ಸೂಪರ್ ಮಾಮ್ ಆಗುವತ್ತ ಇಂದಿನ ಮಹಿಳೆ !

1 min read
Saakshatv Happy womens day 2021

ಸೂಪರ್ ಮಾಮ್ ಆಗುವತ್ತ ಇಂದಿನ ಮಹಿಳೆ ! Saakshatv Happy womens day 2021

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?

ಮಾರ್ಚ್‌ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಇಂದು ವಿಶ್ವದೆಲ್ಲೆಡೆ ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಸ್ತ್ರೀಯನ್ನು ದೇವತೆಯೆಂದು ಪೂಜಿಸುತ್ತಾ ಬಂದ ದೇಶ ಭಾರತ. ಋಗ್ವೇದದ ಎಷ್ಟೋ ಸೂತ್ರಗಳನ್ನು ಬರೆದವರು ಮಹಿಳೆಯರು. ವೇದ ಕಾಲದಲ್ಲಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ಇತ್ತು. ಆದರೆ ಹಿಂದಿನಿಂದಲೂ ಪುರುಷ ಪ್ರಧಾನ ಸಮಾಜ, ಹೆಣ್ಣನ್ನು ಭೋಗದ ವಸ್ತುವೆಂದು ಪರಿಗಣಿಸಿದೆ. ಸಣ್ಣವಯಸ್ಸಿನಿಂದಲೇ ಸಂಪ್ರದಾಯದ ಹೆಸರಿನಲ್ಲಿ ನಿರ್ಬಂಧಗಳನ್ನು, ಕಟ್ಟುಪಾಡುಗಳನ್ನು ಹೇರಿದೆ. Saakshatv Happy womens day 2021
Saakshatv Happy womens day 2021

21ನೆಯ ಶತಮಾನದಲ್ಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳು ಭಿನ್ನವಾಗಿದೆ. ಹಾಗೆಂದು ಹೆಣ್ಣು ಹೆದರಿ ಕುಳಿತಿಲ್ಲ. ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲಿ ಇದೆ ಎಂದು ಸಾಬೀತು ಪಡಿಸಿದ್ದಾಳೆ. ಸ್ತ್ರೀ ಕನಸು ಹೌದು ವಾಸ್ತವವು‌ ಹೌದು. ಹೆಣ್ಣನ್ನು ಪ್ರಕೃತಿಗೆ ಭೂಮಿಗೆ ಹೋಲಿಸುತ್ತಾರೆ, ಏಕೆಂದರೆ ಹೆಣ್ಣು ತನ್ನ ಮೇಲೆ ಆಗುವ ದೌರ್ಜನ್ಯಗಳನ್ನು ಮೌನವಾಗಿ ಸಹಿಸಿ ಒಳಿತನ್ನೇ ಹಾರೈಸುತ್ತಾಳೆ ಎಂಬ ವಿಶ್ವಾಸದಿಂದ. ‌ಜನಪದರು ಕೂಡ ಹೆಣ್ಣಿನ ಬದುಕನ್ನು ತಾನು ಕುದಿದು ಬಣ್ಣ ನೀಡುವ ಸುಣ್ಣಕ್ಕೆ ಹೋಲಿಸಿದ್ದಾರೆ.

ಇಂದು ಹೆಣ್ಣು ಉತ್ತಮ ಶಿಕ್ಷಣ ಪಡೆಯುತ್ತಿದ್ದಾಳೆ. ಆಕೆಗೆ ಹೊರ ಜಗತ್ತಿನ ಅರಿವೂ ಇದೆ. ಹೆಣ್ಣು ಕಚೇರಿಯಲ್ಲಿ ದುಡಿಯುವುದರೊಂದಿಗೆ ಗೃಹಕೃತ್ಯವನ್ನು ನಿಭಾಯಿಸುವ ಛಾತಿಯನ್ನು ಹೊಂದಿದ್ದು, ಸೂಪರ್ ಮಾಮ್ ಆಗಿದ್ದಾಳೆ. ಆದರೂ ಹೆಣ್ಣನ್ನು ಭ್ರೂಣದಲ್ಲೇ ಹೊಸಕಿ ಹಾಕುವ ಮನಸ್ಥಿತಿ ಬದಲಾಗಿಲ್ಲ. ಆಕೆಯನ್ನು ಎರಡನೇ ದರ್ಜೆಯಾಗಿ ಪರಿಗಣಿಸುವ ಮನಸ್ಥಿತಿ ಬದಲಾಗಬೇಕಿದೆ. ಒಬ್ಬ ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ ಮನೆಯ ಒಳ-ಹೊರ ದುಡಿಯುವ ಮಹಿಳೆಯಾಗಿ ಹತ್ತು ಹಲವು ಕಾರ್ಯಗಳನ್ನು ಒಟ್ಟಿಗೆ ನಿಭಾಯಿಸುವ ಆಕೆಯ ಸಾಮರ್ಥ್ಯಕ್ಕೆ ಆಕೆಯೇ ಸರಿಸಾಟಿ.
Saakshatv Happy womens day 2021
ಇಂದಿನ ಕಾಲದಲ್ಲಿ ಹೆಣ್ಣಿಗೆ ಬೇಕಾಗಿರುವುದು ಸ್ವೇಚೆಯಲ್ಲ ಬದಲಾಗಿ ಸ್ವಾತಂತ್ರ್ಯವಾಗಿ ಬದುಕುವ ಅವಕಾಶ. ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ. ಅವಳ ಭಾವನೆಗೂ ಬೆಲೆ ಕೊಡಬೇಕು ಎಂಬ ವಿಚಾರ ಪ್ರತಿಯೊಬ್ಬರಲ್ಲಿ ಬಂದಾಗ ಮಹಿಳಾ ದಿನಾಚರಣೆ ಸಾರ್ಥಕತೆ ಪಡೆದುಕೊಳ್ಳುತ್ತದೆ.

ಸಾಕ್ಷಟಿವಿ ಬಳಗದಿಂದ ಸಮಸ್ತ ಮಹಿಳಾ ಕುಲಕ್ಕೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd