತಿದ್ದಾರೆ. ವಿಮಾನದಲ್ಲಿ 6 ಮಂದಿ ಸಿಬಂದಿಗಳು ಹಾಗೂ 22 ಮಂದಿ ಪ್ರಯಾಣಿಕರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಶೇ.65 ಆಸನ ಸಾಮರ್ಥ್ಯದೊಂದಿಗೆ  ದೇಶೀಯ ವಿಮಾನಯಾನ  ಅವಕಾಶ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd