ಬಟಾಟೆ ಬೋಂಡಾ
ಬೇಕಾಗುವ ಸಾಮಗ್ರಿಗಳು
ಸಾಸಿವೆ – 1/2 ಚಮಚ
ಉದ್ದಿನ ಬೇಳೆ -1/2 ಚಮಚ
ಹಸಿಮೆಣಸಿನಕಾಯಿ – 2
ಶುಂಠಿ ತುರಿ – 1 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಬೇಯಿಸಿದ ಬಟಾಣಿ – 1/2 ಕಪ್
ಬೇಯಿಸಿದ ಬಟಾಟೆ – 2
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುರಿಯಲು ಎಣ್ಣೆ
ಕಡ್ಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 1 ಚಮಚ
ಕೆಂಪು ಮೆಣಸಿನ ಪುಡಿ – 1/2 ಚಮಚ
ಅಜ್ವೈನ್ – 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬಿಸಿ ಎಣ್ಣೆ – 1 ಚಮಚ
ಅಗತ್ಯವಿರುವಷ್ಟು ನೀರು
ಮಾಡುವ ವಿಧಾನ
ಮೊದಲಿಗೆ ಬಟಾಟೆಗಳನ್ನು ಬೇಯಿಸಿ ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ನಂತರ ಉದ್ದಿನ ಬೇಳೆ, ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು ಸೇರಿಸಿ ಹುರಿಯಿರಿ. ಬಳಿಕ ಅದಕ್ಕೆ ಬಟಾಣಿ ಮತ್ತು ಮ್ಯಾಶ್ ಮಾಡಿದ ಬಟಾಟೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಉದುರಿಸಿ. ನಂತರ ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ ಇಟ್ಟುಕೊಳ್ಳಿ.
ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಅಜ್ವೈನ್, ಉಪ್ಪು, ಬಿಸಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ ಹಿಟ್ಟನ್ನು ತಯಾರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ತಯಾರಿಸಿ ಇಟ್ಟುಕೊಂಡ ಅಲೂಪಲ್ಯದ ಉಂಡೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ಈಗ ರುಚಿಯಾದ ಬಿಸಿ ಬಿಸಿ ಅಲೂ ಬೋಂಡ ಸವಿಯಲು ಸಿದ್ಧವಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಬ್ಬಿನ ರಸದ ಇನ್ನಷ್ಟು ಆರೋಗ್ಯ ಪ್ರಯೋಜನಗಳು#Saakshatv #healthtips #sugarcane https://t.co/2XjBuk8raQ
— Saaksha TV (@SaakshaTv) June 1, 2021
ಎಸ್ಬಿಐ ನಿಂದ 5 ಲಕ್ಷ ರೂಪಾಯಿಗಳ ಕೋವಿಡ್ ಪರ್ಸನಲ್ ಲೋನ್! ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?#SBI #coronatreatment https://t.co/kxXOOAG3vK
— Saaksha TV (@SaakshaTv) June 2, 2021
ರುಚಿಯಾದ ಕ್ಯಾಪ್ಸಿಕಂ ಬಾತ್#saakshatv #cooking #recipe https://t.co/MhP2wa419O
— Saaksha TV (@SaakshaTv) June 2, 2021
ನಿಮಗೆ ದಿನವಿಡೀ ಆಲಸ್ಯ , ದಣಿವು ಕಾಣಿಸಿಕೊಳ್ಳುತ್ತಿದೆಯೇ? ಹಾಗಿದ್ದರೆ ವಿಟಮಿನ್ ಡಿ ಕೊರತೆ ಕಾರಣವಾಗಿರಬಹುದು#Saakshatv #healthtips #vitaminD https://t.co/GlsUpQobAH
— Saaksha TV (@SaakshaTv) June 2, 2021
ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡಲಿದೆ 5 ಲಕ್ಷ ರೂಗಳವರೆಗೆ ಸಾಲ !#Banks #loans #covidtreatment https://t.co/tJYFqSyYYO
— Saaksha TV (@SaakshaTv) June 1, 2021
#Saakshatv #cookingrecipe #potatobonda