ನುಗ್ಗೆ ಸೊಪ್ಪು ಮಸಾಲಾ ಚಪಾತಿ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1 ಕಪ್
ಕತ್ತರಿಸಿದ ನುಗ್ಗೆ ಸೊಪ್ಪು – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹಸಿ ಮೆಣಸಿನಕಾಯಿ ಪೇಸ್ಟ್
ಕೆಂಪು ಮೆಣಸಿನ ಪುಡಿ
ಜೀರಿಗೆ – 1/2 ಚಮಚ
ಅಜ್ವೈನ್ – 1/4 ಚಮಚ
ಅರಿಶಿನ – 1/4 ಚಮಚ
ಅಗತ್ಯವಿರುವಷ್ಟು ನೀರು
ತಯಾರಿಸುವ ವಿಧಾನ
ಮೊದಲಿಗೆ ಗೋಧಿ ಹಿಟ್ಟು, ನುಗ್ಗೆ ಸೊಪ್ಪು, ಹಸಿ ಮೆಣಸಿನಕಾಯಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಜೀರಿಗೆ, ಅಜ್ವೈನ್, ಅರಿಶಿನ, ಉಪ್ಪುಅನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ ಮೃದುವಾದ ಚಪಾತಿ ಹಿಟ್ಟನ್ನು ತಯಾರಿಸಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆ ಬಿಡಿ.
ನಂತರ ಚಪಾತಿಗಳನ್ನು ಲಟ್ಟಿಸಿ. ತವಾವನ್ನು ಬಿಸಿ ಮಾಡಿ ತುಪ್ಪವನ್ನು ಸವರಿ ಚಪಾತಿಯ ಎರಡೂ ಬದಿಯನ್ನು ಚೆನ್ನಾಗಿ ಕಾಯಿಸಿಕೊಳ್ಳಿ. ಈಗ ನುಗ್ಗೆ ಸೊಪ್ಪು ಮಸಾಲಾ ಚಪಾತಿ ಸಿದ್ಧವಾಗಿದೆ. ನಿಂಬೆ ಉಪ್ಪಿನಕಾಯಿ ಅಥವಾ ಈರುಳ್ಳಿ ಚಟ್ನಿಯೊಂದಿಗೆ ನುಗ್ಗೆ ಸೊಪ್ಪು ಮಸಾಲಾ ಚಪಾತಿ ಸವಿಯಿರಿ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1397742474475577344?s=19
https://twitter.com/SaakshaTv/status/1397771221941604355?s=19
https://twitter.com/SaakshaTv/status/1398457118223745027?s=19
https://twitter.com/SaakshaTv/status/1397407708366704640?s=19
https://twitter.com/SaakshaTv/status/1397379998651084807?s=19
#Saakshatv #cookingrecipe #drumstick