ಮಸಾಲಾ ಕುಷ್ಕಾ ರೈಸ್ (plain biryani without meat or vegetables) Saakshatv cooking recipes Kuska rice
ಬೇಕಾಗುವ ಪದಾರ್ಥಗಳು
ಅಕ್ಕಿ- 1 ಕಪ್
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಮೆಣಸಿನ ಪುಡಿ- 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ- 4 ಚಮಚ
ತುಪ್ಪ - 2 ಚಮಚ
ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಸೋಂಪು- ಸ್ವಲ್ಪ
ಉದ್ದಕ್ಕೆ ಹೆಚ್ಚಿಕೊಂಡ ಈರುಳ್ಳಿ – 1
ಗರಂ ಮಸಾಲೆ ಪುಡಿ – 1/2 ಚಮಚ
ಹಸಿಮೆಣಸಿನಕಾಯಿ-2
ಟೊಮೆಟೋ-2
ಮೊಸರು-ಅರ್ಧ ಕಪ್
ಪುದೀನಾ, ಕೊತ್ತಂಬರಿ ಸೊಪ್ಪು
ಅರಿಶಿನ ಹುಡಿ- ಸ್ವಲ್ಪ
Saakshatv cooking recipes Kuska rice
ಮಾಡುವ ವಿಧಾನ
ಅಕ್ಕಿಯನ್ನು ತೊಳೆದು ನೀರಿನಲ್ಲಿ 10ನಿಮಿಷ ನೆನೆಸಿಡಿ. ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ 4 ಚಮಚ ಎಣ್ಣೆ ಮತ್ತು 2 ಚಮಚ ತುಪ್ಪ ಹಾಕಿ. ಕಾದ ಬಳಿಕ ಅದಕ್ಕೆ ಚಕ್ಕೆ ಲವಂಗ, ಎಲಕ್ಕಿ, ಮರಾಠಿ ಮೊಗ್ಗು, ಸೋಂಪು ಹಾಕಿ 30 ಸೆಕೆಂಡ್ ಕೆಂಪಗಾಗುವವರೆಗೆ ಹುರಿಯಿರಿ.
ಕತ್ತರಿಸಿದ ಹಸಿಮೆಣಸಿನ ಕಾಯಿ ಸೇರಿಸಿ 30 ಸೆಕೆಂಡ್ ಹುರಿಯಿರಿ. ಕತ್ತರಿಸಿ ಇಟ್ಟುಕೊಂಡ ಈರುಳ್ಳಿ ಪುದೀನ ಸೇರಿಸಿ ಮಧ್ಯಮ ಜ್ವಾಲೆಯಲ್ಲಿ 3 ನಿಮಿಷ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 30 ಸೆಕೆಂಡ್ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಬೇಯಿಸಿ.
ನಂತರ ಅದಕ್ಕೆ ಅರಿಶಿನ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಮೊಸರು ಹಾಕಿ 5 ನಿಮಿಷ ಬೆರೆಸಿ. ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ 2 ನಿಮಿಷ ಚೆನ್ನಾಗಿ ಬೆರೆಸಿ.ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
ಈಗ 2 ಬಟ್ಟಲು ನೀರು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ 1-2 ವಿಸಿಲ್ ಕೂಗಿಸಿದರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/oWAdASicQQ
— Saaksha TV (@SaakshaTv) February 23, 2021
ಎಲ್ಐಸಿ(LIC)ಯಿಂದ ತನ್ನ ಗ್ರಾಹಕರಿಗಾಗಿ ಮಾರ್ಚ್ 6 ರವರೆಗೆ ವಿಶೇಷ ಸೌಲಭ್ಯ https://t.co/H6UI5Ixv2K
— Saaksha TV (@SaakshaTv) February 23, 2021
ಕಡಲೆಕಾಯಿ/ನೆಲಗಡಲೆ/ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ https://t.co/4XKj4biGrS
— Saaksha TV (@SaakshaTv) February 22, 2021