ಕಡಲೆಕಾಯಿ/ನೆಲಗಡಲೆ/ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ Saakshatv cooking recipes peanut chikki
ಬೇಕಾಗುವ ಸಾಮಗ್ರಿಗಳು
ನೆಲಗಡಲೆ/ಶೇಂಗಾ/ಕಡಲೆಕಾಯಿ – 2 ಕಪ್
ಬೆಲ್ಲ – 1 1/2 ಕಪ್
ಎಣ್ಣೆ 4 ಟೀಸ್ಪೂನ್
2 ಟೀಸ್ಪೂನ್ ನೀರು
ಮಾಡುವ ವಿಧಾನ :
ಮೊದಲು ಸ್ಟವ್ ಮೇಲೆ ಒಂದು ದಪ್ಪ ತಳದ ಪ್ಯಾನ್ ಇಟ್ಟು ಶೇಂಗಾ ಅಥವಾ ನೆಲಗಡಲೆಯನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಗರಿ ಗರಿಯಾಗುವಂತೆ ಹುರಿದುಕೊಳ್ಳಬೇಕು.
ಕಡಲೆಕಾಯಿಗಳು ಅದರ ಸಿಪ್ಪೆಯಿಂದ ಬೇರ್ಪಡಲು ಪ್ರಾರಂಭಿಸಿದ ನಂತರ, ಸ್ಟವ್ ಆಫ್ ಮಾಡಿ ಮತ್ತು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಬಳಿಕ ಶೇಂಗಾ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಬೇಕು.
ನಂತರ ದೊಡ್ಡ ಕಡಾಯಿಯನ್ನು ಸ್ಟವ್ ಮೇಲಿಟ್ಟು, ಬೆಲ್ಲವನ್ನು ತೆಗೆದುಕೊಳ್ಳಿ. ನೀರು ಮತ್ತು 3 ಟೀ ಸ್ಪೂನ್ ಎಣ್ಣೆ ಸೇರಿಸಿ ಮತ್ತು ಬೆಲ್ಲ ಕರಗುವ ತನಕ ಚೆನ್ನಾಗಿ ಬೆರೆಸಿ.
ಎಣ್ಣೆ ಬೆಲ್ಲದ ಜೊತೆ ಮಿಕ್ಸ್ ಆಗಿ ಬೆಲ್ಲ ಕರಗಿ ಗಟ್ಟಿ ಪಾಕವಾಗಬೇಕು . ಚೆನ್ನಾಗಿ ಪಾಕ ಬಂದ ನಂತರ ಸಣ್ಣ ಉರಿಯಲ್ಲಿ ಸಿಪ್ಪೆಯಿಂದ ಬೇರ್ಪಡಿಸಿದ ಹುರಿದ ನೆಲಕಡಲೆ/ಶೇಂಗಾ/ಕಡಲೆಕಾಯಿಯನ್ನು ಅದಕ್ಕೆ ಸೇರಿಸಿ.
ಶೇಂಗಾ ಬೀಜಗಳನ್ನು ಬೆಲ್ಲದ ಪಾಕದೊಂದಿಗೆ ಸರಿಯಾಗಿ ಮಿಶ್ರಣ ಮಾಡಿ ಸ್ಟವ್ ಆಫ್ ಮಾಡಿ.
ನಂತರ ಒಂದು ಪ್ಲೇಟ್ ಗೆ ಎಣ್ಣೆ ಸವರಿ ಅದರ ಮೇಲೆ ನೆಲಕಡಲೆ ಬೆಲ್ಲದ ಮಿಶ್ರಣವನ್ನು ಹರಡಿ. ಈಗ ಲಟ್ಟಣಿಗೆ ಕೋಲಿನ ಸಹಾಯದಿಂದ ಮಿಶ್ರಣ ಒಂದೇ ಸಮನಾಗುವಂತೆ ಲಟ್ಟಿಸಿ.
ನಂತರ ಐದು ನಿಮಿಷ ತಣ್ಣಗಾಗಲು ಬಿಡಿ. ಬಳಿಕ ಚಾಕುವಿನಿಂದ ಬೇಕಾದ ಆಕಾರಕ್ಕೆ ಹಾಗೂ ಬೇಕಾದ ಗಾತ್ರಕ್ಕೆ ಕಟ್ ಮಾಡಿ ಸ್ವಲ್ಪ ಸಮಯ ಹಾಗೆ ಹಾಗೆ ಬಿಡಿ. ರುಚಿಯಾದ ನೆಲಗಡಲೆ/ಶೇಂಗಾ/ಕಡಲೆಕಾಯಿ ಚಿಕ್ಕಿ ತಯಾರಾಗಿದೆ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ, ಒಂದು ತಿಂಗಳ ಕಾಲ ಸೇವಿಸಬಹುದು.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
https://twitter.com/SaakshaTv/status/1361872160071897093?s=19
https://twitter.com/SaakshaTv/status/1361837405133697026?s=19
https://twitter.com/SaakshaTv/status/1361520202928824322?s=19