S R Srinivas | ಮುಂದಿನ 5 ವರ್ಷ ನಾನೇ ಎಂಎಲ್ ಎ
ತುಮಕೂರು : ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ ಎಂಎಲ್ ಎ ಆಗಿ ಇರುತ್ತೇನೆ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ಮಾತನಾಡಿದ ಎಸ್ ಆರ್ ಶ್ರೀನಿವಾಸ್, ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯ.
ಚುನಾವಣೆ ಹತ್ತಿರ ಬಂದಾಗ ಕಾಗೆ ಗೂಬೆಗಳೆಲ್ಲ ವೇಷ ಹಾಕಿಕೊಂಡು ಬರ್ತಾರೆ.
ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕಿಸ್ದು ಆ ಮೇಲೆ ಎಂಎಲ್ಎ ಆದೋನು ನಾನು.

ನಮ್ಮಪ್ಪನಾಣೆ ನಾನೇ ಮುಂದಿನ ಐದು ವರ್ಷ ಎಂ ಎಲ್ ಎ ಆಗಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನನು ಸುಲಭವಾಗಿ ಸೋಲಿಸಿ ಬಿಡುತ್ತೀನಿ ಅಂದುಕೊಂಡಿದ್ದರೇ ಅದು ಸಾಧ್ಯ ಇಲ್ಲ ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.
ಇನ್ನು ಎಸ್ ಆರ್ ಶ್ರೀನಿವಾಸ್ ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಗಳಿವೆ.