sachin-Best T20 Batter | ಸೂರ್ಯ ವಿಶ್ವದಲ್ಲಿಯೇ ಅತ್ಯುತ್ತಮ ಟಿ 20 ಬ್ಯಾಟರ್
ಟೀಂ ಇಂಡಿಯಾದ ರೈಸಿಂಗ್ ಸ್ಟಾರ್ ಸೂರ್ಯ ಕುಮಾರ್ ಯಾದವ್ ಪ್ರಸ್ತುತ ಭೀಕರ ಫಾರ್ಮ್ ನಲ್ಲಿದ್ದಾರೆ.
ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ವಾರ್ಮ್ ಅಪ್ ಮ್ಯಾಚ್ ನಲ್ಲಿ ಸೂರ್ಯ ಕುಮಾರ್ ಅಬ್ಬರಿಸಿ ಅರ್ಧಶತಕ ಸಿಡಿಸಿದ್ರು.
ಈ ಪಂದ್ಯದಲ್ಲಿ 33 ಎಸೆತಗಳಲ್ಲಿ ಸೂರ್ಯ ಆರು ಬೌಂಡರಿ, ಒಂದು ಸಿಕ್ಸರ್ ನೊಂದಿಗೆ 50 ರನ್ ಗಳಿಸಿದರು.
ಈ ಹಿನ್ನೆಲೆಯಲ್ಲಿ ಸೂರ್ಯ ಕುಮಾರ್ ಯಾದವ್ ಬಗ್ಗೆ ಕ್ರಿಕೆಟ್ ಗಾಡ್ ಸಚಿನ್ ತೆಂಡ್ಯುಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಟಿ 20 ಮಾದರಿಯಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಸೂರ್ಯ ಕುಮಾರ್ ಒಬ್ಬರು.
ಸೂರ್ಯ ಬೆಳವಣಿಗೆ ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ. ಸೂರ್ಯ ಪ್ರಮಾದಕರ ಬ್ಯಾಟರ್.
ಆದ್ರೆ ಮೊದಲು ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ. ಈಗ ತಂಡದಲ್ಲಿ ಅವರು ಪ್ರಮುಖ ಬ್ಯಾಟರ್ ಆಗಿದ್ದಾರೆ.
ಪ್ರಸ್ತುತ ಟಿ 20 ಕ್ರಿಕೆಟ್ ನಲ್ಲಿ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಸೂರ್ಯ ಕೂಡ ಒಬ್ಬರು. ಈ ಮೆಗಾ ಈವೆಂಟ್ ನಲ್ಲಿ ಆತ ವಿಧ್ವಂಸ ಸೃಷ್ಟಿಸಲು ಸಿದ್ಧವಾಗಿದ್ದಾರೆ ಎಂದಿದ್ದಾರೆ ಸಚಿನ್.