ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರ ಬದ್ಧ ವೈರಿ ಅಲೆಕ್ಸಿ ನವಾಲ್ಕಿ ನಿಧನರಾಗಿದ್ದಾರೆ.
ವಿಮರ್ಶಕ ಅಲೆಕ್ಸಿ ನವಲ್ನಿ (48) ಜೈಲಿನಲ್ಲಿಯೇ ಸಾವನ್ನಪ್ಪಿದ್ದು, ಅವರು ಜೈಲಿನಲ್ಲಿ 19 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಆರ್ಕ್ಟಿಕ್ ಜೈಲು ಕಾಲೊನಿಯಲ್ಲಿ ಅವರನ್ನು ಬಂಧಿಸಿಡಲಾಗಿತ್ತು. ಜೈಲಿನಲ್ಲಿ ನಡೆದುಕೊಂಡು ಹೋಗುವಾಗ ನವಲ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗಿಲ್ಲ ಎನ್ನಲಾಗಿದೆ. ಈ ಕುರಿತು ತನಿಖೆ ನಡೆಸುವುದಾಗಿ ಜೈಲು ಇಲಾಖೆ ಹೇಳಿದೆ. ಸದ್ಯ ಈ ಹೋರಾಟಗಾರ ಪತ್ನಿ ಯೂಲಿಯಾ ಹಾಗೂ ಇಬ್ಬರು ಮಕ್ಕಳನ್ನು ನವಲ್ನಿ ಅಗಲಿದ್ದಾರೆ.
ರಷ್ಯಾದ ವಿಪಕ್ಷದ ಪ್ರಮುಖ ನಾಯಕ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಖ್ಯ ರಾಜಕೀಯ ಎದುರಾಳಿ. 2021ರ ಫೆಬ್ರವರಿಯಲ್ಲಿ ವಿವಿಧ ಆರೋಪಗಳ ಮೇಲೆ ಬಂಧಿತರಾಗಿದ್ದರು. ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೂಲಕ ರಷ್ಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನವಲ್ನಿ ಅವರನ್ನು ‘ಪುಟಿನ್ ಹೆಚ್ಚು ಭಯಪಡುವ ವ್ಯಕ್ತಿ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.