Russia-Ukraine War: ರಷ್ಯಾ ಉಡಾಯಿಸಿದ 64 ಕ್ಷಿಪಣಿಗಳಲ್ಲಿ 54 ಕ್ಷಿಪಣಿ ಹಿಮ್ಮೆಟ್ಟಿಸಿದ್ದೇವೆ – ಉಕ್ರೇನ್…
ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ. ಇಂದು ಬೆಳಗ್ಗೆ ರಷ್ಯಾ, ಉಕ್ರೇನ್ ಮೇಲೆ ಬೃಹತ್ ಕ್ಷಿಪಣಿ ದಾಳಿ ನಡೆಸಿದೆ. ಒಟ್ಟು 69 ಕ್ಷಿಪಣಿಗಳನ್ನ ಉಡಾಯಿಸಲಾಯಿತು ಅವುಗಳಲ್ಲಿ 54 ಕ್ಷಿಪಣಿಗಳನ್ನ ಹಿಮ್ಮೆಟ್ಟಿಸಿದ್ದೇವೆ ಎಂದು ಉಕ್ರೇನ್ ಹೇಳಿದೆ.
“ಆಕ್ರಮಣಕಾರಿ ರಷ್ಯಾ ಇಂದು ನಮ್ಮ ದೇಶದ ಮೇಲೆ ವಾಯು ಮತ್ತು ಸಮುದ್ರ ಮೇಲ್ಮೈ ಕ್ರೂಸ್ ಕ್ಷಿಪಣಿಗಳು ಮತ್ತು ವಿಮಾನ ವಿರೋಧಿ ಕ್ಷಿಪಣಿಗಳ ಮೂಲಕ ದಾಳಿ ಮಾಡಲು ಪ್ರಯತ್ನಿಸಿದೆ” ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದರು. ಪಶ್ಚಿಮದ ತಂತ್ರಜ್ಞಾನದ ಸಹಾಯದಿಂದ ಉಕ್ರೇನ್ ರಷ್ಯಾದ ದಾಳಿಯನ್ನು ಎದುರಿಸುತ್ತಿದೆ ಎಂದು ತಿಳಿದಿದೆ.
ಕೆಲವು ಗಂಟೆಗಳ ಹಿಂದೆ ರಷ್ಯಾ ಉಕ್ರೇನ್ ಮೇಲೆ ದೊಡ್ಡ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿತ್ತು. ವಾರಗಳಲ್ಲಿ ರಷ್ಯಾ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ. ಇದರಿಂದಾಗಿ ಉಕ್ರೇನ್ನ ಹಲವು ಭಾಗಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಇಂದು ಬೆಳಿಗ್ಗೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ರಷ್ಯಾದ ದಾಳಿಯ ಬಗ್ಗೆ ಹೇಳಿಕೆ ನೀಡಿದರು.
Russia-Ukraine War: Out of 64 missiles launched by Russia, we have repelled 54 missiles – Ukraine…