ಬೂದುಕುಂಬಳಕಾಯಿ ಮಜ್ಜಿಗೆ ಹುಳಿ

1 min read
Saakshatv cooking kumbalakayi majjige huli

ಬೂದುಕುಂಬಳಕಾಯಿ ಮಜ್ಜಿಗೆ ಹುಳಿ

ಬೇಕಾಗುವ ಸಾಮಗ್ರಿಗಳು

ಬೂದುಕುಂಬಳದ ಸಣ್ಣ ಹೋಳುಗಳು – 2 ಕಪ್‌,
ಹಸಿಮೆಣಸು – 9ರಿಂದ 10,
ಜೀರಿಗೆ – 1/4 ಚಮಚ,
ಕಾಳುಮೆಣಸು – 6,
ಹಸಿಶುಂಠಿ– 1 ತುಂಡು,
ಉಪ್ಪು – ರುಚಿಗೆ ತಕ್ಕಷ್ಟು,
ಅರಶಿನಪುಡಿ – 1/4 ಚಮಚ,

ಬೆಳ್ಳುಳ್ಳಿ – 3 ಎಸಳು,
ಕಾಯಿತುರಿ – 1/4 ಕಪ್‌,
ಮೊಸರು – ಅಗತ್ಯವಿರುವಷ್ಟು
ಗೋಡಂಬಿ – ಸ್ವಲ್ಪ
ಅಕ್ಕಿ – 1 ಚಮಚ

Saakshatv cooking kumbalakayi majjige huli

ಒಗ್ಗರಣೆಗೆ
ಸಾಸಿವೆ – 1 ಚಮಚ,
ಕರಿಬೇವಿನ ಸೊಪ್ಪು – ಸ್ವಲ್ಪ
ಕೆಂಪು ಮೆಣಸು – 2
ಎಣ್ಣೆ – ಸ್ವಲ್ಪ

ಮಾಡುವ ವಿಧಾನ:

ಮೊದಲಿಗೆ ಬೂದುಗುಂಬಳದ ಹೋಳುಗಳನ್ನು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ.‌ 1 ಚಮಚ ಅಕ್ಕಿಯನ್ನು 1/2 ಗಂಟೆ ನೀರಲ್ಲಿ ನೆನೆಸಿ. ‌

Saakshatv cooking kumbalakayi majjige huli
ನಂತರ ಕಾಯಿತುರಿ, ಹಸಿಮೆಣಸು, ಜೀರಿಗೆ, ಗೋಡಂಬಿ, ನೆನೆಸಿದ ಅಕ್ಕಿ, ಹಸಿಶುಂಠಿ, ಬೆಳ್ಳುಳ್ಳಿ, ಗೋಡಂಬಿಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ‌ನಂತರ ಈ ಮಿಶ್ರಣಕ್ಕೆ ಬೆಂದ ಹೋಳುಗಳನ್ನು ಸೇರಿಸಿ ಉಪ್ಪು, ಅರಿಶಿನ ಪುಡಿ, ಇಂಗನ್ನು ಹಾಕಿ ಕುದಿಸಿ. ಬಳಿಕ ಮೊಸರನ್ನು ಸೇರಿಸಿ. ಈಗ ಸಾಸಿವೆ, ಕೆಂಪು ಮೆಣಸು, ಕರಿಬೇವಿನ ಒಗ್ಗರಣೆ ಕೊಟ್ಟರೆ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ ರೆಡಿ.

#Saakshatv #cookingrecipe #kumbalakayimajjigehuli

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd