ನೇರಳೆ ಹಣ್ಣು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
ನೇರಳೆ ಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು, ವಿಟಮಿನ್ ಸಿ, ಸತು ಮತ್ತು ಕ್ಯಾಲ್ಸಿಯಂ ವ್ಯಕ್ತಿಯನ್ನು ಮಧುಮೇಹದ ಅಪಾಯದಿಂದ ರಕ್ಷಿಸುವುದಲ್ಲದೆ, ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಜೀರ್ಣಕ್ರಿಯೆ ಮತ್ತು ತೂಕ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣು ಸೇವಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಜೀರ್ಣಕ್ರಿಯೆಗೆ ಪ್ರಯೋಜನಕಾರಿ
ನೇರಳೆ ಹಣ್ಣು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಫೈಬರ್ ಭರಿತ ನೇರಳೆ ಹಣ್ಣು ಕರುಳಿನಲ್ಲಿನ ಗಾಯಗಳಾದ ಉರಿಯೂತ ಮತ್ತು ಹುಣ್ಣುಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ಉತ್ತಮ
ನೇರಳೆ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ನೇರಳೆ ಹಣ್ಣುಗಳಲ್ಲಿ ಜಂಬೋಲಿನ್ ಮತ್ತು ಜಾಂಬೋಸಿನ್ ಎಂಬ ಸಂಯುಕ್ತಗಳಿವೆ. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ನೇರಳೆ ಹಣ್ಣುಗಳಲ್ಲಿರುವ ಫ್ಲೇವನಾಯ್ಡ್ಗಳಂತಹ ಉತ್ಕರ್ಷಣ ನಿರೋಧಕಗಳು ದೇಹವನ್ನು ಹಾನಿಕಾರಕ ಕಣಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ.
ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ
ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ನೇರಳೆ ಹಣ್ಣು ಸೇವನೆ ವರದಾನ ಎಂದು ಹೇಳಬಹುದು. ಈ ಹಣ್ಣುಗಳಲ್ಲಿ ಫೈಬರ್ ಹೇರಳವಾಗಿ ಇರುತ್ತದೆ. ಇದು ಬೇಗನೆ ಹಸಿವಾಗದಂತೆ ತಡೆದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಋತು ಸ್ರಾವದ ಹೊಟ್ಟೆ ನೋವು ನಿವಾರಿಸುತ್ತದೆ
ಮಹಿಳೆಯರು ಹೆಚ್ಚಾಗಿ ಋತು ಸ್ರಾವ ಸಮಯದಲ್ಲಿ ನೋವು ಅನುಭವಿಸುತ್ತಾರೆ. ನೇರಳೆ ಹಣ್ಣಿನಲ್ಲಿರುಬ ಸತುವು ಹೊಟ್ಟೆ ನೋವನ್ನು ನಿವಾರಿಸುತ್ತದೆ.
ಎಲೆಕೋಸು ಅಥವಾ ಕ್ಯಾಬೇಜ್ ನ ಆರೋಗ್ಯ ಪ್ರಯೋಜನಗಳು https://t.co/V78dO1U9BF
— Saaksha TV (@SaakshaTv) March 23, 2021
ಪಾಲಕ್ ಪನೀರ್ https://t.co/j2Hh1uVmAo
— Saaksha TV (@SaakshaTv) March 23, 2021
ಪಿಪಿಎಫ್, ಆರ್‌ಡಿ ಮತ್ತು ಸುಕನ್ಯಾ ಸಮೃದ್ಧಿ ಖಾತೆದಾರರು ತಿಳಿದಿರಬೇಕಾದ ಮಹತ್ವದ ಮಾಹಿತಿ https://t.co/jUpD4jSACx
— Saaksha TV (@SaakshaTv) March 23, 2021
ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ರೈಲ್ವೆಗಳಿಗೆ ಸುರಕ್ಷತಾ ಮಾರ್ಗಸೂಚಿ !#railway #womensafety https://t.co/M9zTo3qbc8
— Saaksha TV (@SaakshaTv) March 22, 2021
ತಲೈವಿ ಟ್ರೈಲರ್ ನಲ್ಲಿದೆ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಜಯಲಲಿತಾ ಮೇಲಿನ ಹಲ್ಲೆಯ ಘಟನೆhttps://t.co/SbWK15ZWjl
— Saaksha TV (@SaakshaTv) March 30, 2021
#Saakshatv #healthtips #Jamunfruit #healthbenefits