ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

– ಪೋರ್ಚುಗಲ್‌ನಲ್ಲಿ ನಡೆಯಲಿರುವ ವಿಶ್ವ ಫೈನಲ್ಸ್‌ಗೆ ಅರ್ಹತೆ ಪಡೆದ ಕೃಷ್‌

admin by admin
October 26, 2026
in Newsbeat, Sports, ಕ್ರೀಡೆ
saakshatv-krish-gupta-national-rotax-karting-champion-world-finals-portugal

saakshatv-krish-gupta-national-rotax-karting-champion-world-finals-portugal

Share on FacebookShare on TwitterShare on WhatsappShare on Telegram

ಬೆಂಗಳೂರು: ರಾಯೋ ರೇಸಿಂಗ್‌ನ ಕೃಷ್ ಗುಪ್ತಾ ಅವರು ಬೆಂಗಳೂರಿನ ಕಾರ್ಟೋಪಿಯಾ ಸರ್ಕ್ಯೂಟ್‌ನಲ್ಲಿ ನಡೆದ ಮೆಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೊಟಾಕ್ಸ್ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನ ಆರನೇ ಹಾಗೂ ಅಂತಿಮ ಸುತ್ತಿನಲ್ಲಿ ಹಿರಿಯರ ವಿಭಾಗದಲ್ಲಿ ಪೋಡಿಯಂ ಸ್ಥಾನ ಪಡೆಯುವ ಮೂಲಕ ತಮ್ಮ ಚೊಚ್ಚಲ ರಾಷ್ಟ್ರೀಯ ರೊಟಾಕ್ಸ್ ಕಾರ್ಟಿಂಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಮುಂಬೈನ ಕೃಷ್ ಈ ಅಂತಿಮ ಸುತ್ತನ್ನು ಅತ್ಯಂತ ಕಳಪೆಯಾಗಿ ಆರಂಭಿಸಿದರು. ಕಳಪೆ ಕ್ವಾಲಿಫೈಯಿಂಗ್‌ನಿಂದಾಗಿ ಅವರು ಹದಿನಾರನೇ ಸ್ಥಾನಕ್ಕೆ ಕುಸಿದಿದ್ದರು. ಆದರೂ ಕೃಷ್ ಅದ್ಭುತವಾಗಿ ಚೇತರಿಸಿಕೊಂಡು, ಎರಡು ಹೀಟ್‌ಗಳಲ್ಲೂ 10 ಓವರ್‌ಟೇಕ್‌ಗಳನ್ನು ಮಾಡುವ ಮೂಲಕ ಎರಡರಲ್ಲೂ ಆರನೇ ಸ್ಥಾನ ಪಡೆದರು.
ಚಾಂಪಿಯನ್‌ಶಿಪ್ ಅಂಕಗಳನ್ನು ಹೊಂದಿರುವ ನಿರ್ಣಾಯಕ ಪ್ರಿ-ಫೈನಲ್‌ನಲ್ಲಿ ಕೃಷ್ ಆರನೇ ಸ್ಥಾನದಿಂದ ಆರಂಭಿಸಿದರು. ಕೆಲ ಕ್ಷಣದಲ್ಲೇ ಮೂರನೇ ಸ್ಥಾನಕ್ಕೆ ಜಿಗಿದ ಕೃಷ್‌, ಆ ಬಳಿಕ 2ನೇ ಸ್ಥಾನ ಪಡೆದು ಕೊನೆ ವರೆಗೂ ಅದೇ ಸ್ಥಾನ ಕಾಯ್ದುಕೊಂಡರು. ಚೆನ್ನೈನ ಎಸ್‌ಪೋರ್ಟ್ಸ್‌ನ ಇಶಾಂತ್ ವೆಂಕಟೇಶನ್ ಪ್ರಿ-ಫೈನಲ್ ಗೆದ್ದರು.
ಕೃಷ್ ಫೈನಲ್ ಅನ್ನು ಎರಡನೇ ಸ್ಥಾನದಿಂದ ಆರಂಭಿಸಿದರೂ, ಆರಂಭದಲ್ಲೇ ಮೂರನೇ ಸ್ಥಾನಕ್ಕೆ ಕುಸಿದರು. ನಂತರ ಅವರನ್ನು ಬೆಂಗಳೂರಿನ ಇಶಾನ್ ಮಾದೇಶ್ ಹಿಂದಿಕ್ಕಿದರು. ಆದರೆ ಅಂತಿಮವಾಗಿ ವೆಂಕಟೇಶನ್ ಮತ್ತು ಬೆಂಗಳೂರಿನ ಎಸ್‌ಪೋರ್ಟ್ಸ್‌ನ ರುಹಾನ್‌ ಆಳ್ವಾ ಅವರ ನಂತರ ಮೂರನೇ ಸ್ಥಾನ ಪಡೆದರು. ಕೃಷ್ ಪ್ರಿ-ಫೈನಲ್ ಮತ್ತು ಫೈನಲ್ ಎರಡರಲ್ಲೂ ತಮ್ಮ ಹತ್ತಿರದ ಚಾಂಪಿಯನ್‌ಶಿಪ್ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಸ್ಥಾನ ಪಡೆದರು. ಇದು ಕೃಷ್ ಅವರಿಗೆ ತಮ್ಮ ಚಾಂಪಿಯನ್‌ಶಿಪ್ ಮುನ್ನಡೆಯನ್ನು ವಿಸ್ತರಿಸಲು ಮತ್ತು ಪುಣೆಯ ಕ್ರೆಸ್ಟ್ ಮೋಟಾರ್‌ಸ್ಪೋರ್ಟ್ಸ್‌ನ ಅರ್ಜುನ್ ಛೇಡಾ ಹಾಗೂ ಬೆಂಗಳೂರಿನ ಅಕ್ಷತ್ ಮಿಶ್ರಾ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆಲ್ಲಲು ಅವಕಾಶ ಮಾಡಿಕೊಟ್ಟಿತು.
ರಾಯೋ ರೇಸಿಂಗ್‌ನ ಕೃಷ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಗೆಲುವುಗಳು ಮತ್ತು ಎರಡು ಮೂರನೇ ಸ್ಥಾನಗಳು ಸೇರಿದಂತೆ ಒಟ್ಟು ನಾಲ್ಕು ಪೋಡಿಯಂಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು 428 ಅಂಕಗಳೊಂದಿಗೆ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಛೇಡಾ 415 ಅಂಕಗಳೊಂದಿಗೆ ಮತ್ತು ಮಿಶ್ರಾ 414 ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ.
ವಿಶ್ವ ಫೈನಲ್ಸ್‌ಗೆ ಅರ್ಹತೆ
ರಾಷ್ಟ್ರೀಯ ಟ್ರೋಫಿಯ ಜೊತೆಗೆ, ರಾಯೋ ರೇಸಿಂಗ್ ಚಾಲಕ ಕೃಷ್ ಪೋರ್ಚುಗಲ್‌ನ ಪೋರ್ಟಿಮಾವೊದಲ್ಲಿ ನಡೆಯಲಿರುವ ರೊಟಾಕ್ಸ್ ವಿಶ್ವ ಫೈನಲ್ಸ್‌ನಲ್ಲಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಅಲ್ಲಿ 56ಕ್ಕೂ ಹೆಚ್ಚು ದೇಶಗಳ ಚಾಂಪಿಯನ್‌ಗಳು ವಿಶ್ವ ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದಾರೆ.

‘ನನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿಯು ನಾನು ಬಯಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಅಂತಿಮವಾಗಿ ರಾಷ್ಟ್ರೀಯ ಚಾಂಪಿಯನ್ ಆಗಿರುವುದು ತುಂಬಾ ಸಂತೋಷ ತಂದಿದೆ. ನನ್ನ ಪೋಷಕರು, ನನ್ನ ತಂಡ ಮತ್ತು ಮೆಕ್ಯಾನಿಕ್‌ಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಕೃಷ್ ಹೇಳಿದರು.

Related posts

saakshatv-mysuru-royals-win-first-kppl-title-tumakuru-titans

ಮೈಸೂರು ರಾಯಲ್ಸ್ ತಂಡಕ್ಕೆ ಕೆಪಿಪಿಎಲ್ ಮೊದಲ ಟ್ರೋಫಿ ಗರಿ

October 26, 2026
ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

October 26, 2026

ಎಂಟು ಬಾರಿಯ ರಾಷ್ಟ್ರೀಯ ಚಾಂಪಿಯನ್ ರಾಯೋಮಂಡ್ ಬನಾಜಿ ಮಾತನಾಡಿ, ‘ಕೃಷ್ ಕೆಲವು ವರ್ಷಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದರು. ಕೊನೆಗೂ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಗೆ ಅವರು ಅರ್ಹರು’ ಎಂದರು.

ShareTweetSendShare
Join us on:

Related Posts

saakshatv-mysuru-royals-win-first-kppl-title-tumakuru-titans

ಮೈಸೂರು ರಾಯಲ್ಸ್ ತಂಡಕ್ಕೆ ಕೆಪಿಪಿಎಲ್ ಮೊದಲ ಟ್ರೋಫಿ ಗರಿ

by admin
October 26, 2026
0

ಬೆಂಗಳೂರು: ಕರ್ನಾಟಕ ಪಿಕ್ಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ಮೊದಲ ಆವೃತ್ತಿಯು ರೋಚಕ ಅಂತ್ಯ ಕಂಡಿದ್ದು, ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ತುಮಕೂರು ಟೈಟಾನ್ಸ್ ತಂಡವನ್ನು ಮಣಿಸಿ 'ಮೈಸೂರು...

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

by Shwetha
October 26, 2026
0

ಕರ್ನಾಟಕ ರಾಜಕಾರಣದಲ್ಲಿ ಈಗ ವಾಗ್ದಾಳಿಗಳ ಸುರಿಮಳೆಯೇ ಶುರುವಾಗಿದೆ. ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್...

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

by Shwetha
October 26, 2026
0

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಹೊಸ ತಂತ್ರಗಳನ್ನು ಹೂಡುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ...

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

by Shwetha
October 26, 2026
0

ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಮತ ಕಳ್ಳತನದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಗ ಧರ್ಮಯುದ್ಧ ಸಾರಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನಬದ್ಧವಾಗಿ...

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

by Shwetha
October 26, 2026
0

ರಾಜ್ಯ ರಾಜಕಾರಣದ ಅಡಿಪಾಯವನ್ನೇ ಅಲುಗಾಡಿಸಿದ್ದ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಹೊಸ ಆಯಾಮ ಪಡೆದುಕೊಂಡಿದೆ. ಹೊಳೆನರಸೀಪುರದ ಮಾವಿನಕೆರೆ ಬೆಟ್ಟದಲ್ಲಿ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram