ತಮ್ಮ ವಾರ್ಡ್ ನ ಪೌರ ಕಾರ್ಮಿಕೆ ಗಾಯಗೊಂಡದ್ದನ್ನು ಕೇಳಿ ತಿಳಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಬೆಳಿಗ್ಗೆ ಸುಮಾರು 5.45 ಕ್ಕೆ ಮನೆಯ ಮುಂದಿನ ಅರ್ಧ ರಸ್ತೆಯನ್ನು ತಮ್ಮ ಪತ್ನಿ ಜೊತೆಗೂಡಿ ಗುಡಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಸಚಿವರು ‘ಇಂದು ಬೆಳಿಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ ಲಾಭವೂ ಆಯಿತು.
ನಮ್ಮ ರಸ್ತೆಯ ಪೌರಕಾರ್ಮಿಕಿ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದದ್ದು.
ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ.
(ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ)’ ಎಂದು ಬರೆದುಕೊಂಡಿದ್ದಾರೆ
AIKYAM CUP 2026–27 – ವಾಲಿಬಾಲ್ನಲ್ಲಿ DBIPUC ತಂಡಕ್ಕೆ ರನ್ನರ್ಅಪ್ ಗೌರವ
AIKYAM CUP 2026–27 - ವಾಲಿಬಾಲ್ನಲ್ಲಿ DBIPUC ತಂಡಕ್ಕೆ ರನ್ನರ್ಅಪ್ ಗೌರವ ಬೆಂಗಳೂರು: ಇಂದಿರಾನಗರದ ಜೈನ್ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ AIKYAM CUP 2026–27 ವಾಲಿಬಾಲ್...








