ರಷ್ಯಾ – ಉಕ್ರೇನ್ ಬಿಕ್ಕಟ್ಟು | ತುರ್ತು ಸಭೆ ಕರೆದ ವಿಶ್ವಸಂಸ್ಥೆ Saaksha Tv
UNSCO: ಉಕ್ರೇನ್ ಬಿಕ್ಕಟ್ಟು ಉಲ್ಬಣಗೊಂಡಿದ್ದು ವಿಶ್ವಸಂಸ್ಥೆಯು ಇಂದು ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದೆ. ಅಮೆರಿಕ ಕಾಲಮಾನದ ಪ್ರಕಾರ ಸೋಮವಾರ ರಾತ್ರಿ 9ಕ್ಕೆ ಸಭೆ ಕರೆದಿದ್ದು, ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು ಹೆಚ್ಚುತ್ತಿದೆ.
ಡೊನೆಟ್ಕ್ ಮತ್ತು ಲುಸಾಂಕ್ ಪ್ರದೇಶಗಳು ಉಕ್ರೇನ್ ಗಡಿಯ ಒಳಗಡೆ ಇದ್ದರು, ಈ ಪ್ರದೇಶಗಳು ರಷ್ಯಾ ಬಂಡುಕೋರರ ಹಿಡಿತದಲ್ಲಿವೆ. ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ರಷ್ಯಾ ಸೆಣಸಾಡುತ್ತಿದ್ದು, ಇಲ್ಲಿನ ಬಂಡುಕೋರರಿಗೆ ಪ್ರತ್ಯೇಕ ಸರ್ಕಾರ ರಚನೆಗೆ ರಷ್ಯಾ ಬೆಂಬಲ ನೀಡುತ್ತಿದೆ. ಪ್ರತ್ಯೇಕ ಸರಕಾರ ರಚನೆ ಮತ್ತು ಈ ಪ್ರದೇಶಗಳ ಮೇಲೆ ಆರ್ಥಿಕ ಹೂಡಿಕೆಗೆ ಅಮೆರಿಕ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿದೆ.
ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬಂಡುಕೋರರ ಹಿಡಿತದಲ್ಲಿರುವ ಡೊನೆಟ್ಕ್, ಲುಸಾಂಕ್ ಪ್ರದೇಶದಲ್ಲಿ ಉಕ್ರೇನ್ ಸೈನಿಕರು ಮತ್ತು ಬಂಡುಕೋರರ ಮಧ್ಯೆ ಸಂಘರ್ಷ ನಡೆಯುತ್ತಿರುತ್ತದೆ. ಈ ಸಂಭಂದ ಅಲ್ಲಿ ‘ಶಾಂತಿಪಾಲನಾ ಕಾರ್ಯಾಚರಣೆ’ ಪ್ರಾರಂಭಿಸಲು ತನ್ನ ಸೈನ್ಯಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಉಕ್ರೇನ್‌ನ ಡೊನೆಟ್ಕ್ ಪೀಪಲ್ಸ್ ರಿಪಬ್ಲಿಕ್ (ಡಿಎನ್‌ಆರ್) ಮತ್ತು ಲುಸಾಂಕ್ ಪೀಪಲ್ಸ್ ರಿಪಬ್ಲಿಕ್ (ಎಲ್‌ಎನ್‌ಆರ್) ಪ್ರದೇಶದಲ್ಲಿ ಹೊಸ ಹೂಡಿಕೆ, ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.
ಎರಡು ರಾಷ್ಟ್ರಗಳ ನಿರ್ಧಾರದಿಂದುಂಟಾಗುವ ಅಪಾಯವನ್ನು ತಡೆಯಲು ವಿಶ್ವಸಂಸ್ಥೆ ತುರ್ತಾಗಿ ಭದ್ರತಾ ಮಂಡಳಿಯ ಸಭೆ ಕರೆದಿದೆ.