S Jaishankar: ರಷ್ಯಾದಿಂದ ತೈಲ ಆಮದನ್ನು ಸಮರ್ಥಿಸಿಕೊಂಡ ವಿದೇಶಾಂಗ ಸಚಿವ ಎಸ್ ಜೈಶಂಕರ್…
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ರಷ್ಯಾದಿಂದ ಭಾರತದ ತೈಲ ಆಮದು ಮಾಡಿಕೊಳ್ಳುವುದನ್ನ ಸಮರ್ಥಿಸಿಕೊಂಡಿದ್ದಾರೆ. ಜರ್ಮನಿಯ ವಿದೇಶಾಂಗ ಸಚಿವ ಅನ್ನಾಲೆನಾ ಬೇರ್ಬಾಕ್ ಅವರೊಂದಿಗಿನ ಸಭೆಯ ನಂತರ ಯುರೋಪಿಯನ್ ಒಕ್ಕೂಟದ ವಾದವನ್ನತಳ್ಳಿಹಾಕಿದ ಜೈ ಶಂಕರ್ ಯೂರೋಪಿಯನ್ ಒಕ್ಕೂಟ ರಷ್ಯಾದಿಂದ ಭಾರತಕ್ಕಿಂತ 6 ಪಟ್ಟು ಹೆಚ್ಚು ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಯುದ್ಧದ ಆರಂಭಕ್ಕೂ ಮುಂಚೆಯೇ ವ್ಯಾಪಾರವನ್ನು ವಿಸ್ತರಿಸಲು ಭಾರತ ಮತ್ತು ರಷ್ಯಾ ನಡುವಿನ ಚರ್ಚೆಗಳು ಪ್ರಾರಂಭವಾಗಿದ್ದವು ಎಂದು ಭಾರತದ ವಿದೇಶಾಂಗ ಸಚಿವರು ಪ್ರತಿಪಾದಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ
ಪತ್ರಿಕಾಗೋಷ್ಠಿಯಲ್ಲಿ, ಎಸ್ ಜೈಶಂಕರ್, “ಮೊದಲು ನಾವು ಸತ್ಯಗಳನ್ನು ಸ್ಪಷ್ಟವಾಗಿ ಹೇಳಬೇಕಿದೆ ಎಂದು ನಾನು ಭಾವಿಸುತ್ತೇನೆ. ಫೆಬ್ರವರಿ 24 ಮತ್ತು ನವೆಂಬರ್ 17 ರ ನಡುವೆ, ಯುರೋಪಿಯನ್ ಒಕ್ಕೂಟವು ಮುಂದಿನ 10 ದೇಶಗಳಿಗಿಂತ ಹೆಚ್ಚಿನ ಪಳೆಯುಳಿಕೆ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ತೈಲ ಆಮದು ಯುರೋಪಿಯನ್ ಯೂನಿಯನ್ ಭಾರತವು ಆಮದು ಮಾಡಿಕೊಂಡಿದ್ದಕ್ಕಿಂತ ಆರು ಪಟ್ಟು ಹೆಚ್ಚು ಹೆಚ್ಚು ಎಂದು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಿಂದ ಕಚ್ಚಾ ತೈಲದ ಖರೀದಿಯು ಬೆಲೆಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಡಾ ಜೈಶಂಕರ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
S Jaishankar: External Affairs Minister S Jaishankar defends oil import from Russia…