Russia_Ukraine War: ಉಕ್ರೇನ್ ನ ಶಾಲೆಯೊಂದರ ಮೇಲೆ ರಷ್ಯಾ ಬಾಂಬ್ ದಾಳಿ

1 min read
Ukraine Saaksha Tv

ಉಕ್ರೇನ್ ನ ಶಾಲೆಯೊಂದರ ಮೇಲೆ ರಷ್ಯಾ ಬಾಂಬ್ ದಾಳಿ

ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭಾಗಿ 74 ದಿನಗಳು ಕಳೆದಿದ್ದು, ರಷ್ಯಾ ಉಕ್ರೇನ್ ನ ಬಿಲೋಹೊರಿವ್ಕಾ ಗ್ರಾಮದ ಶಾಳೆಯೊಂದರ ಮೇಲೆ ದಾಳಿ ಮಾಡಿದೆ.

ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅವರೂ ಕೂಡಾ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸುಮಾರು 90 ಜನರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಶನಿವಾರ ಮಧ್ಯಾಹ್ನ ರಷ್ಯಾ ಬಾಂಬ್ ಹಾಕಿದೆ. ಈ ವೇಳೆ 30 ಜನರನ್ನು ರಕ್ಷಿಸಲಾಗಿದೆ. ಅವರಲ್ಲಿ 7 ಜನರು ಗಾಯಗೊಂಡಿದ್ದಾರೆ ಎಂದು ಲುಹಾನ್ಸ್ಕ್ ಪ್ರದೇಶದ ಗರ್ವನರ್ ಸೆರ್ಹಿ ಗೈಡೈ ಟೆಲಿಗ್ರಮ್ ಮೆಸೇಜಿಂಗ್ ಅಪ್ಲಿಕೇಶನ್ ನಲ್ಲಿ ತಿಳಿಸಿದ್ದಾರೆ.

ಹಾಗೇ ಕಟ್ಟಡಗಳ ಅವಶೇಗಳಡಿಯಲ್ಲಿ 60 ಜನರು ಸಿಲುಕಿ ಹಾಕಿಕೊಂಡಿದ್ದು. ಅವರ ಮೃತದೇಹಗಳು ಲಭ್ಯವಾಗುವವರೆಗೂ ಈ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಗೈಡೈ ತಿಳಿಸಿದ್ದಾರೆ.

ಇನ್ನೂ ವ್ಲಾದಿಮರ್ ಪುಟಿನ್ ಯುದ್ಧ ಘೋಷಿಸಿ ಇಷ್ಟು ದಿನಗಳು ಕಳೆದರೂ ಉಭಯ ದೇಶಗಳ ನಡುವೆ ಶಾಂತಿಯ ಯಾವುದೇ ಲಕ್ಷಣಗಳಲ್ಲಿ. ಮುತ್ತಿಗೆ ಹಾಕಿದ ಮರಿಪೋಲ್ ಬಂದರು ನಗರದಲ್ಲಿರುವ ಅಜೋವ್ ಸ್ಟಾಲ್ ಉಕ್ಕಿನ ಸ್ಥಾವರದಿಂದ ಎಲ್ಲಾ ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸಲಾಗಿದೆ ಎಂದು ಕೈವ್ ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd