ವೃಕ್ಷೋ ರಕ್ಷತಿ ರಕ್ಷಿತಃ .. ಹಸಿರು ಬೆಳೆಸಿ, ಉಸಿರು ಉಳಿಸಿ Saakshatv Lahari environment day
ಮಳೆ ಬರುವ ಕಾಲಕ್ಕೆ
ಒಳಗ್ಯಾಕೆ ಕೂತೆವು
ಇಳೆಯೊಡನೆ ಜಳಕ ಮಾಡೋಣ
ಮೋಡಗಳ ಆಟ ಆಡೋಣ…
ಎಂಬ ಬೇಂದ್ರೆಯವರ ಹಾಡಿನಂತೆ
ಸುರಿಯುವ ಮಳೆಗೆ ಅರಳಿದ ಕೊಡೆಯೊಂದಿಗೆ ಕಾಲಿನಿಂದ ಮಳೆ ನೀರನ್ನು ಚಿಮ್ಮುತ್ತಾ, ಸುರಿಯುವ ಮಳೆಯಲ್ಲಿ ಒದ್ದೆಯಾಗುತ್ತಾ ಸಾಗುವುದೆಂದರೆ ಅದು ಒಂದು ಅದ್ಭುತ ಅನುಭವ..
ಜೂನ್ ಎಂದರೆ ಪ್ರಕೃತಿ ಮಾತೆ ಹಸಿರು ಸೀರೆಯನ್ನುಟ್ಟು ಕಂಗೊಳಿಸುವ ಸಮಯ. ಪರಿಸರವೆಲ್ಲವೂ ಹಸಿರನ್ನು ಹೊದ್ದು ಕಂಗೊಳಿಸುತ್ತಿದ್ದರೆ ಅದನ್ನು ಕಾಣಲು ಎರಡು ಕಣ್ಣು ಸಾಲದು. ಒಂದೆಡೆ ಬಿಟ್ಟು ಬಿಡದೇ ಒಂದೇ ಸಮನೆ ಧೋ ಎಂದು ಸುರಿಯುವ ಮಳೆಯ ಅಬ್ಬರವಾದರೆ, ಜೂನ್ 5 ಬಂತೆಂದರೆ ವನಮಹೋತ್ಸವದ ಆಚರಣೆ. ಎಲ್ಲರ ಬಾಯಲ್ಲೂ ಪರಿಸರ ಸಂರಕ್ಷಣೆಯ ಮಾತು, ಗಿಡ ನೆಡುವ ಸಡಗರ, ಪರಿಸರ ಉಳಿಸುವ ಪ್ರತಿಜ್ಞೆ..
ಆದರೆ ಜೂನ್ ತಿಂಗಳು ಮುಗಿಯುತ್ತಿದ್ದಂತೆ ಆಡಿದ ಮಾತು, ಪರಿಸರದ ಬಗೆಗಿನ ಕಾಳಜಿಯನ್ನು ಅಲ್ಲೇ ಮರೆತರೆ ಮತ್ತೆ ಅದು ನೆನಪಾಗುವುದು ಮತ್ತೊಂದು ವರ್ಷದ ಜೂನ್ ಬಂದಾಗಲೇ.. Saakshatv Lahari environment day

ನಮಗೆ ಎಲ್ಲವನ್ನು ಕೇಳದೆ ಕೊಟ್ಟ ಪ್ರಕೃತಿಯನ್ನು ನಾವು ಸ್ವಾರ್ಥದಿಂದ ನಾಶ ಮಾಡಿದ ಪರಿಣಾಮವನ್ನು ಇಂದು ಅನುಭವಿಸುತ್ತಿದ್ದೇವೆ.
ಕಾಡನ್ನು ಕಡಿದು ಕಾಂಕ್ರೀಟ್ ಕಟ್ಟಡ ಕಟ್ಟಿಸಿ ಪ್ರಕೃತಿಯ ಸಂತುಲನವನ್ನು ತಪ್ಪಿಸಿದ ನಾವು ಮುಖ ತೋರಿಸುವ ಯೋಗ್ಯತೆಯನ್ನು ಕಳೆದುಕೊಂಡು ಮುಖ ಮರೆಸಿ ಓಡಾಡುತ್ತಿದ್ದೇವೆ.
ಅಂತರ್ಜಲ ಕುಸಿತ, ಬಿರು ಬಿಸಿಲು, ಆಕಾಲಿಕ ಮಳೆಯಿಂದಲೂ ಪಾಠ ಕಲಿಯದ ನಮಗೆ ಕೊರೋನಾ ಎಂಬ ಮಹಾಮಾರಿ ಸರಿಯಾದ ಪಾಠವನ್ನೇ ಕಲಿಸಿದೆ. ಉಸಿರಾಡುವ ಗಾಳಿ ವಿಷಕಾರಿಯಾಗುತ್ತಿದೆ ಎಂದಾಗಲೂ ತಲೆಕೆಡಿಸಿಕೊಳ್ಳದ ನಮಗೆ ಕೊರೋನಾ ಎಂಬ ವೈರಸ್ ಅಮ್ಲಜನಕ ದ ಮಹತ್ವವನ್ನು ಅರ್ಥ ಮಾಡಿಸಿದೆ. ಇಂದು ಆರೋಗ್ಯದ ಬಗ್ಗೆ ಭೀತಿ ಹುಟ್ಟಿಸುವ ಕಂಡು ಕೇಳರಿಯದ ರೋಗರುಜಿನಗಳು ನಮ್ಮನ್ನು ಕಾಡುತ್ತಿವೆ. ಕೊರೋನ ಮಹಾಮಾರಿಯಿಂದ ಆಮ್ಲಜನಕದ ಕೊರತೆ ಕಾಣಿಸಿಕೊಂಡಿದ್ದು, ದುಡ್ಡು ಕೊಟ್ಟರೂ ಜೀವ ವಾಯು ಲಭ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ.
ಹೀಗೇಕೆ? ಇದಕ್ಕೆ ಯಾರು ಕಾರಣ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಒಂದೇ ಮಾನವನ ಸ್ವಯಂಕೃತಾಪರಾಧ..

ಮಳೆ ಹನಿಯ ಸುಂದರ ನೆನಪುಗಳನ್ನು ಮಾತ್ರ ಕಂಡಿದ್ದ ನಮಗೆ ಪ್ರಕೃತಿಯು ಮಳೆ ಹನಿಯಲ್ಲಿ ಅಡಗಿದ್ದ ಭೀಕರತೆಯ ಅನುಭವ ಮಾಡಿಸಿ ತನ್ನ ಕೋಪವನ್ನು ತೋರಿಸಿತು. ಆದರೂ ನಾವು ಬುದ್ಧಿ ಕಲಿಯಲಿಲ್ಲ.
ನಾನು ನನ್ನದು ಎಂದು ಮೆರೆಯುತ್ತಿದ್ದ ಮಾನವನಿಗೆ ಕೊನೆಗೆ ಬುದ್ದಿ ಕಲಿಸಲು, ಮನೆಯಿಂದ ಹೊರ ಬರಲು ಭಯಪಡುವಂತೆ ಮಾಡಲು ಕೊರೊನಾ ಎಂಬ ಭೀಕರ ಸಾಂಕ್ರಾಮಿಕ ರೋಗವೇ ಬರಬೇಕಾಯಿತು.
ಈ ಸಮಯದಲ್ಲಿ ಯಾರನ್ನೋ ದೂರುತ್ತಾ ಕೂರುವ ಬದಲು ನಾವು ನಡೆದು ಬಂದ ದಾರಿಯ ಕಡೆ ಒಮ್ಮೆ ಕಣ್ಣು ಹಾಯಿಸೋಣ. ಈಗಾಗಲೇ ಪ್ರಕೃತಿ ಮಾತೆ ಮುನಿಸಿಕೊಂಡು ವಿನಾಶದ ಸೂಚನೆ ನೀಡಿದ್ದಾಳೆ. ನಾವು ಈ ಭೂಮಿಗೆ ಬಂದಿರುವುದು ದೋಚಿಕೊಂಡು ಹೋಗಲು ಅಲ್ಲ ಬದಲಾಗಿ ಕೆಲ ಕಾಲ ಬದುಕಲು ಎಂಬುದನ್ನು ಅರ್ಥ ಮಾಡಿಕೊಂಡು ಇನ್ನಾದರೂ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸೋಣ…
ವೃಕ್ಷೋ ರಕ್ಷತಿ ರಕ್ಷಿತಃ .. ಹಸಿರು ಬೆಳೆಸಿ, ಉಸಿರು ಉಳಿಸುವ ಪುಟ್ಟ ಪ್ರಯತ್ನವನ್ನು ಇನ್ನಾದರೂ ನಾವು ಮಾಡೋಣ.
– ಶ್ವೇತ

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1399554408791396355?s=19
https://twitter.com/SaakshaTv/status/1399886565392932865?s=19
https://twitter.com/SaakshaTv/status/1399944087009042434?s=19
https://twitter.com/SaakshaTv/status/1399916926625669121?s=19
ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡಲಿದೆ 5 ಲಕ್ಷ ರೂಗಳವರೆಗೆ ಸಾಲ !#Banks #loans #covidtreatment https://t.co/tJYFqSyYYO
— Saaksha TV (@SaakshaTv) June 1, 2021








