ಭಾರತಕ್ಕೆ ರಷ್ಯಾ ಬಹಿರಂಗ ಬೆಂಬಲ : ಚೀನಾ, ಪಾಕ್ ಗೆ ಮುಖಭಂಗ
ನವದೆಹಲಿ: ಶಾಂಘೈ ಸಹಕಾರ ಸಂಸ್ಥೆ ವೇದಿಕೆಯಲ್ಲಿ ಭಾರತ, ಪಾಕ್ ನಡುವಿನ ವಿಷಯ ಎತ್ತಲು ಮುಂದಾದ ಚೀನಾ ಹಾಗೂ ಪಾಕ್ ಗೆ ಮುಖಭಂಗವಾಗಿದೆ.
ದ್ವಿಪಕ್ಷೀಯ ವಿಚಾರಗಳನ್ನು ಎತ್ತಬಾರದು ಎಂದು ಹೇಳುವ ಮೂಲಕ ರಷ್ಯಾ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿದೆ.
ವರ್ಚುಯಲ್ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಪಾಕ್ ಭಾರತ ಹಾಗೂ ಪಾಕಿಸ್ತಾನದ ನಡುವಿನ ವಿಚಾರದ ಬಗ್ಗೆ ಮಾತನಾಡಲು ಮುಂದಾಗಿ ಮುಖಭಂಗ ಮಾಡಿಸಿಕೊಂಡಿರೋದಾಗಿ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿರುವ ರಷ್ಯಾದ ಡೆಪ್ಯುಟಿ ರಾಯಭಾರಿ ರೋಮನ್ ಎನ್ ಬಾಬುಷ್ಕಿನ್ ಅವರು, ವಿಯೋನ್ ಪ್ರಶ್ನೆಗೆ ಉತ್ತರಿಸುತ್ತ, ಇದು ಎಸ್ ಸಿಒ ಚಾರ್ಟರ್ ಮತ್ತು ಎಸ್ ಸಿಒ ಮೂಲ ದಾಖಲೆಗಳ ಭಾಗವಾಗಿದ್ದು, ಇಲ್ಲಿ ದ್ವಿಪಕ್ಷೀಯ ವಿಚಾರ ಎಳೆದು ತರುವುದು ನಮ್ಮ ಅಜೆಂಡಾದಲ್ಲಿ ಇಲ್ಲ. ಇದನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಖಡಕ್ ಸಂದೇಶ ರವಾನಿಸಿದ್ದಾರೆ.
ಸತತ ಆರ್ಥಿಕ ಹಿಂಜರಿತ | `ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಮೋದಿ’
ಅಲ್ಲದೇ ಶಾಂಘೈ ಸಹಕಾರ ವೇದಿಕೆಯ ಮುಖ್ಯವಾಗಿ ಪ್ರಾದೇಶಿಕ ಸಮಸ್ಯೆ, ಆರ್ಥಿಕ ಚೇತರಿಕೆ, ಹಣಕಾಸು, ಮಾನವೀಯತೆಯ ಸಹಭಾಗಿತ್ವ ಮುಂತಾದವು ಸೇರಿವೆ.
ಈ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಚಾರಗಳ ಬಗ್ಗೆ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳುವ ಮೂಲಕ ರಷ್ಯಾ ಭಾರತವನ್ನ ಬೆಂಬಲಿಸಿದೆ.
ಅಷ್ಟೇ ಅಲ್ಲ ನಮ್ಮ ಸ್ಥಾನ ಸ್ಥಿರವಾಗಿದ್ದು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ಮುಂದೆ ಇಂತಹ ವರ್ತನೆ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯಿರೋದಾಗಿ ತಿಳಿಸಿರೋದಾಗಿ ಮಾಹಿತಿ ಸಿಕ್ಕಿದೆ.
ಈ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
.Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel