ಅವಲಕ್ಕಿ ಲಡ್ಡು
ಬೇಕಾಗುವ ಸಾಮಾಗ್ರಿ
ಅವಲಕ್ಕಿ – 2 ಕಪ್
ಬೆಲ್ಲ – 1 ಕಪ್
ತೆಂಗಿನ ಕಾಯಿತುರಿ – 1/2 ಕಪ್
ತುಪ್ಪ – 2 ಚಮಚ
ದ್ರಾಕ್ಷಿ, ಗೋಡಂಬಿ – ಸ್ವಲ್ಪ
ಏಲಕ್ಕಿ- ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲಿಗೆ ಬಾಣಲೆ ಬಿಸಿ ಮಾಡಿ ಅವಲಕ್ಕಿಯನ್ನು 2 ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ.
ನಂತರ ಬಾಣಲೆ ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿಯನ್ನು ಹುರಿಯಿರಿ. ನಂತರ 1 ಕಪ್ ಬೆಲ್ಲಕ್ಕೆ 1 ಕಪ್ ನೀರನ್ನು ಸೇರಿಸಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ತೆಂಗಿನ ಕಾಯಿತುರಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಕಡಿಮೆ ಉರಿಯಲ್ಲಿ ಬೇಯಿಸುತ್ತಾ ಏಲಕ್ಕಿ ಪುಡಿ ಮಿಶ್ರ ಮಾಡಿ. ಈಗ ಪುಡಿ ಮಾಡಿ ಇಟ್ಟುಕೊಂಡ ಅವಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಸೇರಿಸಿ. ಬಿಸಿ ಇರುವಾಗಲೇ ಮಿಶ್ರಣದಿಂದ ಲಡ್ಡುಗಳನ್ನು ತಯಾರಿಸಿ ಕೊಳ್ಳಿ. ಈಗ ರುಚಿಯಾದ ಅವಲಕ್ಕಿ ಲಡ್ಡು ಸವಿಯಲು ಸಿದ್ಧವಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬಾದಾಮಿ – ಗೇರು ಬೀಜ ಚಿಕ್ಕಿ https://t.co/3Tva4Ca5mI
— Saaksha TV (@SaakshaTv) August 30, 2021
ಬೆಳ್ಳುಳ್ಳಿ ಚಹಾ ಸೇವನೆಯಿಂದ ದೇಹಕ್ಕೆ ಸಿಗುವ ಲಾಭಗಳು ಮತ್ತು ಅದನ್ನು ತಯಾರಿಸುವ ವಿಧಾನ https://t.co/y05OTOWx8b
— Saaksha TV (@SaakshaTv) August 30, 2021
ಬಿಸ್ಕೂಟ್ ರೊಟ್ಟಿ https://t.co/ru9jMZv54s
— Saaksha TV (@SaakshaTv) August 31, 2021
ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/PkUlXW4kjV
— Saaksha TV (@SaakshaTv) August 31, 2021
#Saakshatv #cookingrecipe #avalakkiladdu