ಆಲೂಗಡ್ಡೆ ರೋಲ್ ಸಮೋಸಾ
ಬೇಕಾಗುವ ಸಾಮಗ್ರಿಗಳು
ಗೋದಿ ಹಿಟ್ಟು – 1 ಕಪ್
ಕಪ್ಪು ಎಳ್ಳು – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು
ಬಿಸಿ ಎಣ್ಣೆ 1 ಚಮಚ
ಆಲೂಗಡ್ಡೆ – 3-4
ಮೆಣಸಿನ ಪುಡಿ – 1 ಚಮಚ
ಗ್ರೀನ್ ಚಿಲ್ಲಿ ಪೇಸ್ಟ್ – 1 ಚಮಚ
ಜೀರಿಗೆ – 1/2 ಚಮಚ
ಚಾಟ್ ಪೌಡರ್ – 1/2 ಚಮಚ
ಅರಿಶಿನ ಪುಡಿ – 1/4 ಚಮಚ
ಜಿಂಜರ್ ಗಾರ್ಲಿಕ್ ಪೇಸ್ಟ್ – 1 ಚಮಚ
ಕಾರ್ನ್ ಫ್ಲೋರ್ – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಗೋದಿ ಹಿಟ್ಟು, ಕಪ್ಪು ಎಳ್ಳು, ಬಿಸಿ ಎಣ್ಣೆ, ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ಚಪಾತಿ ಹಿಟ್ಟಿನ ಹದಕ್ಕೆ ನಾದಿ ಸ್ವಲ್ಪ ಹೊತ್ತು ಹಾಗೆಯೇ ನೆನೆಯಲು ಬಿಡಿ.
ಇನ್ನೊಂದು ಪಾತ್ರೆಯಲ್ಲಿ ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ತುರಿದು ಇಟ್ಟುಕೊಳ್ಳಿ. ಅದಕ್ಕೆ ಮೆಣಸಿನ ಪುಡಿ, ಗ್ರೀನ್ ಚಿಲ್ಲಿ ಪೇಸ್ಟ್, ಜೀರಿಗೆ, ಚಾಟ್ ಪೌಡರ್, ಅರಿಶಿನ ಪುಡಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಕಾರ್ನ್ ಫ್ಲೋರ್, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಕಡುಬು ನಂತೆ ಉಂಡೆ ಮಾಡಿ ಇಡಿ.
ಈಗ ಚಪಾತಿ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ,ಚಪಾತಿ ಲಟ್ಟಿಸಿ. ಇದನ್ನು ಚೌಕಕಾರವಾಗಿ ಕತ್ತರಿಸಿ. ನಂತರ ಅದರಲ್ಲಿ ಕಡುಬಿನಂತೆ ಮಾಡಿಟ್ಟ ಆಲೂಗಡ್ಡೆ ಮಿಶ್ರಣವನ್ನು ಸುತ್ತಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಆಲೂಗಡ್ಡೆ ರೋಲ್ ಅನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿದು ತೆಗೆಯಿರಿ. ರುಚಿಯಾದ ಆಲೂಗಡ್ಡೆ ರೋಲ್ ಸಮೋಸಾ ವನ್ನು ಟೊಮೆಟೊ ಸಾಸ್ ಜೊತೆಗೆ ಸವಿಯಿರಿ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೇವಿಸಬೇಕಾದ ಹಣ್ಣು ಮತ್ತು ತರಕಾರಿಗಳು#immunity #rainseason https://t.co/Gu4P3MbPKT
— Saaksha TV (@SaakshaTv) June 28, 2021
ನೇಂದ್ರ ಬಾಳೆಕಾಯಿ ಸಿಪ್ಪೆಯ ಬಜ್ಜಿ#Saakshatv #cooking #recipe https://t.co/JzmosmX0TY
— Saaksha TV (@SaakshaTv) July 1, 2021
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz
— Saaksha TV (@SaakshaTv) June 27, 2021
ವೈಟ್ ರೈಸ್ Vs ಬ್ರೌನ್ ರೈಸ್ – ಯಾವುದು ದೇಹಕ್ಕೆ ಉತ್ತಮ – ಇಲ್ಲಿದೆ ಪೌಷ್ಟಿಕತಜ್ಞೆ ನೀಡಿರುವ ಮಾಹಿತಿ#Saakshatv #healthtips #rice https://t.co/tCTUXeFGEs
— Saaksha TV (@SaakshaTv) July 1, 2021
ಬ್ಯಾಂಕಿನ ಯಾವ ಕೆಲಸಗಳನ್ನು ವಾಟ್ಸಾಪ್ ಮೂಲಕ ನಿಭಾಯಿಸಬಹುದು ಮತ್ತು ಅದರ ಪ್ರಕ್ರಿಯೆ ಏನು#WhatsApp #chat https://t.co/0yPB6IOm6y
— Saaksha TV (@SaakshaTv) June 26, 2021
#Saakshatv #cookingrecipe #potatorollsamosa