ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ ! Saakshatv cooking recipes rice rasgulla
ಬೇಕಾಗುವ ಸಾಮಗ್ರಿಗಳು
ಅನ್ನ – 2 1/2 ಕಪ್
ಮೈದಾ – 1 ಟೀಸ್ಪೂನ್
ಹಾಲಿನ ಪುಡಿ – 1 ಟೀಸ್ಪೂನ್
ತುಪ್ಪ – 1 ಟೀಸ್ಪೂನ್
ಕಾರ್ನ್ ಪ್ಲೋರ್ – 1 ಟೀಸ್ಪೂನ್
ಸಕ್ಕರೆ ಪಾಕ ತಯಾರಿಸಲು
ಸಕ್ಕರೆ 1 ಕಪ್
ನೀರು 1 ಕಪ್
ಏಲಕ್ಕಿ ಪುಡಿ
ನಿಂಬೆ ರಸ
Saakshatv cooking recipes rice rasgulla
ಮಾಡುವ ವಿಧಾನ
ಉಳಿದ ಅನ್ನವನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ತುಪ್ಪದಿಂದ ಗ್ರೀಸ್ ಮಾಡಿದ ಪಾತ್ರೆಗೆ ಅದನ್ನು ಹಾಕಿ.
ಅದಕ್ಕೆ ಮೈದಾ ಹಿಟ್ಟು, ಹಾಲಿನ ಹುಡಿ ಮತ್ತು ಕಾರ್ನ್ ಪ್ಲೋರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಹಿಟ್ಟಿನಂತೆ ಚೆನ್ನಾಗಿ ಕಲೆಸಿಕೊಳ್ಳಿ. ಹೆಚ್ಚು ನಾದಿದಷ್ಷು ರಸಗುಲ್ಲಾ ಮೃದುವಾಗುತ್ತದೆ.
ಬಳಿಕ ಆ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ. ಅವುಗಳು ಒಡೆದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ 1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಿ ಸಕ್ಕರೆ ಪಾಕ ತಯಾರಿಸಿ.
ಪಾಕ ಸಿದ್ಧವಾದ ನಂತರ ಸಕ್ಕರೆ ಪಾಕದಲ್ಲಿ, ರಸಗುಲ್ಲಾವನ್ನು ಚೆನ್ನಾಗಿ ಬೇಯಿಸಿ. ಸಕ್ಕರೆ ಪಾಕದ ಪಾತ್ರೆಯನ್ನು ಅರ್ಧ ಮುಚ್ಚಿ ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. 2 ನಿಮಿಷಗಳ ನಂತರ, ರಸಗುಲ್ಲಾಗಳ ಇನ್ನೊಂದು ಬದಿಯನ್ನು ಬೇಯಿಸಿ. ಇದರ ನಂತರ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.
ಸ್ವಲ್ಪ ತಣ್ಣಗಾದ ಬಳಿಕ ಸರ್ವ್ ಮಾಡಿ. ಸಿಹಿಯಾದ ರಸಗುಲ್ಲಾವನ್ನು ಸವಿಯಿರಿ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/wr30jYeISz
— Saaksha TV (@SaakshaTv) February 21, 2021
ನೀವು ಹಣವನ್ನು ಬೇರೊಬ್ಬರ ಬ್ಯಾಂಕ್ ಖಾತೆಗೆ ತಪ್ಪಾಗಿ ಜಮಾ ಮಾಡಿದರೆ ಏನು ಮಾಡಬೇಕು? https://t.co/3p5y5BhQli
— Saaksha TV (@SaakshaTv) February 21, 2021
ಮಂಗಳೂರು ಅಕ್ಕಿ ಪುಂಡಿ https://t.co/KSNdn3uU5n
— Saaksha TV (@SaakshaTv) February 21, 2021