ಕೈವ್ ವಶಮಾಡಿಕೊಳ್ಳಲು ಹೆಣಗಾಡುತ್ತಿರುವ ರಷ್ಯಾ – 28 ನೆ ದಿನಕ್ಕೆ ಕಾಲಿಟ್ಟ ಯುದ್ಧ
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ 27 ದಿನಗಳು ಕಳೆದಿವೆ. ಇಷ್ಟು ದಿನಗಳ ನಂತರವೂ ರಷ್ಯಾದ ಸೈನ್ಯವು ಭೂ ಮಾರ್ಗದ ಮೂಲಕ ಮುನ್ನಡೆಯಲು ಹೆಣಗಾಡುತ್ತಿದೆ. ದಕ್ಷಿಣ ಉಕ್ರೇನ್‌ನಲ್ಲಿರುವ ಉಕ್ರೇನಿಯನ್ ಮಿಲಿಟರಿಯಿಂದ ನಿರಂತರವಾಗಿ ಪ್ರತಿದಾಳಿಯನ್ನ ಎದುರಿಸುತ್ತಿದೆ. ಜಾಗತಿಕ ವೇದಿಕೆಗಳಲ್ಲಿ ಯುದ್ಧವು ಪರಿಣಾಮ ವ್ಯಕ್ತವಾಗುತ್ತಿರುವ ಹಾಗೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೋಪವು ಹೆಚ್ಚಾಗುತ್ತಿದೆ.
ಪುಟಿನ್ ಈಗ ಸಣ್ಣ ಪರಮಾಣು ದಾಳಿ ನಡೆಸಬಹುದು ಎಂದು ಅಮೆರಿಕದ ತಜ್ಞರು ಭಯಪಡುತ್ತಿದ್ದಾರೆ. ಪುಟಿನ್ ಈಗಾಗಲೇ ಪರಮಾಣು ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ತಮ್ಮ ಪರಮಾಣು ತುಕಡಿಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿಟ್ಟಿದ್ದಾರೆ.
ಬೆಲ್ಜಿಯಂನಲ್ಲಿ ನ್ಯಾಟೋ ಸಭೆ
ಈ ವಿಷಯದ ಕುರಿತು, NATO ಈ ವಾರ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಭೇಟಿಯಾಗಲಿದೆ, ಇದರಲ್ಲಿ US ಅಧ್ಯಕ್ಷ ಜೋ ಬಿಡೆನ್ ಸಹ ಭಾಗವಹಿಸಲಿದ್ದಾರೆ. ರಷ್ಯಾ ರಾಸಾಯನಿಕ, ಜೈವಿಕ, ಸೈಬರ್ ಅಥವಾ ಪರಮಾಣು ಶಸ್ತ್ರಾಸ್ತ್ರಗಳತ್ತ ತಿರುಗಿದರೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನೂ ಸಭೆಯಲ್ಲಿ ಚರ್ಚಿಸಲಾಗುವುದು. ಷ್ಯಾದ ಪಡೆಗಳು ಈಗಾಗಲೇ ಪರಮಾಣು ದಾಳಿಗೆ ತಯಾರಿ ನಡೆಸುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಪುಟಿನ್ ಅವರು ಪರಮಾಣು ಶಸ್ತ್ರಾಸ್ತ್ರಗಳಿಗಿಂತ ವಿಭಿನ್ನ ರೀತಿಯ ಶಸ್ತ್ರಸ್ತ್ರಾಗಳನ್ನ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
Russia struggling to conquer Kyiv – 28th day of battle