ರಷ್ಯಾ-ಉಕ್ರೇನ್ ಯುದ್ಧ | ರಷ್ಯಾದಿಂದ ಹೊರ ನಡೆದ ಹಲವು ಕಂಪನಿಗಳು
ರಷ್ಯಾ: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಎರಡು ತಿಂಗಳು ಆಗುತ್ತಾ ಬಂದಿದೆ. ಉಕ್ರೇನ್ ನ ರಷ್ಯಾದಾಳಿಯಿಂದ ಸಂಪೂರ್ಣವಾಗಿ ನಲುಗಿ ಹೋಗಿದ್ದು, ರಷ್ಯಾ ಉಕ್ರೇನ್ ನಲ್ಲಿ ಭೀಕರ ಹಿಂಸಾತ್ಮಕ ಕೃತ್ಯ ಎಸಗುತ್ತಿದೆ ಎಂದು ವರದಿಗಳು ಪ್ರಸಾರವಾಗಿವೆ. ಅದೇ ರಷ್ಯಾಕ್ಕೂ ಕೂಡಾ ಜಾಗತಿಕ ಮಟ್ಟದಲ್ಲೂ ಹೊಡೆತ ಬಿದ್ದಿದೆ. ರಷ್ಯಾದ ವಸ್ತುಗಳುನ್ನು, ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಯುರೋಪ ಖಂಡದ ಕೆಲವು ದೇಶಗಳು ಮತ್ತು ಅಮೆರಿಕ ನಿರ್ಧರಿಸಿದೆ.
ಈ ಮಧ್ಯೆ ರಷ್ಯಾಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು, ರಷ್ಯಾದಲ್ಲಿನ ಐಟಿ ಕಂಪನಿಗಳನ್ನು ರಷ್ಯಾವನ್ನು ತೊರೆದು ಹೊರನಡೆಯುತ್ತಿವೆ. ಪ್ರತಿಷ್ಠಿತ ಐಟಿ ಮತ್ತು ಸಾಫ್ಟ್ ವೇರ್ ಕಂಪನಿಗಳಾದ ಒರಾಕಲ್ ಕಾರ್ಪ್ ಮತ್ತು SAP SE ಮತ್ತು ಇನ್ಪೋಸಿಸ್ ಸೇರಿದಂತೆ ಹಲವಾರು ಕಂಪನಿಗಳು ರಷ್ಯಾದಲ್ಲಿನ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿ, ದೇಶದಿಂದ ಹೊರ ನಡೆದಿವೆ.
ಅಲ್ಲದೇ ಇತ್ತೀಚೆಗೆ IBM ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿತು, ಹಾಗೇ ಮೈಕ್ರೋಸಾಫ್ಟ್ ಮತ್ತು ಆಪಲ್ ಮಾರಾಟವನ್ನು ನಿಲ್ಲಿಸಿವೆ. ರಷ್ಯಾಕ್ಕೆ “ಎಲ್ಲಾ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಸಾಗಣೆಯನ್ನು ಸ್ಥಗಿತಗೊಳಿಸಿದೆ” ಮತ್ತು ದೇಶದಲ್ಲಿ ಪ್ಲೇಸ್ಟೇಷನ್ ಸ್ಟೋರ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಸೋನಿ ಹೇಳಿದೆ.
ನೆಟ್ಫ್ಲಿಕ್ಸ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿವುದರ ಜೊತೆಗೆ ದೇಶದಲ್ಲಿ ಭವಿಷ್ಯದ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಗೂಗಲ್ ಕೂಡ ತನ್ನ ಸರ್ಚ್ ಕಾರ್ಯ ಮತ್ತು ಯೂಟ್ಯೂಬ್ ಉತ್ಪನ್ನಗಳನ್ನು ಒಳಗೊಂಡಂತೆ ಜಾಹೀರಾತನ್ನು ಸ್ಥಗಿತಗೊಳಿಸಿದೆ.
RT ಮತ್ತು ಸ್ಪುಟ್ನಿಕ್ ಸೇರಿದಂತೆ ರಷ್ಯಾದ ರಾಜ್ಯ-ನಿಧಿಯ ಮಾಧ್ಯಮದೊಂದಿಗೆ ಸಂಬಂಧಿಸಿದ ಎಲ್ಲಾ ಚಾನಲ್ಗಳನ್ನು ಜಾಗತಿಕವಾಗಿ ನಿರ್ಬಂಧಿಸುವುದಾಗಿ YouTube ಹೇಳಿದೆ.
ಇದರ ನಡುವೆ ಪ್ರಧಾನ ಮಂತ್ರಿ ಮಿಖಾಯಿಲ್ ಮಿಶುಸ್ಟಿನ್ ಈ ಹಿಂದೆ ವಿದೇಶಿ ಕಂಪನಿಗಳು ತಮ್ಮ ವ್ಯವಹಾರಗಳನ್ನು ರಷ್ಯಾದಲ್ಲಿ ಕೆಲಸ ಮಾಡಲು ಅನುಮತಿಸಬೇಕು, ದೇಶವನ್ನೂ ತೊರೆಯಲು ಕಂಪನಿಗಳು ನಿರ್ಧರಿಸಿದರೂ ಸಹ, ರಷ್ಯಾದ ನಾಗರಿಕರಿಗೆ ಉದ್ಯೋಗಗಳನ್ನು ಕಾಪಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದರು.