Sachin Tendulkar | ರಾಯಲ್ಸ್ ಬೌಲರ್ಸ್ ಬಗ್ಗೆ ಸಚಿನ್ ಮೆಚ್ಚುಗೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡ ಬೌಲರ್ ಗಳ ಮೇಲೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ.
ಆರ್ ಆರ್ ಬೌಲರ್ ಗಳು ಉತ್ತಮ ಬೌಲಿಂಗ್ ದಾಳಿ ಮೂಲಕ ಆರ್ ಸಿಬಿಯನ್ನ ಒತ್ತಡಕ್ಕೆ ಸಿಲುಕಿಸಿದರು ಎಂದಿದ್ದಾರೆ ಸಚಿನ್.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಆರ್ಸಿಬಿಯನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು.
ಅದರಂತೆ ರಾಜಸ್ಥಾನ ಬೌಲರ್ಗಳು ಎದುರಾಳಿ ತಂಡಕ್ಕೆ ಮುಳುವಾದ್ರು. ವಿಶೇಷವಾಗಿ ಪ್ರಸಿದ್ಧ ಕೃಷ್ಣ ಆರ್ಸಿಬಿ ಆರಂಭಿಕ ವಿರಾಟ್ ಕೊಹ್ಲಿ, ಫಿನಿಶರ್ ದಿನೇಶ್ ಕಾರ್ತಿಕ್ ಮತ್ತು ಆಲ್ ರೌಂಡರ್ ವನಿಂದು ಹಸರಂಗ ವಿಕೆಟ್ ಪಡೆದರು.
ಒಟ್ಟು 4 ಓವರ್ ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದರು.

ಒಬೆಡ್ ಮೆಕಾಯ್ 4 ಓವರ್ ಗಳಲ್ಲಿ 23 ರನ್ ನೀಡಿ ಮೂರು ವಿಕೆಟ್ ಪಡೆದರು.
ಇವರಿಬ್ಬರ ಬಿಗು ದಾಳಿಯ ಪರಿಣಾಮ ಆರ್ಸಿಬಿ 157 ರನ್ ಗಳಿಗೆ ಸುಸ್ತಾಯಿತು.
ಈ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಮಾನತಾಡುತ್ತಾ. ಪ್ರಸಿದ್ಧ ಕೃಷ್ಣ, ಮೆಕಾಯ್ ರಾಜಸ್ಥಾನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇವರಿಬ್ಬರು ಸೇರಿ ಬೆಂಗಳೂರು ಬ್ಯಾಟ್ಸ್ಮನ್ಗಳನ್ನು ಒತ್ತಡಕ್ಕೆ ಸಿಲುಕಿಸಿದರು. ಕೆಳ ಕ್ರಮಾಂಕದಲ್ಲಿ, ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದ ದಿನೇಶ್ ಕಾರ್ತಿಕ್ ಅವರನ್ನ ಪ್ರಸಿದ್ಧ್ ಔಟ್ ಮಾಡಿದರು.
ಹಸರಂಗ ಅವರನ್ನೂ ಕೂಡ ನಂತರ ಎಸೆತದಲ್ಲಿ ಔಟ್ ಮಾಡಿದರು. ನಿಜ ಹೇಳಬೇಕಾದ್ರೆ ಇಂತಹ ದೊಡ್ಡ ಪಂದ್ಯದಲ್ಲಿ 150 ರನ್ ಡಿಫೆಂಡ್ ಮಾಡಿಕೊಳ್ಳುವುದು ತುಂಬಾ ಕಷ್ಟ.
ಆದ್ರೂ ಆರ್ ಸಿಬಿಯಂತಹ ತಂಡವನ್ನು ಈ ರೀತಿ ಸಣ್ಣ ಮೊತ್ತಕ್ಕೆ ಕಟ್ಟಿಹಾಕುವುದು ತುಂಬಾ ಕಷ್ಟ.
ಅಂಥಹ ಕೆಲಸವನ್ನು ಪ್ರಸಿದ್ಧ ಕೃಷ್ಣ, ಮೆಕಾಯ್ ಮಾಡಿ ತೋರಿಸಿದರು ಎಂದು ಸಚಿನ್ ಮೆಚ್ಚಿಕೊಂಡಿದ್ದಾರೆ.
sachin-tendulkar-lauds-rr-bowlers








