ವೃದ್ಧಿ ಸಮೃದ್ಧಿ
ಬೆಳಿಗ್ಗೆ 6.00 ಸೂರ್ಯ ತನ್ನ ದಿನವನ್ನು ಪ್ರಾರಂಭಿಸುವ ಸಮಯ. ಕೆಲವರು ತಮ್ಮ ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಮುಸುಕು ಹೊದ್ದು ಮಲಗಿರುತ್ತಾರೆ, ಇನ್ನೂ ಕೆಲವರು ತಮಗೆ ಎಚ್ಚರವಾಗಿದ್ದರೂ ತಾಯಿಗೆ ಎಲ್ಲಿ ತಿಳಿದು ಕೆಲಸ ಹಚ್ಚುವಳೋ ಎಂಬ ಭಯದಿಂದ ಮಲಗಿರುವಂತೆ ನಟಿಸುವವರು ಹೀಗೆ ಹಲವರ ದಿನಚರಿ ಪ್ರಾರಂಭ…
ಆದರೆ, ನನಗೆ?
ದಿನ ಪ್ರಾರಂಭವಾದಾಗಿನಿಂದಲೂ ಯೋಚನೆಯೇ ಬೆನ್ನು ಬಿಡದ ಬೇತಾಳದಂತೆ…
ಈ ಹೊರ ಜಗತ್ತಿನ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದು ನನ್ನ ತಂಗಿಯಿಂದ….
ನನ್ನ ಸುಖದ ಪಾಲುದಾರಳು ಅವಳಾಗಿರುತ್ತಾಳೆ..
ಆದರೆ, ನನ್ನಿಂದ ಅವಳಿಗೆ ಸಿಗುತ್ತಿರುವುದು ಬರೀ ನೋವು….
ಎಷ್ಟೋ ಸಲ ನನ್ನ ನೋವಿಗೆ ತಲೆ ಕೆಡಿಸಿಕೊಳ್ಳುವಳು. ಇದರಿಂದ ಚಿಕ್ಕಮ್ಮನ ಬಳಿ ದನಿ ಏರಿಸಬೇಡ ಎಂದರೂ ಅವಳದ್ದೊಂದು ಹಠ……..

ಇನ್ನೂ
ನಮ್ಮ ಬಗ್ಗೆ ಸ್ವಲ್ಪ ಹೇಳುತ್ತೇನೆ,
ನನ್ನ ಹೆಸರು ವೃದ್ಧಿ
ನನ್ನ ಪುಟ್ಟ ತಂಗಿ ಸಮೃದ್ಧಿ
ನಮ್ಮಿಬ್ಬರ ಬೇಕು-ಬೇಡಗಳನ್ನು ನೋಡಿಕೊಳ್ಳುವುದು ನಮ್ಮ ಚಿಕ್ಕಮ್ಮ ಸರಸ್ವತಿ
ಇವರು ನಮಗೆ ಯಾವುದೇ ರೀತಿಯ ಬೇಧ ಭಾವ ಮಾಡಿಲ್ಲ ತಮ್ಮ ಮಕ್ಕಳಂತೆ ನೋಡಿಕೊಂಡಿದ್ದಾರೆ. ಆದರೆ ಈಗ ಒಂದು ತಿಂಗಳಿನಿಂದ ಇವರು ನನ್ನನ್ನು ಕಡೆ ಗಣಿಸುತ್ತಿದ್ದಾರೆ. ಕಾರಣ ನಾನು ಮನೆ ಕೆಲಸ ಬಿಟ್ಟರೆ ಯಾವುದೇ ರೀತಿಯಿಂದ ಅವರಿಗೆ ಸಹಾಯ ಮಾಡುತ್ತಿಲ್ಲವೆಂದು.
ನಾನೇನು ಮಾಡಲಿ ಸರಿಯಾದ ವಿಧ್ಯಾಭ್ಯಾಸ ನನಗಿಲ್ಲ.
ಬೇರೆ ಕೆಲಸ ನಡೆಸುವ ಎಂದರೆ ನನಗೆ ಹೊರಗಿನ ಪ್ರಪಂಚದ ಅನೇಕ ವಿಷಯಗಳು ತಿಳಿದೇ ಇಲ್ಲ.
ನನ್ನ ತಂಗಿ ಹಾಗಲ್ಲ,ಚಿಕ್ಕಮ್ಮ ಇಬ್ಬರಿಗೂ ವಿದ್ಯೆ ಕಲಿಸುವಾಗ ಅವಳು ಚೆನ್ನಾಗಿ ಕಲಿತಳು., ನನಗೆ ವಿದ್ಯೆ ಕಲಿಯುವ ಸಮಯದಲ್ಲಿ ಮನೆಯ ಜವಬ್ದಾರಿಯುತ ಕೆಲಸ ತಡೆಯಿತು.
ಈಗ ನನ್ನಿಂದ ಯಾವುದೇ ಪ್ರಯೋಜನವಿಲ್ಲ…..
ನನಗೆ ಅನಿಸುತ್ತಿರುವುದು ಏನೆಂದರೇ
ಒಂದೂ ಸರಿಯಾದ ಶಿಕ್ಷಣ ಪಡೆಯುವುದು/
ಹೊರ ಪ್ರಪಂಚದ ಜ್ಞಾನ ತಿಳಿಯುವುದು.
ಈ ಎರಡೂ ಗುಣವೂ ನನ್ನಲ್ಲಿ ಇಲ್ವ.
ನಮ್ಮ ಮನಸಿನಲ್ಲಿ ಸಾಧಿಸಬೇಕೆಂಬ ಹಂಬಲವಾದರೂ ಇರಬೇಕು.
ಯಾವುದೇ ಬಗೆಯ ಗುರಿ ಇಲ್ಲವಾದಲ್ಲಿ
ನಾವಿಕನಿಲ್ಲದ ದೋಣಿಯಂತೆ…..
ನಾವಿಕ ನಮ್ಮ ಮನಸಿನ ಛಲವಾದರೆ,
ದೋಣಿ ನಮ್ಮ ಜೀವನ…..
ಇದೆ
– ಶ್ರುತಿ ಭಾರದ್ವಾಜ್







