“ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್ ಮೈಂಡ್ ಉಗ್ರ” – ಕಿಸಾನ್ ಕಾಂಗ್ರೆಸ್ ಅಧ್ಯಕ್ಷ…
ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್ ಮೈಂಡ್ ಉಗ್ರ, ಕುಕ್ಕರ್ ಬ್ಲಾಸ್ಟ್ ಉಗ್ರ ಶಾರಿಕ್ ಗಿಂತ ಸಿಟಿ ರವಿ ಒಂದು ಕೈ ಮೇಲೇ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಹೇಳಿಕೆ ನೀಡಿದ್ದಾರೆ.
ಅಮಾಯಕ ಮಹೇಂದ್ರ ಕುಮಾರ್ ರನ್ನು ಬಳಸಿಕೊಂಡು ರಾತ್ರೋರಾತ್ರಿ ದತ್ತಪೀಠ ಗೋರಿಗಳನ್ನು ಅಗೆದು ಹಾಕಿ ನಾಶಪಡಿಸಿದ ಉದಾಹರಣೆ ನಮ್ಮ ಕಣ್ಮುಂದೆಯೇ ಇದೆ. ಹೀಗೆ ಮಾಡಿ ಭಯದ ವಾತಾವರಣ ಸೃಷ್ಟಿಸಿ ಸಿಟಿ ರವಿ ತಮ್ಮ ರಾಜಕೀಯ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ
ನೈಜ ಹಿಂದು ಗಳಿಗೆ ಸಿಟಿ ರವಿ ಬೇಕಾಗಿಲ್ಲ ನಾವೂ ಹಿಂದೂಗಳೇ, ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಸಚಿನ್ ಮೀಗಾ ಹೇಳಿಕೆ ವಾಗ್ದಾಳಿ ನಡೆಸಿದ್ದಾರೆ.
Sachin Meega: “CT Ravi is the biggest mastermind of the state” – Kisan Congress president…








