ಕ್ಯಾರೆಟ್ ಹಲ್ವಾ
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್ – 4
ದಪ್ಪ ಹಾಲು – 3/4 ಲೀಟರ್
ತುಪ್ಪ - 3 ಚಮಚ
ಡ್ರೈ ಫ್ರೂಟ್ಸ್ – ಸ್ವಲ್ಪ
ರುಚಿಗೆ ತಕ್ಕಷ್ಟು ಸಕ್ಕರೆ
ಮಾಡುವ ವಿಧಾನ

ಮೊದಲಿಗೆ ದ್ರಾಕ್ಷಿ ಗೋಡಂಬಿಗಳನ್ನು ತುಪ್ಪದಲ್ಲಿ ಕರಿದು ಇಟ್ಟುಕೊಳ್ಳಿ. ನಂತರ ಕ್ಯಾರೆಟ್ ಅನ್ನು ತುರಿದುಕೊಳ್ಳಿ. ಕುಕ್ಕರ್ ಗೆ ಹಾಲು, ತುರಿದ ಕ್ಯಾರೆಟ್ ಹಾಕಿ ಒಂದು ವಿಸಲ್ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಸಕ್ಕರೆ, ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನೀರಿನಂಶ ಹಿಂಗಿ ಕ್ಯಾರೆಟ್ ಡ್ರೈ ಆಗುವವರೆಗೂ ಸೌಟ್ ನಿಂದ ಕೈಯಾಡಿಸುತ್ತಾ ಇರಿ. ನಂತರ ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಸೇರಿಸಿ. ಈಗ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮೈದಾ ಹಿಟ್ಟು ದೇಹಕ್ಕೆ ಅಪಾಯಕಾರಿಯೇ? https://t.co/7FVEPGo9pS
— Saaksha TV (@SaakshaTv) September 28, 2021
ಕ್ಯಾನ್ಸರ್, ಹೃದಯ ಕಾಯಿಲೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಅಗಸೆ ಬೀಜಗಳ ಪ್ರಯೋಜನಗಳು https://t.co/KO091FmNrP
— Saaksha TV (@SaakshaTv) September 29, 2021
ಉತ್ತಮ ಲಾಭದ ಅಂಚೆ ಇಲಾಖೆಯ ಸೂಪರ್ ಹಿಟ್ ಎಂಐಎಸ್ ಯೋಜನೆ https://t.co/MOjDv2w6Ho
— Saaksha TV (@SaakshaTv) September 29, 2021
https://twitter.com/SaakshaTv/status/1443048565077680129?s=19
#Saakshatv #cookingrecipe #carrothalva








