ADVERTISEMENT
Tuesday, August 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಧರ್ಮ ಅವಿನಾಶಿ; ಅದನ್ನು ಯಾರೂ ರಕ್ಷಿಸಬೇಕಿಲ್ಲ, ಅದೇ ಎಲ್ಲರನ್ನೂ ರಕ್ಷಿಸುತ್ತದೆ-ಭಗವಂತನ ಸಾಕ್ಷಾತ್ಕಾರವಾಗಬೇಕಿದ್ದರೇ ಶಾಸ್ತ್ರಗಳನ್ನು ಪ್ರಶ್ನಿಸಿ

Mahesh M Dhandu by Mahesh M Dhandu
May 15, 2021
in Marjala Manthana, Newsbeat, ಮಾರ್ಜಲ ಮಂಥನ
Oshoyisam
Share on FacebookShare on TwitterShare on WhatsappShare on Telegram

ಧರ್ಮ ಅವಿನಾಶಿ; ಅದನ್ನು ಯಾರೂ ರಕ್ಷಿಸಬೇಕಿಲ್ಲ, ಅದೇ ಎಲ್ಲರನ್ನೂ ರಕ್ಷಿಸುತ್ತದೆ-ಭಗವಂತನ ಸಾಕ್ಷಾತ್ಕಾರವಾಗಬೇಕಿದ್ದರೇ ಶಾಸ್ತ್ರಗಳನ್ನು ಪ್ರಶ್ನಿಸಿ:

ಓಶೋ, ಧ್ಯಾನದ ಕುರಿತಾಗಿ ಸಾಕಷ್ಟು ಬಾರಿ ತಮ್ಮ ಪ್ರವಚನದಲ್ಲಿ ಮಾತಾಡಿದ್ದಾರೆ. ಅವರ ದೃಷ್ಟಿಯಲ್ಲಿ ಧ್ಯಾನವೆಂದರೇ ಭಕ್ತಿ ಮಾರ್ಗದ ಅನುಸರಣೆ ಮತ್ತು ಮುಕ್ತಿ ಮಾರ್ಗದ ನಿರೀಕ್ಷೆ. ಧ್ಯಾನದ ಮಹತ್ವ ಹೇಳುವ ಪ್ರತೀ ಬಾರಿಯೂ ಅವರು ಡಾಂಭಿಕತೆಯನ್ನು ವಿಡಂಬಿಸಿದ್ದಾರೆ. ಶಾಸ್ತ್ರ-ಸಂಪ್ರದಾಯ ಮತ್ತು ಕಂದಾಚಾರಗಳನ್ನು ನೇರವಾಗಿ ಟೀಕಿಸಿದ್ದಾರೆ. ಓಶೋ ಮತ್ತವರ ಧ್ಯಾನ ಅರ್ಥವಾಗಬೇಕಿದ್ದರೇ ಅವರ ಭಕ್ತಿ ಮಾರ್ಗ, ಮುಕ್ತಿ ಮಾರ್ಗ ಮತ್ತು ಭಗವಂತನ ಸಾಕ್ಷಾತ್ಕಾರದ ವಿಧಾನಗಳನ್ನು ಅರ್ಥ ಮಾಡಿಕೊಳ್ಳಬೇಕು.

Related posts

politics/r-ashok-lead-bjp-jds-padayatra-against-bidadi-township-project

ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ, ಯೋಜನೆ ಜಾರಿಗೆ ಅವಕಾಶ ನೀಡಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ

August 10, 2026
ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

August 10, 2026

ಕಟ್ಟುಪಾಡುಗಳು, ನಂಬಿಕೆ-ಆಚರಣೆಗಳು, ಶ್ರದ್ಧೆ-ಭಕ್ತಿ, ಆಸ್ಥೆ-ಆರಾಧನೆಗಳು ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿವೆ. ಪರಂಪರೆಯನ್ನು ಧಿಕ್ಕರಿಸಿ ಬದುಕುವುದು ಸುಲಭ ಸಾಧ್ಯವಲ್ಲ, ಎಲ್ಲರಿಂದಲೂ ಸಾಧ್ಯವಿಲ್ಲ. ಮೌಢ್ಯಗಳನ್ನು ವಿರೋಧಿಸುವವನು ಶಾಸ್ತ್ರಗಳ-ಸಂಪ್ರದಾಯಗಳ ಇತಿಹಾಸ ಮತ್ತು ಆಚರಣೆಗಳನ್ನು ಅರಿತುಕೊಂಡೇ ವಿರೋಧಿಸಬೇಕೇ ವಿನಃ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆನೆಯನ್ನು ಮುಟ್ಟಿದಂತೆ ಇದಮಿತ್ಥಂ ಎನ್ನಬಾರದು. ನೀವು ಹೊಸ ಇತಿಹಾಸವನ್ನು ಸೃಷ್ಟಿಸುವ ಮೊದಲು ಹಳೆಯ ಇತಿಹಾಸವನ್ನು ಅರಿತಿರಲೇಬೇಕು ಎನ್ನುವುದು ಕೇವಲ ರೂಢಿಮಾತಲ್ಲ, ಇದೇ ಸತ್ಯ. ನಿಮ್ಮ ವ್ಯವಸ್ಥೆಯ ಅರ್ಥಮಾಡಿಕೊಳ್ಳದೇ ವ್ಯವಸ್ಥೆಯನ್ನು ದೂಷಿಸುತ್ತಾ ಕೂರುವುದು ಒಂದು ಬಗೆಯ ಅಜ್ಞಾನವಿದ್ದಂತೆ. ಹಾಗೆಯೇ ಶಾಸ್ತ್ರ ಸಂಪ್ರದಾಯಗಳನ್ನು ವಿನಾಕಾರಣ ಜರಿಯುವ ಬದಲು, ಅದರಲ್ಲಿನ ಹುಳುಕುಗಳನ್ನು ಗುರುತಿಸಬೇಕು. ಸುಮ್ಮನೆ ಅವಹೇಳನೆ ಮಾಡುವ ಬದಲು ನ್ಯೂನ್ಯತೆಗಳನ್ನು ಬಯಲು ಮಾಡಬೇಕು. ನಿಜವಾದ ನಂಬಿಕೆ ಯಾವುದು? ನಿಜವಾದ ಭಕ್ತಿ ಯಾವುದು? ನಿಜವಾದ ಆಚರಣೆ ಹೇಗಿರಬೇಕು? ಮೌಢ್ಯಗಳೆಂದರೆ ಏನು? ಅನ್ನುವುದರ ಸ್ಪಷ್ಟ ವ್ಯಾಖ್ಯಾನ ನೀಡಬೇಕು. ಹೀಗಾದಾಗ ಮಾತ್ರ ಪರಂಪರೆಗಳಿಗೆ ಬದ್ಧರಾಗಿರುವವರಲ್ಲಿ ಅರಿವು ಮೂಡಲು ಸಾಧ್ಯ. ಸತ್ಯದ ದಾರಿಯನ್ನು ತೋರಿಸುವ ಮೊದಲು ಮಿಥ್ಯಾಹಾದಿಯ ಪ್ರಭಾವ ನಾಶ ಮಾಡಲೇಬೇಕು.

ಈಗ ಶಾಸ್ತ್ರಗಳ ವಿಚಾರಕ್ಕೆ ಬರೋಣ. ನೀವು ಶಾಸ್ತ್ರಗಳನ್ನು ಓದಿಕೊಂಡಿದ್ದೀರಾ? ಆಯ್ತು ಒಪ್ಪಿಕೊಳ್ಳೋಣ ನೀವು ಶಾಸ್ತ್ರಗಳನ್ನು ಓದಿಕೊಂಡು ಸಂಪ್ರದಾಯಕ್ಕನುಗುಣವಾಗಿ ಅದನ್ನು ಪಾಲಿಸುತ್ತಾ ಬಂದಿದ್ದೀರಾ! ಸರಿ ನೀವು ಶಾಸ್ತ್ರಗಳನ್ನು ಓದಿಕೊಂಡ ಬಗೆ ಹೇಗೆ? ವೇದ, ಉಪನಿಷತ್‌, ಗೀತೆ, ಇತ್ಯಾದಿಗಳು ನಿಮಗೆ ಅರ್ಥವಾದ ಬಗೆ ಹೇಗೆ? ನಿಮ್ಮ ಪರಿಕಲ್ಪನೆಯಲ್ಲಿ ಶಾಸ್ತ್ರಗಳೆಂದರೇನು? ಸಂಪ್ರದಾಯಗಳ ಪಾಲನೆಯಿಂದ ಭಗವಂತನ ಧ್ಯಾನ, ಸ್ಮರಣೆ, ತಪನೆ, ಆರಾಧನೆಗಳು ಹೇಗೆ ಸಾಧ್ಯ? ಶಾಸ್ತ್ರಗಳು ನಿಮಗೆ ಹೇಗೆ ಅರ್ಥವಾಗಿವೆ? ನಿಮ್ಮ ಪರಿಕಲ್ಪನೆಯಂತೆ ಶಾಸ್ತ್ರಗಳ ವ್ಯಾಖ್ಯಾನವೇನು? ಭಕ್ತಿಮಾರ್ಗ ಮತ್ತು ಮುಕ್ತಿಮಾರ್ಗಕ್ಕೂ ನಿಮ್ಮ ಶಾಸ್ತ್ರ ಸಂಪ್ರದಾಯಗಳ ಕಟ್ಟುಪಾಡಿಗೂ ಇರುವ ಸಂಬಂಧಗಳೇನು? ಶಾಸ್ತ್ರಕ್ಕೂ ಧರ್ಮಕ್ಕೂ ನಡುವಿನ ಸಂಬಂಧವೇನು? ಭಗವಂತನಿಗೂ ಶಾಸ್ತ್ರಕ್ಕೂ ಇರುವ ಸಂಬಂಧವೇನು? ಈ ತರಹ ವಿವಿಧ ಕೋನಗಳಲ್ಲಿ ನಿಖರವಾಗಿ ಮತ್ತು ಸ್ಪಷ್ಟವಾಗಿ ಪ್ರಶ್ನಿಸಿ, ಉತ್ತರ ಪಡೆದುಕೊಳ್ಳಿ. ಅವರಿಗೆ ನಿಮ್ಮ ಪ್ರಶ್ನೆಗಳಲ್ಲೇ ಶಾಸ್ತ್ರದ ಕುರಿತಾಗಿ ಸ್ಪಷ್ಟ ಆಲೋಚನೆ ಮೂಡಬೇಕು. ನಿಮ್ಮ ಪ್ರಶ್ನೆಗಳು ಅವರನ್ನು ಚಿಂತನೆಗೆ ಹಚ್ಚಬೇಕು. ತಮ್ಮೊಳಗೆ ಅವರು ಸಂಪ್ರದಾಯ ಮತ್ತು ಭಕ್ತಿ-ಮುಕ್ತಿಮಾರ್ಗಗಳ ಕುರಿತಾಗಿ ಅಂತರಂಗವನ್ನು ಮಥಿಸುವಂತಾಗಬೇಕು. ಇಷ್ಟಾದರೆ ನಿಮ್ಮ ನಂತರದ ದಾರಿ ಬಹುಸುಲಭ. ಒಬ್ಬ ವ್ಯಕ್ತಿ ತಾನು ನಡೆಯುತ್ತಿರುವ ಹಾದಿ ಸರಿ ಎಂದುಕೊಂಡೇ ಚಲಿಸುತ್ತಿದ್ದಾನೆ ಎಂದುಕೊಳ್ಳಿ. ಅವನು ಹೋಗುವ ಮಾರ್ಗ ತಪ್ಪಿದ್ದರೇ, ಅದು ನಿಮ್ಮ ಗಮನಕ್ಕೆ ಬಂತಾದರೇ, ಕೂಡಲೇ ಆ ವ್ಯಕ್ತಿಯನ್ನು ಪ್ರಶ್ನಿಸಿ. ಅವನು ನಡೆಯುವ ದಾರಿಯ ಬಗ್ಗೆ ತಿಳಿಸಿ. ಆ ದಾರಿಯ ಕುರಿತಾಗಿ ಅವನಿಗೆ ಎಷ್ಟು ಜ್ಞಾನವಿದೆ? ಸ್ಪಷ್ಟತೆಯಿದೆ? ಎಂದು ತಿಳಿದುಕೊಳ್ಳಿ. ತಾನು ನಡೆಯುತ್ತಿರುವ ದಾರಿ ಸರಿಯಲ್ಲವಾ? ಎನ್ನುವ ಸಂದೇಹ ಅವನಿಗೆ ಬಂದ ನಂತರವೇ ಸರಿಯಾದ ದಾರಿಯ ಬಗ್ಗೆ ತಿಳಿಸಿಕೊಡಿ. ಇದೇ ನಿಜವಾದ ಅರಿವಿನ ವಿಧಾನ; ಶಿಕ್ಷಣ ಮತ್ತು ಕಲಿಕಾ ಕ್ರಮ.

ಶಾಸ್ತ್ರಗಳು ಮತ್ತು ಸಂಪ್ರದಾಯಗಳ ಬಗ್ಗೆ ಒಂದು ಮಾತು. ಸಾಯುವ ಸಮಯದಲ್ಲಿ ಭಗವನ್ನಾಮ ಸ್ಮರಣೆಯಿಂದ ಮಾತ್ರವೇ ಮುಕ್ತಿ ಸಾಧ್ಯವಾಗುತ್ತದೆ ಎಂದಾದರೇ, ಬದುಕಿನ ಕರ್ಮಗಳ ಪಾಡೇನು? ಒಬ್ಬ ಪರಮ ಕ್ರೂರಿ, ಅನಾಗರೀಕ, ಅಮಾನವೀಯ ಗುಣಗಳುಳ್ಳ ನೀಚ ಅಧಮ ಬದುಕಿನುದ್ದಕ್ಕೂ ಪಾಪಕಾರ್ಯಗಳನ್ನೇ ಮಾಡಿ ಸಾಯುವಾಗ ಶ್ರೀರಾಮಚಂದ್ರ ಪ್ರಭುವಿನ ಹೆಸರು ಹೇಳಿದನೆಂದರೇ ಅವನ ಬದುಕಿನ ಪಾಪಕರ್ಮಗಳಿಂದ ಅವನಿಗೆ ಮುಕ್ತಿ ದೊರಕಿಬಿಡುತ್ತದೆಯೇ? ರಾಮಚಂದ್ರಪ್ರಭು ಅಷ್ಟು ದಯಾಮಯನೇ ಆದರೇ ಈ ಭೂಮಿಯಲ್ಲಿ ಪುಣ್ಯವಂತರಿಗೆ ಆ ದೇವರು ಮಾಡುವ ಅನ್ಯಾಯ ಅದಲ್ಲವೇ? ಹೀಗೆಯೇ ಆಗುತ್ತದೆ ಎಂದಾದರೇ ಭೂಮಿಯಲ್ಲಿ ಪುಣ್ಯವಂತರೇ ಕಡಿಮೆಯಾಗಿ ಪಾಪಿಗಳ ಸಂಖ್ಯೆಯೇ ಹೆಚ್ಚಾಗುತ್ತದೆ ಅಲ್ಲವೇ? ಹೇಗಿದ್ದರೂ ಸಾಯುವಾಗ ರಾಮಚಂದ್ರ ಪ್ರಭು ಎನ್ನುವ ಆಂಟಿಸಿಪೇಟರಿ ಬೇಲ್‌ ತೆಗೆದುಕೊಳ್ಳಬಹುದು ಎನ್ನುವುದು ಖಾತ್ರಿಯಾದರೇ ಯಾವ ಮನುಷ್ಯ ಬದುಕಿನಲ್ಲಿ ಸತ್ಕರ್ಮಗಳನ್ನು ಮಾಡಿ ಬಾಳುತ್ತಾನೆ? ನೀಚರು, ಅಯೋಗ್ಯರು, ಕಳ್ಳರು, ಖೂಳರು, ಖದೀಮರು, ಪಾತಕಿಗಳು, ರಕ್ತಪಿಪಾಸುಗಳು, ದರೋಡೆಕೋರರು, ಸಂಚುಕೋರರು, ಅತ್ಯಾಚಾರಿಗಳು ಮುಂತಾದ ಪಾಪಿಗಳ ಸಂಖ್ಯೆ ಹೆಚ್ಚಾದರೆ ಅದು ಧರ್ಮ ಹೇಗಾದೀತು? ಹೀಗೆ ಅಧರ್ಮ ಹೆಚ್ಚಾದಾಗ ಮಾತ್ರವಲ್ಲವೇ ಅವನು ಅವತಾರವೆತ್ತಿ ಬಂದು ದುಷ್ಟ ಶಿಕ್ಷಕನಾಗಿ, ಶಿಷ್ಟ ರಕ್ಷಕನಾಗಿ ಕರ್ತವ್ಯ ನಿಭಾಯಿಸುವುದು; ಸಂಭವಾಮಿ ಯುಗೇ ಯುಗೇ..

Oshoyisam

ಸಂಪ್ರದಾಯಗಳು ಇಟ್ಟು ಪೂಜಿಸುವ ದೈವವೂ ಅಲ್ಲ, ಸುಟ್ಟು ಹಾಕಲು ಹೆಣವೂ ಅಲ್ಲ ಅನ್ನುವ ಮಾತು ಸವಕಳಿಯಾಗುವಷ್ಟು ಹಳೆಯದಾಗಿದೆ. ಈಗ ಸಂಪ್ರದಾಯಗಳ ಹುಳುಕು ಬಯಲು ಮಾಡಬೇಕಾದ ಕಾಲಘಟ್ಟದಲ್ಲಿದ್ದೇವೆ. ಇದು ಅರಿವಿನ ಕಾಲ, ಮಾಹಿತಿಯ ಕಾಲ, ಸಾಕ್ಷರತೆಯ ಕಾಲ, ತಂತ್ರಜ್ಞಾನದ ಕಾಲ, ವಿವೇಕ ಬೆಳೆಸಿಕೊಳ್ಳುವ ಪ್ರಶಸ್ತ ಕಾಲ. ಸಂಪ್ರದಾಯಗಳಲ್ಲಿ ಪದೇ ಪದೇ ಉಲ್ಲೇಖಿಸಲ್ಪಡುವ ಉಪನಿಷತ್‌ ನ ನಿಜವಾದ ಅರ್ಥವೇ ಬ್ರಹ್ಮಜ್ಞಾನವನ್ನು ಬೋಧಿಸುವುದು ಮತ್ತು ಅಜ್ಞಾನವನ್ನು ನಿವಾರಿಸುವುದು. ಬ್ರಹ್ಮಜ್ಞಾನ ಅಥವಾ ಆತ್ಮಜ್ಞಾನವನ್ನು ಬೋಧಿಸುವ ಉಪನಿಷತ್‌ ನಲ್ಲಿ ನೇತಿ ಎಂಬ ಪದವಿದೆ. ಋಗ್ವೇದದಲ್ಲಿ ಇರುವಷ್ಟು ನಾಸ್ತಿಕವಾದ ಮತ್ತೆಲ್ಲೂ ಇಲ್ಲ. ನೇತಿ ಅಂದರೆ ನʼಇತಿ, ಆದಿ ಶಂಕರರೂ ನೇತಿ ಎಂಬುದನ್ನು ಅನೇಕ ಬಾರಿ ಅನೇಕ ಆಯಾಮಗಳಲ್ಲಿ ಬಳಸಿದ್ದಾರೆ. ಋಗ್ವೇದದ ಛಾಂದೋಗ್ಯದಲ್ಲಿ ಕೆಲವು ವಿವರಣೆಗಳಿವೆ ಗಮನಿಸಿ. ಋಗ್ವೇದದಲ್ಲಿ ಹೇಳುವ ಮೊದಲ ಮಾತೇ ಮೊದಲು ಸೃಷ್ಟಿಯ ರಚನೆಯಾಯಿತು ನಂತರ ದೇವರುಗಳ ಸೃಷ್ಟಿಯಾಯಿತು ಎನ್ನುವುದು. ಛಾಂದೋಗ್ಯದಲ್ಲಿಯೇ “ಏಕಂ ಇವಾಂ ಅದ್ವಿತೀಯಂ” ಅಂದರೆ ದೇವರು ಮತ್ತು ಆತ್ಮ ಎರಡೂ ಒಂದೇ ಎನ್ನುವ ವಿವರಣೆಯಿದೆ ಮತ್ತು “ತತ್‌ ತ್ವಮ್‌ ಆಸಿ” ಅಂದರೆ ಆ ದೇವರೇ ನೀನು ಎನ್ನುವ ಅರ್ಥ. ಶಂಕರರ ಅದ್ವೈತ ಹೇಳುವಂತೆ “ಅಹಂ ಬ್ರಹ್ಮಾಸ್ಮಿ” ಎನ್ನುವುದೂ ಇದೇ ನೆಲೆಯಲ್ಲಿದೆ. ಈ ಮೂಲ ವಿಚಾರವನ್ನು ಯಾವ ಸಂಪ್ರದಾಯಗಳು ಹೇಳುವುದೂ ಇಲ್ಲ, ಪಾಲಿಸುವುದೂ ಇಲ್ಲ, ಬೋಧಿಸುವುದೂ ಇಲ್ಲ.

ಶಾಸ್ತ್ರ ಮತ್ತು ಸಂಪ್ರದಾಯಗಳು ಹೇಳದೇ ಮುಚ್ಚಿಟ್ಟ ಮುಖ್ಯ ಸಂಗತಿಯೇ ದೇವರು ಮತ್ತು ನಾವು. ನಾವು ಹೊರಗೆಲ್ಲೋ ದೇವರನ್ನು ಹುಡುಕುತ್ತೇವೆ. ಪ್ರತಿಮೆ ಸ್ಥಾಪಿಸಿ, ಗುಡಿ ಕಟ್ಟಿ ಪೂಜಿಸಿ, ಮಂತ್ರ ಭಜಿಸಿ, ಶ್ಲೋಕ ಹಾಡಿ, ಮಡಿ ಮಡಿಯೆಂದು ಬಡಿದಾಡಿ, ಬಲಿ ಕೊಟ್ಟು, ನೈವೇದ್ಯವ ಮಾಡಿ ಯಾವ ದೇವರನ್ನು ಮೆಚ್ಚಿಸುತ್ತಿದ್ದೇವೆ. ಒಳಗಿರುವ ದೇವರನ್ನು ಕಂಡುಕೊಳ್ಳುವ ಬದಲು ಹೊರಗಿನ ದೇವರ ಅಲಂಕಾರ ಮಾಡಿ, ಭಜನೆ ಮಾಡಿ ಮೆರವಣಿಗೆ ಮಾಡಿದರೆ ಏನು ಪ್ರಯೋಜನ. ಆತ್ಮದಲ್ಲಿ ಸತ್ಯವಾದ ಬೆಳಕು ಮೂಡದೇ ಭಗವಂತನ ಸಾಕ್ಷಾತ್ಕಾರ ಹೇಗಾದೀತು? ಧರ್ಮವೆಂದರೆ ಒಳಗಿನ ದೇವರನ್ನು ಕಂಡುಕೊಳ್ಳುವುದು. ನಮ್ಮ ಚಿತ್ತದಲ್ಲಿನ ಅಜ್ಞಾನ-ಅಂಧಕಾರಗಳನ್ನು ತೊಲಗಿಸಿ ಬೆಳಕು ಮೂಡಿಸದ ಹೊರತು ನಮಗೆ ಭಗವಂತನ ಅನುಗ್ರಹವಾಗುವುದೆಂತು? ಆತ್ಮಜ್ಞಾನ ಬೇಕಿದ್ದರೇ ಆತ್ಮದಲ್ಲಿ ಶೂನ್ಯ ಸ್ಥಿತಿ ಬೇಕು. ನಿರ್ವಾತ ಸೃಷ್ಟಿಯಾಗಬೇಕು. ಖಾಲಿಯಾಗುವ ಆತ್ಮದಲ್ಲಿ ದಯೆ, ಅನುಕಂಪ, ಪ್ರೀತಿ, ಸಹನೆ, ಪರೋಪಕಾರ ಇತ್ಯಾದಿ ಮಾನವೀಯ ಗುಣಗಳನ್ನು ತುಂಬಿಕೊಳ್ಳಬೇಕು. ಆಗ ಬರುತ್ತಾನೆ ಭಗವಂತ ನಮ್ಮ ನಿಜವಾದ ಭಕ್ತಿಗೆ ಮೆಚ್ಚಿ ಮುಕ್ತಿ ಮಾರ್ಗ ಕರುಣಿಸಲು. ಧ್ಯಾನದಿಂದ ಭಕ್ತಿ ಮಾರ್ಗ ಮುಕ್ತಿ ಮಾರ್ಗಗಳು ಸಿದ್ಧಿಸುವುದೇ ಹೊರತು ಕಂದಾಚಾರ, ಸಂಪ್ರದಾಯ, ಮೌಢ್ಯ, ಕಟ್ಟುಪಾಡು ಆಚರಣೆಗಳ ತೋರಿಕೆಯ ಭಕ್ತಿಯಿಂದಲ್ಲ. ನೀವೇ ನಿರ್ಮಿಸಿದ ಭವ್ಯ ಆಡಂಬರದ ದೇವರ ಗರ್ಭಗುಡಿಯ ಮುಂದೆ ಕೈ ಮುಗಿದು ಕಣ್ಣು ಮುಚ್ಚಿ ಪ್ರಾರ್ಥಿಸಿಕೊಳ್ಳುವಾಗಲೂ ನಿಮ್ಮ ಮನಸಿನಲ್ಲಿ ಅರಿಷಡ್ವರ್ಗಗಳ ಕೆಟ್ಟ ಪಾಕ ಬೇಯುತ್ತದೆ. ದೇವರೇನು ಕಣ್ಣು ಮುಚ್ಚಿಕೊಂಡು ಕೂತಿರುತ್ತಾನಾ? ಸರ್ವಶಕ್ತ, ಸರ್ವವ್ಯಾಪಿಯಾದ ಆ ಭಗವಂತನಿಗೆ ನಿಮ್ಮೊಳಗೆ ನಡೆಯುವ ಆಂದೋಲನಗಳು ಕಾಣಿಸುವುದಿಲ್ಲವೇ?

ಭಕ್ತಿ ಮಾರ್ಗಕ್ಕೆ ಯಾವುದೇ ಪರ್ಯಾಯಗಳಿಲ್ಲ. ಇರುವುದೊಂದೇ ನೇರವಾದ ದಾರಿ. ಧ್ಯಾನ ಮತ್ತು ಸದ್ಧರ್ಮ ಪಾಲನೆ. ಧರ್ಮ ಎಂದೂ ಅವಿನಾಶಿ. ಧರ್ಮವನ್ನು ಯಾರೂ ರಕ್ಷಿಸಬೇಕಾಗಿಲ್ಲ. ಧರ್ಮ ಎಲ್ಲರನ್ನೂ ರಕ್ಷಿಸುತ್ತದೆ ಮತ್ತು ಅಗತ್ಯ ಬಿದ್ದರೇ ಅಧರ್ಮವನ್ನು ಬುಡಸಹಿತ ಕಿತ್ತುಹಾಕುತ್ತದೆ. ಯಾಕಂದರೇ ನಿಜವಾದ ಧರ್ಮವನ್ನು ಮನುಷ್ಯ ಮಾಡಿದ್ದಲ್ಲ. ಅದು ಆದ್ಯಂತರಹಿತ ಭಗವಂತನ ಕಾಣಿಕೆ. ಧರ್ಮವನ್ನು ಅರ್ಥವೇ ಮಾಡಿಕೊಳ್ಳದ ನಾವು ಧರ್ಮ ರಕ್ಷಣೆಯ ಪೊಳ್ಳು ಮಾತುಗಳನ್ನಾಡುತ್ತೀವಿ. ಇದೊಂದು ತರಹ ಮಣ್ಣಿನ ಭಗವಂತನ ಪ್ರತಿಮೆಗಳನ್ನು ಮಾಡುವ ಕಲಾವಿದ, ತಾನು ಮೂರ್ತಿಯನ್ನು ನಿರ್ಮಿಸಿದೆ ಎಂದು ಹೇಳಿಕೊಳ್ಳುವಂತೆ ಅಷ್ಟೆ. ಆ ಕಲಾವಿದ ತಯಾರಿಸಿದ್ದು ಭಗವಂತನ ಕಾಲ್ಪನಿಕ ಮೂರ್ತಿಯನ್ನೇ ವಿನಃ ಅಮೂರ್ತ, ಅಜೇಯ, ನಿರಾಕಾರ, ನಿರ್ಗುಣ ಸ್ಥಿತಿಯ ಭಗವಂತನ್ನಲ್ಲ. ಧ್ಯಾನದಿಂದ ಮಾತ್ರ ಭಗವಂತನನ್ನು ತಲುಪಲು ಸಾಧ್ಯ. ಆದರೆ ಧ್ಯಾನ ಹೇಗೆ ಮಾಡಬೇಕು ಅನ್ನುವ ಕಲಿಕೆ ಬಹುತೇಕ ಜನರಿಗೆ ಇಲ್ಲ. ಆತ್ಮದೊಂದಿಗೆ ಮೈತ್ರಿ ಸಾಧಿಸಿದಾಗ, ನಿನ್ನ ಅಸ್ತಿತ್ವವನ್ನು ನೀನೇ ಪ್ರಶ್ನಿಸಿದಾಗ, ನಿನ್ನ ಅಹಂಕಾರ ತೊರೆದು ನೀನು ಯಾರೂ ಅಲ್ಲ ಎನ್ನುವ ಅರಿವಾದಾಗ, ನಿನ್ನೊಳಗೆ ಕಾರುಣ್ಯ ಬೆರೆತಾಗ ಧ್ಯಾನಸ್ತ ಸ್ಥಿತಿ ಸಿದ್ಧಿಯಾಗುತ್ತದೆ. ಇದು ಪರಮಾತ್ಮನನ್ನು ತಲುಪುವ ಹಾದಿಯ ಮೊದಲ ಮೆಟ್ಟಿಲಷ್ಟೆ. ಶಾಸ್ತ್ರ ಸಂಪ್ರದಾಯಗಳ ಆಚರಣೆಯೇ ಮುಖ್ಯವಾದಾಗ ಧ್ಯಾನ, ಭಕ್ತಿ ಮತ್ತು ಮುಕ್ತಿ ಮಾರ್ಗಗಳು ಅಸ್ಪಷ್ಟವಾಗುತ್ತವೆ. ಇಷ್ಟು ಮಾತ್ರ ಸತ್ಯ, ಉಳಿದಿದ್ದು ನಿಮ್ಮ ಅಂತರಂಗವನ್ನು ಶೋಧಿಸಿಕೊಳ್ಳಬೇಕಾದ ವಿಚಾರ.

-ವಿಶ್ವಾಸ್‌ ಪ್ರಭಾಕರ್‌ ಭಾರದ್ವಾಜ್‌ (ವಿಭಾ)

Tags: #Saaksha TVmarjala manthanaOshoyisam
ShareTweetSendShare
Join us on:

Related Posts

politics/r-ashok-lead-bjp-jds-padayatra-against-bidadi-township-project

ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ, ಯೋಜನೆ ಜಾರಿಗೆ ಅವಕಾಶ ನೀಡಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 10, 2026
0

  ಇದು ಕಾಂಗ್ರೆಸ್‌ ಸರ್ಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿಡದಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕರು ಬಿಡದಿ,  ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ...

ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 10, 2026
0

  ಬೆಂಗಳೂರು, ಸಚಿವ ಬಿ.ನಾಗೇಂದ್ರ ಕಳಂಕಿತರಾಗಿದ್ದು, ಮುಖ್ಯಮಂತ್ರಿಗೆ ಬೆದರಿಕೆ ಹಾಕಿರುವುದರಿಂದಲೇ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲು ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿ ಹೋರಾಟ...

entertainment/santhosh-balaraj-bentlee-movie-trailer-released-loose-mada-yogi-pramod-shetty-emotional

ನಟ ಸಂತೋಷ್ ಬಾಲರಾಜ್ ‘ಬೆಂಟ್ಲಿ’ ಟ್ರೇಲರ್ ರಿಲೀಸ್: ಭಾವುಕರಾದ ಲೂಸ್ ಮಾದ ಯೋಗಿ, ಪ್ರಮೋದ್ ಶೆಟ್ಟಿ!

by admin
August 10, 2026
0

  ಬೆಂಗಳೂರು: 'ಗಣಪ' ಮತ್ತು 'ಕರಿಯ-2' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ನಟ ಸಂತೋಷ್ ಬಾಲರಾಜ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ...

entertainment/dheeren-ramkumar-pabbar-movie-shooting-completed-release-soon

ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ

by admin
August 10, 2026
0

​ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಪಬ್ಬಾರ್' ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 'ಶಾಖಾಹಾರಿ' ಚಿತ್ರದ...

https://www.zee5.com/movies/details/lenin/0-0-1z5lenin2026

by admin
August 10, 2026
0

ಝೀ 5' ನಲ್ಲಿ ಆಗಸ್ಟ್ 7 ರಿಂದಲೇ ಸ್ಟ್ರೀಮಿಂಗ್‌ ಆರಂಭಿಸಿದ 'ಅಯ್ಯಗಾರು' ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್'; ಕನ್ನಡದಲ್ಲೂ ನೋಡಬಹುದು! ಅಖಿಲ್ ಅಕ್ಕಿನೇನಿ ಅವರ ವೃತ್ತಿಜೀವನದ ಅತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram