ADVERTISEMENT
Thursday, March 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್‌ ಯಾತ್ರೆ; ಹಿಮತ್ಪಾಧಿತ ರಾಜ್ಯ ಕನೆಟಿಕಟ್‌ ಎಂಬ ವಿಸ್ಮಯ ನಾಡು – ಇಲ್ಲಿನ ಚಳಿ ಮಾತ್ರ ಭಯಂಕರ

admin by admin
January 30, 2021
in Newsbeat
Saakshatv yatrika episode 14
Share on FacebookShare on TwitterShare on WhatsappShare on Telegram

ಅಮೇರಿಕನ್‌ ಯಾತ್ರೆ; ಹಿಮತ್ಪಾಧಿತ ರಾಜ್ಯ ಕನೆಟಿಕಟ್‌ ಎಂಬ ವಿಸ್ಮಯ ನಾಡು – ಇಲ್ಲಿನ ಚಳಿ ಮಾತ್ರ ಭಯಂಕರ: Saakshatv yatrika episode 14

ಕೆಲ ತಿಂಗಳುಗಳ ಹಿಂದೆ ನನ್ನಮ್ಮ, ನನ್ನ ಮಗನ ಹತ್ತಿರ ನಿನ್ನ ರಾಜ್ಯ ಯಾವುದೆಂದು ಕೇಳಿದಾಗ ಕನೆಟಿಕಟ್ ಅಂದಿದ್ದನಂತೆ!! ಅವನಿಗೆ ಮಾತ್ರವಲ್ಲ ನನಗೂ ಕನೆಟಿಕಟ್ ಅನ್ನೋದು ಕರ್ನಾಟಕ ಅಂದಂತೆ ಕೇಳ್ತಿತ್ತು. ನಾನು ಕನೆಟಿಕಟ್ಟಿಗೆ ಮೊದಲು ಬಂದಿದ್ದು ಹತ್ತು ದಿನಗಳ ಮಟ್ಟಿಗೆ. ಡಾಲಸ್ಸಿಗೆ ವಾಪಸ್ ಹೋಗಿ ಕೆಲ ಸಮಯದ ನಂತರ ಪುನಃ ಬರುವುದಾಗಿ ನಿರ್ಧರಿತವಾಗಿತ್ತು. ಅಮೆರಿಕಾಗೆ ಬಂದು ಎರಡು ವರ್ಷಗಳಾಗಿದ್ದರೂ ನಿಜವಾದ ಚಳಿಗಾಲವನ್ನು ಕಂಡಿರಲಿಲ್ಲ. ಹೆಚ್ಚೆಂದರೆ -4-5 ಡಿಗ್ರಿಗಳಷ್ಟು ಚಳಿಯನ್ನ ನೋಡಿದ್ದೆ. ಆದರೆ ನಿಜವಾದ ಚಳಿಯ ಅನುಭವವಾಗಿದ್ದು ಅಲ್ಲಿ. ಹೊರಡಬೇಕಾದರೆ ನಮ್ಮ ಬಾಸ್ ಹೇಳಿದ್ದರು, ಸಿಕ್ಕಾಪಟ್ಟೆ ಚಳಿ ಇರತ್ತೆ ಬೆಚ್ಚಗಿನ ಬಟ್ಟೆ ತೆಗೆದುಕೊಂಡು ಬಾ ಎಂದು. ನನ್ನ ಹತ್ತಿರವಿರುವ ಜಾಕೆಟ್ ಬಗ್ಗೆ ವಿಶ್ವಾಸವಿತ್ತು, ಆದರೆ ನನ್ನ ಹತ್ತಿರ ಥರ್ಮಲ್ ಬಟ್ಟೆಗಳು ಇರಲಿಲ್ಲ. ಡಾಲಸ್ಸಿನಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಸರಿ ಅಲ್ಲೇ ನೋಡಿದರಾಯಿತೆಂದು ಹುಂಬ ಧೈರ್ಯ ಮಾಡಿ ಹೊರಟಿದ್ದೆ.

Related posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

March 4, 2026
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026

ಕನೆಟಿಕಟ್ ರಾಜ್ಯದ ರಾಜಧಾನಿಯಾದ ಹಾರ್ಟ್‌ಫರ್ಡಿನಲ್ಲಿ ಇಳಿದಾಗ ಸಂಜೆ 4 ಗಂಟೆ. ಜನವರಿಯ ಸಮಯ, ಆಗಲೇ ನಿಧಾನವಾಗಿ ಕತ್ತಲಾಗತೊಡಗಿತ್ತು. ವಿಮಾನ ನಿಲ್ದಾಣದಿಂದ ಹೊರ ಬಂದಾಗ ಹೊರಗಡೆಯ ಉಷ್ಣಾಂಶ -10 ರಿಂದ -12 ಡಿಗ್ರಿಯಿತ್ತು. ಜಾಕೆಟ್ ಚಳಿಯನ್ನು ತಡೆಯುತ್ತಿದ್ದರೂ ಪ್ಯಾಂಟು ಮತ್ತೆ ಗ್ಲೌಸುಗಳು ಯಾವ ಪ್ರಯೋಜನಕ್ಕೂ ಬಾರದವೆಂದು ನಿಮಿಷದೊಳಗೆ ಸಾಬೀತುಪಡಿಸಿದವು. ಬುಕ್ ಮಾಡಿದ್ದ ಉಬರ್ ಬರಲು 7-8 ನಿಮಿಷವಿತ್ತು. ಅಂಗೈ ಮತ್ತು ಕಾಲುಗಳಿಗೆ ನಿಧಾನಕ್ಕೆ ಚೂರಿಯಲ್ಲಿ ಕೊರೆದ ಅನುಭವವಾಗ್ತಾ ಇತ್ತು. ಮುಖ ನಿಧಾನಕ್ಕೆ ಉರಿಯಲು ಶುರುವಾಗಿತ್ತು. ಹೊರ ಬಂದ ಹತ್ತು ನಿಮಿಷದೊಳಗೆ ನರಕ ದರ್ಶನ. ಕಾರೊಳಗಡೆ ಕೂತಾಗ ಹೋದ ಜೀವ ಬಂದಂತಾಗಿತ್ತು.

Saakshatv yatrika episode 14

ಒಂದೆರಡು ದಿನ ಮುಂಚೆ ಹಿಮ ಉದುರಿದ ಕಾರಣಕ್ಕೆ ರಸ್ತೆಯ ಪಕ್ಕದಲ್ಲಿ, ಬಯಲಿನಲ್ಲಿ ಎಲ್ಲೆಡೆ ಹಿಮ ರಾಶಿ ಹಾಕಿಕೊಂಡಿತ್ತು. ನನ್ನ ಹಳೆ ಕಂಪನಿ ಬಾಸ್ ಜೊತೆ ಮನೆ ಹುಡುಕಲು ಹೋದಾಗ, ಇದೇ ನಗರದಲ್ಲಿರುವ ನಮ್ಮೂರ ಅಕ್ಕನ ಮನೆಗೆ ಹೋದಾಗ ಎಲ್ಲೆಡೆ ಕಂಡಿದ್ದು ಹಿಮವೇ. ನೋಡಲೇನೋ ಚನ್ನಾಗಿ ಕಾಣ್ತಿತ್ತು. ಆದರೆ ನಡೆಯಲು ಮಾತ್ರ ಪ್ರಾಣ ಸಂಕಟ. ಥರ್ಮಲ್ ಕೊಂಡರೂ ಯಾಕೋ ಅದನ್ನ ಹಾಕಿ ನಡೆಯೋದು ಕಿರಿಕಿರಿಯಾಗ್ತಿತ್ತು.

 

ಈ ನಡುವೆ ಒಂದಿನ ರಾತ್ರಿ ಹಿಮ ಉದುರಿತ್ತು. ಮೊದಲ ಅನುಭವವಾದ ಕಾರಣ ಹೊರಹೋಗಿ ಹಿಮದಲ್ಲಿ ನಿಂತು ಆನಂದಪಟ್ಟಿದ್ದೆ. ಬಿಸಿ ಕಾಫಿ ಮಾಡಿಕೊಂಡು ತಡರಾತ್ರಿವರೆಗೂ ಹಿಮ ಬೀಳುವುದನ್ನ ಹೋಟೆಲಿನ ಕಿಟಕಿಯಿಂದ ನೋಡುತ್ತಾ ನಿಂತಿದ್ದೆ. ಏನೇ ಅನ್ನಿ ಹಿಮ ಬೀಳುವುದು ನೋಡಲು ನಿಜಕ್ಕೂ ಸುಂದರ. ಆದರೆ ಮರುದಿನ ಮಾತ್ರ ಕೆಟ್ಟ ರಗಳೆ. ಅರ್ಧ ಕರಗಿದ ಹಿಮ ಮಣ್ಣಿನೊಟ್ಟಿಗೆ ಮಿಶ್ರಗೊಂಡು ಎಲ್ಲೆಡೆ ಕೆಸರಾಗುತ್ತದೆ. ಪಾದಚಾರಿಗಳಂತೂ ಬಹಳ ಕಷ್ಟಪಡಬೇಕು.

ಇದೆಲ್ಲಾ ನೋಡಿ ಹೇಗಪ್ಪಾ ಈ ನಾಡಲ್ಲಿ ಜೀವನ ಮಾಡುವುದು ಅನ್ನಿಸಿತ್ತು. ಮುಂದೆ ಇಲ್ಲಿ ನೆಲೆ ನಿಲ್ಲುವುದನ್ನು ಯೋಚಿಸಿಯೇ ತಲೆಬಿಸಿಯಾಗತೊಡಗಿತು. ಆದರೆ ಮುಂದೆ ಇದೇ ರಾಜ್ಯ ನನಗೆ ಅತೀ ಇಷ್ಟವಾಗಿದ್ದು. ಯಾಕೋ ಏನೋ ಅಮೆರಿಕಾದ ರಾಜ್ಯಗಳಲ್ಲಿ ನಿನ್ನ ಇಷ್ಟದ ರಾಜ್ಯ ಯಾವುದಂತ ಕೇಳಿದರೆ ನಾನು ನಿಸ್ಸಂಶಯವಾಗಿ ಕನೆಟಿಕಟ್ ಅನ್ನುತ್ತೇನೆ. ಅದ್ಯಾಕೆ ಈ ರಾಜ್ಯ ನನ್ನನ್ನ ಅಷ್ಟು ಮೋಡಿ ಮಾಡಿತೆಂದು ಗೊತ್ತಿಲ್ಲ.

Saakshatv yatrika episode 14

ನನಗೆ ಮಾತು ಸ್ವಲ್ಪ ಜಾಸ್ತಿಯಾದ ಕಾರಣ ಸಿಕ್ಕಸಿಕ್ಕವರ ಮಾತಿಗೆಳೆಯೋ ಅಭ್ಯಾಸ ಜಾಸ್ತಿ.‌ ಇಲ್ಲಿ ನಿಧಾನಕ್ಕೆ ಜನರ ಜೊತೆ ಬೆರೆಯತೊಡಗಿದಾಗ ನಾನು ಸ್ಪೆಲ್ಲಿಂಗಿನಲ್ಲಿ ಇರುವಂತೆ ಕನೆಕ್ಟಿಕಟ್ ಎಂದು ಉಚ್ಚರಿಸಿದಾಗ ಅರ್ಥವಾಗದ ಹಾಗೆ ಮುಖ ಮಾಡ್ತಿದ್ರು. ಆಮೇಲೆ ಗೊತ್ತಾಯಿತು, ಅಲ್ಲಿ ಒಂದು ‘C’ ಸೈಲೆಂಟು, ಕನೆಟಿಕಟ್ ಅನ್ಬೇಕಂತ. ಅಕ್ಷರಶಃ ಹೇಳುವುದಾದರೆ ಕನೆಟಿಕಟ್ ಅಂದರೆ ಉಬ್ಬರ ಇಳಿತ ಇರುವ ಉದ್ದವಾದ ನದಿ ಎಂದರ್ಥ ಇಲ್ಲಿನ ಮೂಲನಿವಾಸಿಗಳ ಭಾಷೆಯಲ್ಲಿ. ಕನೆಟಿಕಟ್ ನದಿಯಿಂದ ಈ ರಾಜ್ಯ ತನ್ನ ಹೆಸರನ್ನ ಪಡೆದಿದೆ. ಅಲ್ಲದೇ ಅಮೆರಿಕಾದ ಕೆಲ ರಾಜ್ಯಗಳ ಹೆಸರುಗಳು ನದಿಯಿಂದ ಬಂದಿವೆ, ಉದಾಹರಣೆಗೆ ಮಿಸೌರಿ, ಮಿಸಿಸ್ಸಿಪ್ಪಿ , ಅರ್ಕನ್ಸಾ, ಕೊಲಾರಡೋ ಇತ್ಯಾದಿ.

ಟೆಕ್ಸಸ್ ಅನ್ನೋ ದೈತ್ಯನಿಂದ ಬರೀ 14000 ಚದರ ಕಿಲೋಮೀಟರಿನ ಈ ಪುಟ್ಟ ರಾಜ್ಯಕ್ಕೆ ಬಂದಾಗ ಎಲ್ಲಾ ಚಿಕ್ಕದೆನ್ನಿಸ್ತಾ ಇತ್ತು. ಅಲ್ಲಿ ಬರೀ ಡಾಲಸ್ ಮೆಟ್ರೋ ಪ್ರದೇಶದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಸುಮಾರು ೫೦ ಮೈಲಿ ಬೇಕು. ಇಲ್ಲಿ ನಾವು ರಾಜ್ಯವನ್ನೇ ದಾಟಿರುತ್ತೇವೆ. ರಾಜ್ಯ ಚಿಕ್ಕದಾದರೂ ನಾನಿಲ್ಲಿ ವಾಸವಾದ ಕಾರಣ ಹೇಳಲು ಬಹಳ ಇದೆ. ಕಳೆದಬಾರಿ ಇಲ್ಲಿನ ಕನ್ನಡ ಕೂಟದ ಬಗ್ಗೆ ಹೇಳಿದ್ದೆ. ಮುಂದಿನ ಭಾಗದಲ್ಲಿ ಇಲ್ಲಿನ + ಅಮೆರಿಕಾದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೇಳತ್ತೇನೆ.

-ಗಿರಿಧರ್‌ ಭಟ್‌ ಗುಂಜಗೋಡು
ಹವ್ಯಾಸಿ ಬರಹಗಾರ
ಸಿದ್ಧಾಪುರ

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: American‌ expeditionConnecticutSaakshatv yatrika episode 14
ShareTweetSendShare
Join us on:

Related Posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

by admin
March 4, 2026
0

ಜಾಮ್‌ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram