ಅಧ್ಯಾಯ 1
“ ಮನಸ್ವಿ ಈ ಟ್ರಿಪ್ ಸಖತ್ ಎಕ್ಸೈಟ್ ಆಗಿರುತ್ತೆ ಅನ್ನುಸ್ತಿದೆ ಕಣೆ , ನಿನಗೆ..??? ..”
ಸುನೇನಾ ಮಾತಿಗೆ ಉತ್ತರಿಸುವ ಮನಸ್ವಿ ” ಯಾರಿಗ್ ಗೊತ್ತು ಹೋಗೇ ,,, ನನಗ್ಯಾಕೋ ಈ ಟ್ರಿಪ್ ನಮೆಲ್ಲರ ಲೈಫ್ ಬದಲಾಯಿಸುತ್ತೆ ಅನ್ನುಸ್ತಿದೆ…”
” ಖಂಡಿತ ಹೌದು ನಮ್ ಲೈಫ್ ಬದಲಾಗುತ್ತೆ… ಯಾಕೆಂದರೆ ನಾವು ಹೋಗುತ್ತಿರುವುದು… ಡಾಕ್ಯುಮೆಂಟರಿ ಮಾಡಲಿಕ್ಕೆ.. ನಾಳೆ ದಿನ ನಾವೆಲ್ಲಾ ಈ ಡಾಕ್ಯುಮೆಂಟರಿ ಸಕ್ಸಸ್ ಆಗಿ ಇಂಟರ್ ನ್ಯಾಷನಲ್ ಕಾಂಪಿಟೇಷನ್ ಗೆ ಆಯ್ಕೆ ಆದ್ರೆ ,,, ನಾವ್ ಫೇಮಸ್ ಆಗ್ತಿವಿ.. ನಮ್ಮ ಕೆರಿಯರ್ ಗೆ ಅದು ಸುವರ್ಣ ರಹದಾರಿ ಆಗಲಿದೆ ” ಎನ್ನುವ ಮಾಧವ್ ನ ಮಾತು ಕೇಳಿ ಮಿಕ್ಕವರು ಎಕ್ಸೈಟ್ ಆದ್ರೂ ಮನಸ್ವಿ ಮನಸ್ಸು ಚಡಪಡಿಸುತಿತ್ತು… ಏನೋ ದೊಡ್ಡದಾಗಿಯೇ ನಡೆಯಲಿದೆ ಅನ್ನೋ ಭಯ ಆತಂಕ ಅವಳಲ್ಲಿ.
ಅವಳ ಭಯಕ್ಕೂ ಒಂದು ಅರ್ಥವಿದೆ.. ಅವಳ ಕನಸ್ಸಲ್ಲಿ ರಾತ್ರಿ ಬಂದಿದಂತಹ ಜಾಗವೇ ಈಗ ಅವರು ಸಂಚರಿಸುತ್ತಿರುವ ಜಾಗದಂತೆ ಕಾಣಿಸುತಿತ್ತು… ಹಾಗಾಗಿ ಅವಳ ಭಯಕ್ಕೊಂದು ಅರ್ಥವಿತ್ತು..
ಅವರೆಲ್ಲಾ ನಕ್ಷತ್ರ ಕಾಲೇಜಿನ ಆರ್ಟ್ಸ್ ಸ್ಟೂಡೆಂಟ್ಸ್ ,,ಎಲ್ಲರೂ ಫೈನಲ್ ಇಯರ್ ಸ್ಟೂಡೆಂಟ್ಸ್.. ಕಾಲೇಜಿನ ವತಿಯಿಂದ ಇಂಟರ್ ನ್ಯಾಷನಲ್ ರೂಕಿ ಕಾಂಪಿಟೇಷನ್ ಗಾಗಿ ಪಾರ್ಟಿಸಿಪೇಟ್ ಮಾಡಿದ್ದ ಟೀಮ್..
ಟೀಮ್ ನಲ್ಲಿದ್ದವರು 9 ಜನರು… ಹೋಗ್ತಿದ್ದದ್ದು ಕಾಲೇಜ್ ಬಸ್ ನಲ್ಲಿ… ಎತ್ತ ಕಣ್ಣಾಡಿಸಿದ್ರೂ ದಟ್ಟಾರಣ್ಯ… ನೀರವ ಮೌನ…. ಮನಸ್ಸಿಗೆ ಮುದ ನೀಡುತ್ತಿದ್ದ ಪ್ರಶಾಂತತೆ ಜೊತೆಗೆ ಹಿತ ನೀಡುತ್ತಿದ್ದ ತಂಪು ತಂಗಾಳಿ…
ಮನಸ್ವಿ ಮನಸ್ಸು ಗೊಂದಲದಲ್ಲಿತ್ತು… ಮಿಕ್ಕವರೇನೋ ಮಜಾ ಮಾಡುತ್ತಾ ಡ್ಯಾನ್ಸ್ ಮಾಡುತ್ತಾ ಹಾಡು ಹಾಡುತ್ತ ಜರ್ನಿಯನ್ನ ಖುಷಿಯಾಗಿ ಎಂಜಾಯ್ ಮಾಡಿದರು..
ಅಂತೂ ಇಂತೂ ಎಲ್ಲರೂ ಬಂದು ತಲುಪಬೇಕಿದ್ದ ಜಾಗಕ್ಕೆ ತಲುಪಿದ್ದರು.. ಅದೇ ಗಾರ್ಣಿಕಪುರ.. ಗಾರ್ಣಿಕ ಕಾಡಿನ ಮಗ್ಗಲಲ್ಲಿ ಇದ್ದ ಊರಾಚೆ.. ಕಾಲೇಜಿನ ಕಡೆಯಿಂದ ಕಳುಹಿಸಲಾಗಿದ್ದ ಇಂಚಾರ್ಜ್ ಗಳು ಅಲ್ಲೆ ಅರಣ್ಯ ವ್ಯಾಪ್ತಿಯಲ್ಲೇ ಇದ್ದ ಒಂದು ಹಳೆಯದಾದ ಬಹುದೊಡ್ಡ ಗೆಸ್ಟ್ ಹೌಸ ಗೆ ಹೋಗುವರು..
ಎಲ್ಲರೂ ಆ ಗೆಸ್ಟ್ ಹೌಸ್ ನ ಸೌಂದರ್ಯಕ್ಕೆ ಮಾರು ಹೋಗಿದ್ದರು.. ಅತಿ ಹಳೆಯದ್ದಾದರೂ ಅದರ ವಾಸ್ತುಶಿಲ್ಪ ಯಾರನ್ನಾದ್ರೂ ಆಕರ್ಷಿಸುವಂತೆ ಇತ್ತು.. ಸುಮಾರು ಒಂದ್ 5 ರಿಂದ 7 ರೂಮ್ ಗಳಿದ್ದವು..
ಐವರು ಹುಡುಗರು … ( ಮಾಧವ್ , ಸನಂತ್ , ಮೊಹನ್ , ಫಯಾಜ್, ಜಾನ್ )
ನಾಲ್ವರು ಹುಡುಗೀರು…( ಮನಸ್ವಿ , ಸುನೇನಾ , ಮೇರಿ, ರೇಷ್ಮ )
ಎಲ್ಲರೂ ಆ ಗೆಸ್ಟ್ ಹೌಸ್ ಒಳಗೆ ಹೊರಗೆ ನೋಡುತ್ತಾ ಅದನ್ನ ಬಾಯ್ತುಂಬ ಹೊಗಳಿನೇ ಸುಸ್ತಾಗಿದ್ದರು… ಹೋಗಿ ರೂಮ್ ಗಳಲ್ಲಿ ಬ್ಯಾಗ್ ಇಟ್ಟು ಎಲ್ಲರೂ ಫ್ರೆಶ್ ಅಪ್ ಆಗಿ ಬಂದು ಹಾಲ್ ಸೇರೋದ್ರೊಳಗೆ ಸಮಯ 11 ಗಂಟೆ ರಾತ್ರಿಯಾಗಿತ್ತು…
ಅಡಿಗೆ ಮಾಡಲಿಕ್ಕೆ ಕಾಲೇಜ್ ಕಡೆಯಿಂದ ಸಿಬ್ಬಂದಿಯನ್ನೂ ವ್ಯವಸ್ಥೆ ಮಾಡಲಾಗಿತ್ತು.. ಆದ್ರೆ ಅವರು ಅಲ್ಲಿಯ ಸ್ಥಳೀಯರು.. ಅಡುಗೆ ತಯಾರು ಮಾಡಿದ್ದರು.. ಹೋಗಿ ಊಟ ಮಾಡುತ್ತಿದ್ದರು ಹರಟೆ ಹೊಡೆಯುತ್ತಾ..
ಬೆಳಿಗ್ಗೆ ಎದ್ದವರು ಫಾರೆಸ್ಟ್ ಗೆ ಹೋಗಿ ರಿಸರ್ಚ್ ಮಾಡಿ ಪ್ಲಾನ್ ಮಾಡಿಕೊಳ್ಬೇಕಿತ್ತು.. ಇದ್ದದ್ದು ಅವರ ಬಳಿ ಒಂದ್ 7 -8 ದಿನಗಳಷ್ಟೇ ಈ ಪ್ರಾಜೆಕ್ಟ್ ಮುಗಿಸಿ ಸಬ್ಮಿಟ್ ಮಾಡಲಿಕ್ಕೆ.. ಸದ್ಯಕ್ಕೆ ಅವರಿಗೆ ಕಾಲೇಜ್ ಕಡೆಯಿಂದ ಸುರಕ್ಷತೆ ಮತ್ತು ಎಲ್ಲಾ ವ್ಯವಸ್ಥೆ ನೋಎಇಕೊಳ್ಳುವುದಕ್ಕೆ ಇಬ್ಬರು ಇಂಚಾರ್ಜ್ ಗಳನ್ನ ಕಳುಹಿಸಲಾಗಿತ್ತು…
ಎಲ್ಲರೂ ಹೀಗೆಯೇ ಮಾತನಾಡುವಾಗ ಗೆಸ್ಟ್ ಹೌಸ್ ಯಾರದ್ದೂ ಅನ್ನೋ ವಿಚಾರ ಬಂದಾಗ ,,, ರಾಮು, ಶಾಮು ( ಅಲ್ಲಿಯ ಸ್ಥಳೀಯರು , ಅಡುಗೆ ಭಟ್ಟರು..)
” ಇದು ಬಹಳ ಅಂದ್ರೆ ಬಹಳ ವರ್ಷಗಳ ಹಿಂದೆ ಜಮೀನಾದರರಿಗೆ ಸೇರಿದ್ದಾಗಿತ್ತು… ಅದಾದ ನಂತರ ಇದನ್ನ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು.. ಸದ್ಯಕ್ಕೆ ಫಾರೆಸ್ಟ್ ಡಿಪಾರ್ಟ್ ಮೆಂಟ್ ಗೆ ಒಳಪಟ್ಟಿದೆ…
ಈತರ ನಿಮ್ಮ ತರ ಬಂದೋರಿಗೆ ಪರ್ಮಿಷನ್ ಮೇಲೆ ಉಳಿಯಲು ಅವಕಾಶ ಕೊಡ್ತಾರೆ.. ಟ್ಯೂರಿಸ್ಟ್ ಪ್ಲೇಸ್ ಮಾಡೋ ಪ್ಲಾನ್ ನಲ್ಲಿದ್ದರು … ಆದರೆ ಅಚಾನಕ್ ಆಗಿ ರಾತ್ರಿ ಇಲ್ಲಿಗೆ ಬಂದವರೆಲ್ಲಾ ಮಾಯವಾಗೋದಕ್ಕೆ ಶುರುವಾದ್ರು… ಆಗಿನಿಂದ ಇದನ್ನ ಇಲ್ಲಿಯವರೆಗೂ ಬಂದ್ ಮಾಡಲಾಗಿತ್ತು.. ಸುಮಾರು 1ವರ್ಷಗಳಾದ ಮೇಲೆ ನೀವೇ ಬಂದಿರೋದು …
ಎಂದ ರಾಮು ತಲೆ ಮೇಲೆ ಹೊಡೆಯುವ ಶಾಮು ಸುಮ್ಮಿರುವಂತೆ ಸನ್ನೆ ಮಾಡ್ತಾ ಗಾಬರಿಯಲ್ಲೇ ಕಣ್ಸನ್ನೆಯಲ್ಲಿ ಸುಮ್ಮನಾಗಿಸಿದ್ರೆ… ಅವನ ಮಾತು ಕೇಳಿ ಅಲ್ಲಿದ್ದ ಪ್ರತಿಯೊಬ್ಬರಲ್ಲೂ ಭಯ ಹುಟ್ಟಿತ್ತು.. ಕ್ಯೂರಿಯಾಸಿಟಿಯೂ ಅಷ್ಟೇ ಇತ್ತು..
ಮನಸ್ವಿಗೆ ತುಸು ಹೆಚ್ಚೇ ಆತಂಕವಾಗಿತ್ತು.. ಅವಳ ಕನಸ್ಸಲ್ಲಿ ಬಂದದ್ದೆಲ್ಲಾ ನಿಜವಾಗ್ತಿರುವಂತೆ ಭಾಸವಾಗಿ ಭಯಭೀತಳಾಗಿದ್ದಳು..
@@@@@@@@
ನನ್ನ ಕಲ್ಪನೆಯ ರೋಚಕತೆ ನಿಗೂಢತೆಯ ಜೊತೆಗೆ ಒಂದಷ್ಟು ಸಸ್ಪೆನ್ಸ್ ಥ್ರಿಲ್ಲರ್ ಅಡ್ವೆಂಚರ್ ಕಥೆ “ ನಿಗೂಢ ಟಿವಿ ಜಗತ್ತು”…
ನನ್ನ ಕಲ್ಪನೆಯ ಜಗತ್ತನ್ನ ಅನಾವರಣಗೊಳಿಸಲು ನಿಮ್ಮ ಸಹಕಾರ ಬೇಕು… ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳು ( ರಿವ್ಯೂ) ಬೇಕು ನಾನು ಕಥೆ ಮುಂದುವರೆಸಲು ನೀವು ನನಗೆ ಸಾಥ್ ನೀಡಬೇಕು.. ಪ್ರಾಮಾಣಿಕ ವಿಮರ್ಶೆ ಮೂಲಕ…
@@@@@@
( ಮುಂದಿನ ಅಧ್ಯಾಯಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ )
– ನಿಹಾರಿಕಾ ರಾವ್ –
ಗಮನಿಸಿ : ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…
ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..
ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…
ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..
ಮೊದಲ ಅಧ್ಯಾಯ – 1
ಅಧ್ಯಾಯ – 2
ಅಧ್ಯಾಯ – 3
ಅಧ್ಯಾಯ – 4
ಅಧ್ಯಾಯ – 5
ಅಧ್ಯಾಯ – 6