ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಧರ್ಮ ಸ್ವತಂತ್ರ, ಧರ್ಮ ನಿರಾವಲಂಬಿ ಮತ್ತು ಧರ್ಮ ದೇವರಂತೆಯೇ ಸರ್ವವ್ಯಾಪಿ;

Shwetha by Shwetha
July 26, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Saakshatv Oshoyisam episode 3
Share on FacebookShare on TwitterShare on WhatsappShare on Telegram

ಧರ್ಮ ಸ್ವತಂತ್ರ, ಧರ್ಮ ನಿರಾವಲಂಬಿ ಮತ್ತು ಧರ್ಮ ದೇವರಂತೆಯೇ ಸರ್ವವ್ಯಾಪಿ;
ಧರ್ಮರಕ್ಷಕರೆಂಬ ಪಾಖಂಡಿಗಳಿಂದ ದೂರವಿರಿ ನಿಜವಾದ ಭಗವಂತ ನಿಮಗೆ ಹತ್ತಿರನಾಗುತ್ತಾನೆ:
Saakshatv Oshoyisam episode 3

ಓಶೋ ತಮ್ಮ ಉಪನ್ಯಾಸಗಳಲ್ಲಿ ನಿಜವಾದ ಧರ್ಮ ಎಂದರೇನು? ನಿಜವಾದ ಭಕ್ತಿ ಎಂದರೇನು? ಭಕ್ತಿಮಾರ್ಗದ ಅನುಸರಣೆ ಮುಕ್ತಿಮಾರ್ಗದ ನಿರೀಕ್ಷಣೆ ಮತ್ತು ಸದ್ಧರ್ಮ ಪಾಲನೆಯಿಂದ ಭಗವಂತನ ಒಲೈಕೆ ಹೇಗೆ ಸಾಧ್ಯ? ಎಂಬಿತ್ಯಾದಿಗಳು ಅನೇಕ ಆಯಾಮಗಳನ್ನು ಅನೇಕ ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ಓಶೋ ವ್ಯಾಖ್ಯಾನಿಸಿದ ಸ್ವತಂತ್ರ ಧರ್ಮ ಮತ್ತು ನಿರಾವಲಂಬಿ ಧರ್ಮಗಳು ಸಂಪ್ರದಾಯದತ್ತ ದೈವ ಕೇಂದ್ರಿತ ಧರ್ಮಕ್ಕೆ ಸಂಪೂರ್ಣ ವಿರುದ್ಧ
ದಿಕ್ಕಿನಲ್ಲಿರುವಂತದ್ದು. ಧರ್ಮ ಎನ್ನುವ ಅಂಶ ರಾಜಕಾರಣದ ಒಳಗೆ ಸೇರಿಕೊಂಡರೆ
ಅದರಿಂದಾಗುವ ಅಪಾಯಗಳೇನು? ಸಮಾಜವನ್ನು ಈ ಧರ್ಮ ರಾಜಕಾರಣ ಹೇಗೆ ಅಜ್ಞಾನದ ಕಂದಕಕ್ಕೆ ಕೆಡವುತ್ತದೆ ಎಂಬ ಕುರಿತಾಗಿಯೂ ಓಶೋ ಸುದೀರ್ಘವಾಗಿ ಚರ್ಚಿಸಿದ್ದಾರೆ. ಓಶೋ ಕಂಡುಕೊಂಡ ಭಗವಂತ, ಓಶೋ ದೃಷ್ಟಿಯಲ್ಲಿ ವ್ಯಾಖ್ಯಾನಿಸಿದ ಧರ್ಮಕ್ಕೆ ಯಾವುದೇ ಅವಲಂಬನೆಯ ಹಂಗಿಲ್ಲ. ಯಾವುದೇ ನೆಲೆಯ ಅವಶ್ಯಕತೆಯಿಲ್ಲ. ಯಾವುದೇ ಬಂಧನದ ಭೀತಿಯಿಲ್ಲ.
Saakshatv Oshoyisam episode 3
***
Saakshatv Oshoyisam episode 2
ಧರ್ಮ ಅನ್ನುವ ಭ್ರಾಂತಿಗೆ ಒಳಗಾಗುವವರೇ ಧರ್ಮ ರಕ್ಷಣೆ ಮಾಡುತ್ತೇವೆ ಎನ್ನುವ ಹುಚ್ಚು
ನೆತ್ತಿಗೇರಿಸಿಕೊಳ್ಳುತ್ತಾರೆ. ಧರ್ಮಕ್ಕೆ ಯಾವ ದೊಣ್ಣೆನಾಯಕನ ರಕ್ಷಣೆಯ ಅಗತ್ಯವೇ
ಇಲ್ಲ. ತಾನು ಧರ್ಮವನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಹೊತ್ತಿದ್ದೇನೆ ಎಂದು ಹೇಳುವ
ಹುಚ್ಚನಿಗೆ ಧರ್ಮದ ನಿಜವಾದ ಅರ್ಥವೇ ತಿಳಿದಿರುವುದಿಲ್ಲ. ಅವನು ತನ್ನ ಹುಚ್ಚನ್ನು
ಸಮಾಜಕ್ಕೆ ವರ್ಗಾಯಿಸುತ್ತಾನೆ. ಧರ್ಮದ ಅರ್ಥ ತಿಳಿಯದ ಸಮಾಜದ ಮುಗ್ದ ಜನ ಇದನ್ನೇ
ಸತ್ಯವೆಂದು ನಂಬಿಕೊಂಡು ಸಮೂಹ ಸನ್ನಿಯಲ್ಲಿ ತೇಲುತ್ತಾರೆ. ಧರ್ಮ ನಿರಾವಲಂಬಿ ಆದರೆ
ಧರ್ಮದ ರಕ್ಷಣೆ ಮಾಡುತ್ತೇವೆನ್ನುವ ಜನರಿದ್ದಾರಲ್ಲ ಅವರು ಪರಾವಲಂಬಿಗಳು. ಅವರು ಮೊದಲು ಹುಡುಕುವುದೇ ಧರ್ಮವೆನ್ನುವ ಅವರ ಹುಸಿ ನಂಬಿಕೆಯ ಬಳ್ಳಿಗೆ ದೈವ ಎನ್ನುವ ಬೃಹತ್‌ ವೃಕ್ಷ. ಇಲ್ಲಿ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾದ ಸತ್ಯವೊಂದಿದೆ. ಧರ್ಮ ಎನ್ನುವ ಮೂಲ ಆಶಯಕ್ಕೆ ಯಾವುದೇ ಆಸರೆಗಳ ಅಗತ್ಯವಿಲ್ಲ. ಅದು ತನ್ನಿಂತಾನೇ ಹಬ್ಬಿ ಹರಡುವ ಹಸಿರು ಪ್ರಕೃತಿಯಿದ್ದಂತೆ, ಪ್ರಕೃತಿಯಷ್ಟೇ ವಿಸ್ಮಯಕಾರಿ, ಪ್ರಕೃತಿಯಷ್ಟೇ ಕರುಣಾಮಯಿ ಹಾಗೂ ಪ್ರಕೃತಿಯಂತೆಯೇ ಸ್ವಚ್ಛಂದ ಪ್ರವೃತ್ತಿಯುಳ್ಳದ್ದು. ಅಸಲಿ ಧರ್ಮವೆನ್ನುವ ರಥಕ್ಕೆ
ಪ್ರಕೃತಿಯೇ ಕುದುರೆಗಳು. ಅಸಲಿ ಧರ್ಮ ಎನ್ನುವ ದೇವಾಲಯದ ಗರ್ಭಗುಡಿಯ ದೇವರು ಪ್ರಕೃತಿ
ಮಾತ್ರವೇ. ಅಸಲಿ ಧರ್ಮ ಎನ್ನುವ ಬೃಹತ್‌ ಸೌಧದ ತಳಪಾಯ ಪ್ರಕೃತಿ ಮಾತ್ರವೇ. ಅಸಲಿ ಧರ್ಮ ಎನ್ನುವ ಪತಂಗದ ಸೂತ್ರವೇ ಪ್ರಕೃತಿ. ಅಸಲಿ ಧರ್ಮ ಎನ್ನುವುದು ಒಂದು ಅನನ್ಯ
ಕಲಾಕೃತಿಯಾದರೇ ಅದನ್ನು ಕೆತ್ತುವ ಕಲಾವಿದ ಪ್ರಕೃತಿ. ಧರ್ಮ ಎನ್ನುವ ಪಾಠಶಾಲೆಗೆ
ಪ್ರಕೃತಿಯೇ ಏಕೋಪಾಧ್ಯಾಯ. ಧರ್ಮವನ್ನು ಉಳಿಸುತ್ತೇವೆ ಎಂದು ಬಡಾಯಿ
ಕೊಚ್ಚಿಕೊಳ್ಳುವ ಯಾರಿಗೂ ಧರ್ಮದ ಮೂಲನೀತಿಯ ಅರಿವೇ ಇರುವುದಿಲ್ಲ. ಅಸಲಿ ಧರ್ಮಹಿಡಿಯಲ್ಲಿ ಹಿಡಿದುಕೊಳ್ಳಲಾಗದ ಮಹಾಸಮುದ್ರದ ನೀರಿದ್ದಂತೆ. ಅದಕ್ಕೊಂದು ನೆಲೆ ಕೊಟ್ಟಿದ್ದು ಪ್ರಕೃತಿ ಎಂಬ ಗೋಚರ ವಾಸ್ತವ ಮಾತ್ರ. ಧರ್ಮ ಎನ್ನುವ ಬ್ರಹ್ಮನಿಗೆ ಸತ್ಯ,
ನ್ಯಾಯ, ಕಾರುಣ್ಯ ಮತ್ತು ಪ್ರೇಮಗಳೆಂಬ ನಾಲ್ಕು ತಲೆಗಳಿವೆ. ಧರ್ಮ ಎನ್ನುವ ಜಗನ್ಮಾತೆಗೆ ಒಂದು ಕಡೆ ಸತ್ಯ, ನ್ಯಾಯ, ಕಾರುಣ್ಯ ಮತ್ತು ಪ್ರೇಮ ಮತ್ತೊಂದು ಕಡೆ ಪ್ರಾಮಾಣಿಕತೆ, ಸಚ್ಚಾರಿತ್ರ್ಯ, ಸಹನೆ ಮತ್ತು ಪ್ರಜ್ಞಾವಂತಿಕೆ ಎಂಬ ಅಷ್ಟಬಾಹುಗಳಿವೆ. ಧರ್ಮ ಎಂಬ ಶಿವನ ಕೊರಳಲ್ಲಿ ಸತ್ಯ ಎಂಬ ಘಟಸರ್ಪವಿದೆ, ನ್ಯಾಯ ಎನ್ನುವ ತ್ರಿಶೂಲವಿದೆ, ಪ್ರೇಮ ಎನ್ನುವ ಮೂರನೆಯ ಕಣ್ಣು ಹಾಗೂ ಶಿರದಲ್ಲಿ ಕಾರುಣ್ಯವೆಂಬ ಗಂಗೆಯಿದ್ದಾಳೆ. ಧರ್ಮದ ಕಲ್ಪನೆಯನ್ನು ಹೀಗೆ ಮಾಡಿಕೊಳ್ಳಬೇಕೇ ವಿನಃ ದೈವ ಕೇಂದ್ರಿತವಾಗಿ ಧರ್ಮವನ್ನು ಸೃಜಿಸಬಾರದು. Saakshatv Oshoyisam episode 3
Saakshatv Oshoyisam episode 1

Related posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

August 13, 2026

ದೈವ ಕೇಂದ್ರಿತ ಧರ್ಮ ಎನ್ನುವುದೊಂದು ದೊಡ್ಡ ಮಿಥ್ಯ. ಈ ಕಪೋಲಕಲ್ಪಿತ ಮಿಥ್ಯಾ
ಧರ್ಮಕ್ಕೆ ನೆಲೆಯಿಲ್ಲ. ಇದಕ್ಕೊಂದು ಆಸರೆ ಬೇಕು. ಅದು ದೈವದ ಆಸರೆ, ದೇಗುಲಗಳ ಆಸರೆ, ಪುರೋಹಿತರ ಆಸರೆ, ಸಂಪ್ರದಾಯಗಳ ಆಸರೆ, ಚರ್ಚು-ಮಸೀದಿ-ಪ್ರಾರ್ಥನಾ ಮಂದಿರಗಳ ಆಸರೆ. ಈ ಮಿಥ್ಯಾ ಧರ್ಮ ಒಂದು ತರಹದ ಮಾರುಕಟ್ಟೆಯಷ್ಟೆ. ಇಲ್ಲಿ ಸ್ವತಃ ಈ ಮಿಥ್ಯಾ ಧರ್ಮವೇ ಒಂದು ಮಾರಾಟದ ಸರಕು. ಇಲ್ಲಿ ಅಧ್ಯಾತ್ಮದ ಹೆಸರಲ್ಲಿ ನಡೆಯುವುದು ಧರ್ಮಬೋಧನೆಯಲ್ಲ; ಶುದ್ಧ ವ್ಯಾಪಾರವಷ್ಟೆ. ನೀನು ಧರ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? ಧರ್ಮದ ದೃಷ್ಟಿಯಲ್ಲಿ ಧರ್ಮವನ್ನು ಅನುಸರಿಸುವವನು ಗ್ರಾಹಕನೇ? ಧರ್ಮದ ತಿರುಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಮೂರ್ಖರು ಧರ್ಮವನ್ನು ವ್ಯಾಪಾರ ಮಾಡಲು ಹೊರಟಿದ್ದಾರೆ. ಮೂರ್ಖರ ಮಾತುಗಳನ್ನೇ ನಂಬಿ ಅವರ ಬಾಯಲ್ಲಿ ಉದುರಿದ ಧರ್ಮದ ಸ್ವರೂಪವೇ ನಿಜವೆಂದುಕೊಂಡ ಅಧರ್ಮಿಗಳು ಮಾತ್ರ ಸಂಪ್ರದಾಯಗಳೆಂಬ ಕೂಪದಲ್ಲಿ ಬಿದ್ದು ಮೇಲೆ ಏಳಲಾಗದಂತೆ ಒದ್ದಾಡುತ್ತಿದ್ದಾರೆ. ಇವರಿಗೆ ಸತ್ಯದರ್ಶನ ಮಾಡಿಸಬೇಕು ಎಂದರೆ ಇವರ ಧರ್ಮವನ್ನು ಮಿಥ್ಯವೆಂದು ಸಾಬೀತು ಮಾಡಬೇಕು. ಆದರೆ ಮಿಥ್ಯಾ ಧರ್ಮದ ಅನುಸರಣೆಯೆಂಬ ಕುರುಡು ವ್ಯಾಮೋಹ ಇವರನ್ನು ಬಿಡಲಾರದು. ಒಂದು ವೇಳೆ ಇವರು ಸತ್ಯದರ್ಶನಕ್ಕೆ ಸಿದ್ಧರಾದರೂ ಇವರನ್ನು ದಾರಿ ತಪ್ಪಿಸಲು ಸಿದ್ಧರಾಗಿರುವ ಧೂರ್ತ ಧರ್ಮಪ್ರವರ್ತಕರು ಚಾಟಿ ಹಿಡಿದು
ನಿಂತಿರುತ್ತಾರೆ. ಇವರು ಜನರನ್ನು ಶ್ರದ್ಧೆಯಿಂದಲ್ಲ, ಭಕ್ತಿಯಿಂದಲ್ಲ ಕೇವಲ ಭಯದಿಂದ
ಕಟ್ಟಿಹಾಕಿದ್ದಾರೆ. ಅದೇ ದೈವದ ಭಯ, ಸಂಪ್ರದಾಯಗಳ ಭಯ, ಶಾಪದ ಭಯ.

ಈಶ್ವರನೋ, ಬ್ರಹ್ಮನೋ, ಅವತಾರಿ ವಿಷ್ಣುವೋ, ಜಗನ್ಮಾತೆಯೋ ತನ್ನ ಭಕ್ತರನ್ನು
ಪ್ರೀತಿಸುತ್ತಾರೆಯೇ ಅಥವಾ ಭಯಭೀತಗೊಳಿಸಿ ಕಪಿಮುಷ್ಟಿಯಲ್ಲಿ ಬಂಧಿಯಾಗಿಸಿಕೊಳ್ಳುತ್ತಾರೆಯೇ! ಪುರಾಣಗಳ ಪ್ರಕಾರ ಬ್ರಹ್ಮನಿಗೆ ಗುಡಿಯೇ ಇಲ್ಲ;
ಪೂಜೆಯೂ ಇಲ್ಲ. ಹಾಗೆಯೇ ಧರ್ಮಕ್ಕೂ ಸರಪಳಿ ಬಿಗಿದು ಲಾಯಕ್ಕೆ ಕಟ್ಟಿಹಾಕಬೇಕಿಲ್ಲ,
ಪೂಜೆಯಿಲ್ಲ ಎಂದ ಮಾತ್ರಕ್ಕೆ ಬ್ರಹ್ಮನ ಅಸ್ತಿತ್ವ ಸುಳ್ಳೇ? ಅವನು ಸೃಷ್ಟಿಕರ್ತನಲ್ಲವೇ? ಹಾಗೆಯೇ ಧರ್ಮದ ಅಸ್ತಿತ್ವವೂ ಸಹ, ಅದನ್ನು ಪ್ರತಿನಿತ್ಯ
ಆರಾಧಿಸಿ, ಮಂತ್ರಾಕ್ಷತೆ, ಧೂಪದೀಪಾರತಿ ಮಾಡಿ ಭಜಿಸುವ ಅಗತ್ಯವಿಲ್ಲ. ಅದರ ಪಾಡಿಗದು
ಇರುತ್ತದೆ. ನಾವು ಅಸಲಿ ಧರ್ಮಸೂತ್ರಗಳನ್ನು ಪಾಲಿಸಿ ಬದುಕಿದರಷ್ಟೇ ಸಾಕು. ಪುರಾಣಗಳ
ಅನ್ವಯ ಶಿವನಿಗೆ ಬದಲು ಲಿಂಗಕ್ಕೆ ಪೂಜೆಯಾಗುತ್ತದೆ ಅಂದರೆ ಧರ್ಮದ ವ್ಯಾಖ್ಯಾನ ಎನ್ನುವ ಅಲಂಕಾರಕ್ಕೆ ಬದಲು ಧರ್ಮಸೂತ್ರವೆಂಬ ಲಿಂಗವನ್ನು ಆರಾಧಿಸಿದರೆ ಸಾಕು. ಧರ್ಮಸಂಸ್ಥಾಪನೆಗೆ ವಿಷ್ಣು ಹತ್ತು ಅವತಾರಗಳನ್ನು ಎತ್ತಿದ; …ಸಂಭವಾಮಿ ಯುಗೇ ಯುಗೇ. Saakshatv Oshoyisam episode 3
Saakshatv Oshoyisam episode 1

ಧರ್ಮಕ್ಕೂ ಅವತಾರಗಳಿವೆ. ಆಯಾ ಕಾಲಘಟ್ಟಕ್ಕನುಗುಣವಾಗಿ ಧರ್ಮವೂ ರೂಪಾಂತರ ಹೊಂದುವ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಮಾಡಿಕೊಳ್ಳುತ್ತದೆ. ಆದರೆ ಧರ್ಮದ ಮೂಲನೆಲೆಯಾದ ಸತ್ಯ, ನ್ಯಾಯ, ಕಾರುಣ್ಯ ಮತ್ತು ಪ್ರೇಮಗಳ ಮೂಲಪ್ರತಿಮೆ ಹಾಗೆಯೇ ಇರುತ್ತದೆ. ನಾವು ಉತ್ಸವ ಮೂರ್ತಿಯನ್ನು ಮಾತ್ರ ಗಮನಿಸುತ್ತಿದ್ದೇವೆ, ನಮಿಸುತ್ತಿದ್ದೇವೆ. ನಿಜವಾದ ಮೂರ್ತಿ ಗರ್ಭಗುಡಿಯಲ್ಲಿದೆ.

ಧರ್ಮ ಸಂಸ್ಥಾಪನೆಗೆ ಸಂಘಟನೆಗಳ ಅವಶ್ಯಕತೆಯೇ ಇಲ್ಲ. ಧರ್ಮವನ್ನು ಜನ
ಹೃದಯದಲ್ಲಿಟ್ಟುಕೊಂಡರೇ ಸಾಕು, ಸಂಘ ಕಟ್ಟಿ ಧರ್ಮವನ್ನುಳಿಸಬೇಕಾದ ಜರೂರತ್ತು ಎಂದಿಗೂ
ಇಲ್ಲ. ಯಾವುದಾದರೂ ಧರ್ಮ ರಕ್ಷಣೆಯ ಸಂಘಟನೆ ಅಸ್ಥಿತ್ವದಲ್ಲಿದೆ ಎಂದಾದರೇ ಅವರ ಅಸಲು ಉದ್ದೇಶ ಧರ್ಮ ರಕ್ಷಣೆಯಲ್ಲ ಅದರ ಹಿಂದಿನ ಅಜೆಂಡಾ ಬೇರೆಯೇ ಇದೆ ಎಂದು ಅರ್ಥ
ಮಾಡಿಕೊಳ್ಳಬೇಕಿದೆ. ಧರ್ಮ ಎನ್ನುವ ಎರಡೂವರೆ ಅಕ್ಷರದ ಪದ ರಾಜಕಾರಣದ ಅತ್ಯಂತ ಶಕ್ತಿಶಾಲಿ ಅಸ್ತ್ರ. ರಾಜಕಾರಣವಾಗಲೀ, ಪ್ರಭುತ್ವವಾಗಲೀ ಧರ್ಮವನ್ನು ಉಳಿಸುವುದಿಲ್ಲ.
ಧರ್ಮರಕ್ಷಣೆಯ ಪ್ರತಿಜ್ಞೆ ಮಾಡುವ ಯಾವ ನೇತಾರರೂ, ನಾಯಕರೂ, ಧರ್ಮಗುರುಗಳೂ ಧರ್ಮವನ್ನು ರಕ್ಷಿಸುವ ಕೆಲಸ ಮಾಡುವುದಿಲ್ಲ. ಧರ್ಮಕ್ಕೆ ರಕ್ಷಣೆಯೇ ಬೇಕಿಲ್ಲ ಎಂದ ಮೇಲೆ
ಅದಕ್ಕೊಂದು ಸಂಘಟನೆಯೇತಕ್ಕೆ. ಧರ್ಮ ಎನ್ನುವುದು ಸ್ವತಂತ್ರ ಸ್ಥಿತಿ. ಅದು
ಸ್ವತಂತ್ರವಾಗಿ ಬದುಕುತ್ತದೆ, ಸ್ವತಂತ್ರವಾಗಿ ಚಲಿಸುತ್ತದೆ. ಧರ್ಮವನ್ನು ಸಂಘಟನೆಗಳು
ಬಂಧಿಸಿ ಪೋಷಿಸುವ ಮೂರ್ಖ ಪ್ರಯತ್ನ ಮಾಡುತ್ತವೆ. ಧರ್ಮಸಂಘಟನೆ ಎನ್ನುವುದು
ಬೊಗಸೆಯಲ್ಲಿ ತುಂಬಿಕೊಂಡ ಹಿಡಿನೀರಿನಷ್ಟು ಮಾತ್ರ. ಧರ್ಮದ ಗಾತ್ರ ವ್ಯಾಪ್ತಿ ಮತ್ತು
ವಿಸ್ತಾರ ಬಹುದೊಡ್ಡದು. ಅದನ್ನು ಅಳತೆ ಮಾಡುವ ಸಾಮರ್ಥ್ಯ ಅವರಿಗಾರಿಗೂ ಇಲ್ಲ.
ತಮ್ಮನ್ನು ತಾವು ಧರ್ಮನಿಷ್ಠರು ಮತ್ತು ಧರ್ಮ ರಕ್ಷಕರು ಎಂದು ಕರೆದುಕೊಳ್ಳುವ ಮಂದಿ
ಮೂರ್ಖರಷ್ಟೇ ಅಲ್ಲ ನಿಜವಾದ ಧರ್ಮಕಂಟಕರು. ಇವರು ಒಂದಿಡೀ ಸಮಾಜದ ದಾರಿ ತಪ್ಪಿಸಿ ಅಜ್ಞಾನಿಗಳನ್ನಾಗಿಸಿ ಅಧರ್ಮಿಗಳನ್ನಾಗಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಅಸಲು ಧರ್ಮ ಯಾವತ್ತಿಗೂ ಇಂತಹವರನ್ನು ಕ್ಷಮಿಸುವುದಿಲ್ಲ.
Saakshatv Oshoyisam episode 2

ಅಂತಿಮವಾಗಿ ನಾವು ಅರ್ಥಮಾಡಿಕೊಳ್ಳಬೇಕಿರುವುದು ಪ್ರಕೃತಿ ಎಂಬ ವಾಸ್ತವ ಸತ್ಯ ಮಾತ್ರವೇ. ನಿಜವಾದ ಧರ್ಮ ಉಳಿದ ದೈವಗಳೆಲ್ಲವೂ ಮಿಥ್ಯೆ. ಉಳಿದ ಸಂಪ್ರದಾಯಗಳು, ಗುಡಿ, ಚರ್ಚು,
ಮಸೀದಿ, ಪ್ರಾರ್ಥನಾಮಂದಿರಗಳ ಪ್ರೇರಿತ ಪುರೋಹಿತಶಾಹಿಗಳೆಲ್ಲವೂ ಮಿಥ್ಯೆ. ಸ್ವಾರ್ಥ,
ಕಪಟ, ವಂಚನೆ, ಲೋಭ, ಕುಯುಕ್ತಿ, ಅಜ್ಞಾನ, ಅವಿವೇಕತನ, ಅಧರ್ಮ ರಾಜಕಾರಣ
ಇವೆಲ್ಲವುಗಳಿದ್ದಲ್ಲಿ ಧರ್ಮವಿರುವುದಿಲ್ಲ. ಧರ್ಮ ರಾಜಕಾರಣ ಮತ್ತು ಧರ್ಮ ಸಂಘಟನೆಗಳು
ಈ ಮೇಲಿನ ಎಲ್ಲಾ ಗುಣಗಳ ಆಶ್ರಯದಾತ ವ್ಯವಸ್ಥೆ. ಹೀಗಿದ್ದಾಗ ಅಸಲು ಧರ್ಮ ಇಲ್ಲಿ ಹೇಗೆ
ಬದುಕಿದ್ದೀತು? ಧರ್ಮವಿದ್ದಲ್ಲಿ ದೇವರಿರುವುದಿಲ್ಲ. ದೇವರಿದ್ದಲ್ಲಿ ಧರ್ಮವಿರುವುದಿಲ್ಲ. ದೇವರೇ ಬೇರೆ, ಪ್ರಕೃತಿಯೇ ಬೇರೆ, ಧರ್ಮವೇ ಬೇರೆ. ಈ ಮೂರು ಆಯಾಮಗಳು ಒಂದಕ್ಕೊಂದು ವಿರುದ್ಧ ಪದಗಳು. ಭಕ್ತಿಮಾರ್ಗ, ಮುಕ್ತಿಮಾರ್ಗ ಮತ್ತು ಅಸಲು ಸದ್ಧರ್ಮ ಪಾಲನೆಯಿಂದ ಮಾತ್ರ ನಿಜವಾದ ದೇವರು ಒಲಿಯುತ್ತಾನೆ. ಆತ ಮಂದಿರ, ಮಸೀದಿ, ಚರ್ಚುಗಳ ಚೌಕಟ್ಟಿನಲ್ಲಿ ಬಂಧಿಯಲ್ಲ. ಧರ್ಮ ಹೇಗೆ ಸ್ವತಂತ್ರವೋ ದೇವರೂ ಹಾಗೆಯೇ ಸ್ವತಂತ್ರ. ಧರ್ಮ ಹೇಗೆ ಸರ್ವವ್ಯಾಪಿಯೋ ದೇವರೂ ಹಾಗೆಯೇ ಸರ್ವವ್ಯಾಪಿ. ಅಣುರೇಣು ತೃಣಕಾಷ್ಟಗಳಲ್ಲಿ ದೇವರಿದ್ದಂತೆ ಧರ್ಮವೂ ಹಾಸುಹೊಕ್ಕಿರುತ್ತದೆ. ಧರ್ಮರಕ್ಷಕರೆಂಬ ಪಾಖಂಡಿಗಳಿಂದ ದೂರವಿರಿ ಆಗ ಮಾತ್ರ ನೀವು ಸದ್ಧರ್ಮ ಪರಿಪಾಲಕರಾಗುತ್ತೀರಾ, ನಿಜದೇವರಿಗೆ ಹತ್ತಿರವಾಗುತ್ತೀರಾ.

-ವಿಶ್ವಾಸ್‌ ಭಾರದ್ವಾಜ್‌ (ವಿಭಾ)
***

#Oshoyisam #ಓಶೋ #ವಿಭಾ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

 

Tags: Saakshatv Oshoyisam episode
ShareTweetSendShare
Join us on:

Related Posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram