ಗಸಗಸೆ ಪಾಯಸ
ಬೇಕಾಗುವ ಸಾಮಗ್ರಿಗಳು
ಗಸಗಸೆ – 3 ಚಮಚ
ಬಾದಾಮಿ, ಗೋಡಂಬಿ – ಸ್ವಲ್ಪ
ಒಣಕೊಬ್ಬರಿ – 1/2 ಕಪ್
ಹಾಲು – ಸ್ವಲ್ಪ
ಬೆಲ್ಲ – 3/4 ಕಪ್
ನೀರು 1.5 ಕಪ್
ಏಲಕ್ಕಿ ಪುಡಿ – ಚಿಟಿಕೆಯಷ್ಟು
ತುಪ್ಪ – 2 ಚಮಚ
ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಗಸಗಸೆ, ಬಾದಾಮಿ, ಗೋಡಂಬಿಗಳನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ. ನಂತರ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿ. ಅದಕ್ಕೆ ಕೊಬ್ಬರಿ ಸೇರಿಸಿ ಅಗತ್ಯವಿರುವಷ್ಟು ಹಾಲು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ನಂತರ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಏಲಕ್ಕಿ ಪುಡಿ ಉದುರಿಸಿ. ಕೊನೆಯಲ್ಲಿ ತುಪ್ಪ, ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿದರೆ ರುಚಿಯಾದ ಗಸಗಸೆ ಪಾಯಸ ಸವಿಯಲು ಸಿದ್ಧವಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಔಷಧಿಗಳನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು https://t.co/chd6BMKwnT
— Saaksha TV (@SaakshaTv) October 1, 2021
ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಬೆರೆಸಿ ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/XV44aGRSew
— Saaksha TV (@SaakshaTv) October 1, 2021
ಕೇರಳದ ಆಪಂ https://t.co/9HR2oNWTCo
— Saaksha TV (@SaakshaTv) September 30, 2021
ಯಾವ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಪಪ್ಪಾಯಿ ಹಣ್ಣು ಸೇವನೆ ಒಳ್ಳೆಯದಲ್ಲ https://t.co/IQb8FvzrDr
— Saaksha TV (@SaakshaTv) September 30, 2021
#Saakshatv #cookingtips #gasagase #payasa