ಇತ್ತ ಕನಸುಗಳ ಭಂಡಾರವೇ ಹೊತ್ತ ಜೀವನ
ಮತ್ತೊಂದೆಡೆ ಬದುಕಿನಲ್ಲಿ ನಿತ್ಯವೂ ನರಕದರ್ಶನ
ಜೀವನವೇ ಹೀಗೇನಾ… ಇಲ್ಲದೇ ಇದ್ರು ಕೊರಗು
ಎಲ್ಲವೂ ಇದ್ರೂ ತಪ್ಪಲ್ಲ ಕೊರಗು
ಕೋಟಿ ಇದ್ದವನಿಗೆ ನೆಮ್ಮದಿ ಇರಲ್ಲ
ಇಲ್ಲದವನು ಗಳಿಸುವ ಆಸೆ ತೊರೆಯಲ್ಲ
ಒಂದಾದ ಮೇಲೊಂದು ಸಮಸ್ಯೆಗಳೇ ಸಮಸ್ಯೆಗಳು
ಪರಿಹಾರಕ್ಕಾಗಿ ನಿತ್ಯ ನೂರಾರು ದಾರಿಗಳ ಹುಡುಕಾಟಗಳು
ಯಾವಾಗ ಜೀವನಕ್ಕೆ ವಿದಾಯ ಹೇಳ್ತಿವೋ ನಮಗೆ ಗೊತ್ತಿರಲ್ಲ
ಆದ್ರೂ ಪ್ರತಿ ಕ್ಷಣ ಭವಿಷ್ಯದ ಬುನಾದಿಗಾಗಿ ಹೋರಾಟ ಬಿಡಲ್ಲ
ನಿತ್ಯ ನೂರಾರು ಚಿಂತೆ, ಒಂದು ಸರಿಹೋದ್ರೆ ಮತ್ತೊಂದರ ಚಿಂತೆ
ಚಿಂತೆಯ ಚಿತೆಯಲ್ಲಿ ಬೆಂದೆದ್ದರು , ಮತ್ತೊಂದು ಚಿಂತೆ ನಮ್ಮನ್ನ ಬೇಟೆಯಾಡಲು ಕಾಯುತ್ತಾ ಎದೆಯುಬ್ಬಿಸಿ ನಿಲ್ತೇವೆ..