Saakshatv Author special : ನಿಗೂಢ ಕನಸಿನ ಜಗತ್ತು..!! ( ಕಲ್ಪನಾ ಲಹರಿ)
ಯಾರೂ ಬಾರದ , ಯಾರೂ ಕಾಣದ , ನಾನ್ಯಾವತ್ತೂ ಕೇಳಿರದ , ನೋಡಿರದ , ಊಹೆಯೂ ಮಾಡಿರದ ಲೋಕ ನಿತ್ಯ ಕನಸಲ್ಲಿ ದರ್ಶನವಾಗುವುದು , ಬೆಳಗೆದ್ದರೊಳಗೆಲ್ಲವೂ ಮಾಯವಾಗಿ ಎಚ್ಚರವಾದರೆ ಬೇಸರ..
ಮತ್ತದೇ ನಿತ್ಯದ ಮಿಥ್ಯ ಪ್ರಪಂಚ… ವಾಸ್ತವಕ್ಕೆ ಮರಳಲು ಒಲ್ಲದ ಮನಸ್ಸನ್ನ ಒಪ್ಪಿಸುವುದು ಬಹಳ ಕಷ್ಟ… ಕಾಣದ ಕನಸಿಕ ಆ ನಿಗೋಢ ಪ್ರಪಂಚಕ್ಕೆ ಹೋಗಬೇಕೆಂಬ ದುರಾಸೆ ಇಂದು ನಾಳೆ ಕೊನೆಯಾಗುವಂತಹದ್ದಲ್ಲ… ಉಸಿರಾಡುವ ತನಕವೂ ಇರುವ ಆಸೆಯೇ , ಕಾಣದ ಆಕಲ್ಪನಾ ಲೋಕಕ್ಕೆ ಹೋಗವ ಹಂಬಲ..
ಭವ ಸಾಗರದ ಜಂಜಾಟದಿಂದ ದೂರ , ಆ. ನಿಗೂಢ ಪ್ರಪಂಚಕ್ಕೆ ಪ್ರವೇಶ ಪಡೆಯೋದಾದರೂ ಹೇಗೆ…??? ಪ್ರಶ್ನೆ ನಿತ್ಯದ್ದು…!!
– ನಿಹಾರಿಕಾ ರಾವ್ “ನಮ್ಮು” –