ರಷ್ಯಾ –ಉಕ್ರೇನ್ ಬಿಕ್ಕಟ್ಟು : ಜಗತ್ತಿಗೆ ತಲೆದೂರಲಿದೆ ರಸಗೊಬ್ಬರದ ಸಮಸ್ಯೆ…

1 min read

ರಷ್ಯಾ –ಉಕ್ರೇನ್ ಬಿಕ್ಕಟ್ಟು : ಜಗತ್ತಿಗೆ ತಲೆದೂರಲಿದೆ ರಸಗೊಬ್ಬರದ ಸಮಸ್ಯೆ…

ಉಕ್ರೇನ್ –  ರಷ್ಯಾ ನಡುವಿನ ಯುದ್ಧದಿಂದಾಗಿ ಈಗಾಗಲೇ ಹಲವು ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿರುವ ಜಗತ್ತಿನ ಮುಂದೆ ರಸಗೊಬ್ಬರ ಕೊರತೆಯ ಸಮಸ್ಯೆಯೂ ತಲೆದೋರಿದೆ. ನಿಕಲ್, ಸಿಲಿಕಾನ್ ಚಿಪ್ ಮತ್ತು ಮರದ ಕೊರತೆಯಿಂದಾಗಿ ಈಗಾಗಲೇ ಪ್ರಪಂಚದಾದ್ಯಂತ ಉದ್ಯಮಗಳು ತೊಂದರೆಗೊಳಗಾಗಿವೆ. ಇದೀಗ ಕೃಷಿ ಲೋಕಕ್ಕೆ ಹೊಸ ಸವಾಲು ಎದುರಾಗಿದೆ.

ಪ್ರಪಂಚದಾದ್ಯಂತದ ಮಾರುಕಟ್ಟೆಗಳಲ್ಲಿ ರಸಗೊಬ್ಬರಗಳ ಬೆಲೆಗಳು ವೇಗವಾಗಿ ಹೆಚ್ಚುತ್ತಿವೆ. ಇದು ಆಹಾರ ಪದಾರ್ಥಗಳ ಬೆಲೆ ಮೇಲೆ ಪರಿಣಾಮ ಬೀರುತ್ತದೆ, ಇದೇ ರೀತಿ ಮುಂದುವರಿದರೆ ಜಗತ್ತು ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಾರಜನಕ-ರಂಜಕ ಮತ್ತು ಪೊಟ್ಯಾಸಿಯಮ್ (APK) ಯುಕ್ತ ಗೊಬ್ಬರಗಳ ಬೆಲೆ ದುಬಾರಿಯಾಗಿದೆ. ಸೇರಿವೆ. ಈ ವರ್ಷದ ಜನವರಿಯಲ್ಲಿ, NPK ರಾಸಾಯನಿಕ ಗೊಬ್ಬರದ ಬೆಲೆ  125%  ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಅಂತರಾಷ್ಟ್ರೀಯ ಸಂಸ್ಥೆ- ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (IFPRI) ತಿಳಿಸಿದೆ.

ರಷ್ಯಾದ ನೈಸರ್ಗಿಕ ಅನಿಲದ ಮೇಲೆ ಯುರೋಪಿಯನ್ ರಾಷ್ಟ್ರಗಳು ಹೇರಿದ ನಿಷೇಧದಿಂದಾಗಿ ಪರಿಸ್ಥಿತಿಯು ಹದಗೆಟ್ಟಿದೆ. ನೈಸರ್ಗಿಕ ಅನಿಲವನ್ನು ಅನೇಕ ರಸಗೊಬ್ಬರಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ರಸಗೊಬ್ಬರ ಉತ್ಪಾದಕ ಯಾರಾ ಇಂಟರ್‌ನ್ಯಾಶನಲ್‌ನ ಸಿಇಒ ಟೋರೆ ಹೋಲ್ಸಿಥರ್ ಈ ವಾರದ ಸೆಮಿನಾರ್‌ನಲ್ಲಿ ಹೇಳಿರುವ ಪ್ರಕಾರ  “ಈಗ ನಾವು ಅಪಾಯಕಾರಿ ಪರಿಸ್ಥಿತಿಯನ್ನು ತಲುಪಿದ್ದೇವೆ. ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರಗಳು ರೈತರ ಕೈಸೇರಿದರೆ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಇದು ಅಪೌಷ್ಟಿಕತೆ, ರಾಜಕೀಯ ಅಸ್ಥಿರತೆ ಮತ್ತು ಅಂತಿಮವಾಗಿ ಮಾನವ ಜೀವಕ್ಕೆ ಅಪಾಯಕ್ಕೆ ಕಾರಣವಾಗುತ್ತದೆ. ಎಂದಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd