ಭಾರತಕ್ಕೆ ಬರಲಿದೆ ಗೇಮ್ ಚೇಂಜರ್ ಎಸ್ – 400 ವೆಪನ್

1 min read

ಭಾರತಕ್ಕೆ ಬರಲಿದೆ ಗೇಮ್ ಚೇಂಜರ್ ಎಸ್ 400 ವೆಪನ್

ಕ್ಷಿಪಣಿ ನಿರೋಧಕ ವ್ಯವಸ್ಥೆಯ ಟಾಪ್ ವೆಪನ್  ಯದ್ಧ ಸಂದರ್ಭದಲ್ಲಿ ಗೇಮ್ ಚೇಂಜರ್ ಅಂತಾನೆ ಕರೆಯಿಸಿಕೊಳ್ಳುವ  ರಷ್ಯ ನಿರ್ಮಿತ S -400 ಕ್ಷಿಪಣಿ ನಿರೋಧಕ ವ್ಯವಸ್ಥೆಯ ಪೂರೈಕೆಯು  ಆರಂಭವಾಗಿದೆ.

ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯ ಸರಬರಾಜು ಪ್ರಾರಂಭವಾಗಿದೆ ಮತ್ತು ನಿಗದಿತ ಸಮಯಕ್ಕೆ ತಲುಪುತ್ತಿದೆ” ಎಂದು ಫೆಡರಲ್ ಸರ್ವೀಸ್ ಫಾರ್ ಮಿಲಿಟರಿ-ಟೆಕ್ನಿಕಲ್ ಕೋಆಪರೇಷನ್ (ಎಫ್‌ಎಸ್‌ಎಂಟಿಸಿ) ನಿರ್ದೇಶಕ ಡಿಮಿಟ್ರಿ ಶುಗೇವ್ ಹೇಳಿದ್ದಾರೆ.

S-400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ಶತ್ರು ಯುದ್ಧ ವಿಮಾನಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಆಕಾಶದಲ್ಲೆ ತಡೆಯುವ ಸಾಮರ್ಥ್ಯ ಭಾರತಕ್ಕೆ ಸಿಗಲಿದೆ. ಲಡಾಖ್ ಸೆಕ್ಟರ್‌ನಲ್ಲಿ ಭಾರತ ಚೀನಾ ನಡುವೆ  ಬಿಕ್ಕಟ್ಟು ಉದ್ಬವಿಸಿರುವ  ಸಮಯದಲ್ಲಿ (IAF) S-400 ಸಿಸ್ಟಮ್‌ ಮೊದಲ ಘಟಕ ಭಾರತೀಯ ವಾಯುಪಡೆಗೆ ಸೇರುತ್ತಿದೆ.

ಚೀನಾ ಈಗಾಗಲೇ ಎರಡು S-400 ಸ್ಕ್ವಾಡ್ರನ್‌ಗಳನ್ನು ಕ್ರಮವಾಗಿ ಲಡಾಖ್ ಮತ್ತು ಅರುಣಾಚಲ ಪ್ರದೇಶದಾದ್ಯಂತ ಟಿಬೆಟ್‌ನ ನಗಾರಿ ಗಾರ್ ಗುನ್ಸಾ ಮತ್ತು ನೈಂಗ್‌ಚಿ ವಾಯುನೆಲೆಯಲ್ಲಿ ನಿಯೋಜಿಸಿದೆ.

ಈ ವ್ಯವಸ್ಥೆಯನ್ನು ಮೊದಲು ದೇಶದ ಪಶ್ಚಿಮ ಗಡಿಗೆ ಸಮೀಪವಿರುವ ಸ್ಥಳದಲ್ಲಿ ನಿಯೋಜಿಸಲಾಗುವುದು, ಅಲ್ಲಿಂದ ಪಾಕಿಸ್ತಾನ ಮತ್ತು ಚೀನಾ ಎರಡೂ ಗಡಿಯ ಕಡೆಗೆ ಕಣ್ಣ್ಗಾವಲಿಡಬಹುದು ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd