ನವೆಂಬರ್ 15 ಮತ್ತು ಸಚಿನ್ ತೆಂಡುಲ್ಕರ್…!

1 min read
Sachin Tendulkar saaksha tv

ನವೆಂಬರ್ 15 ಮತ್ತು ಸಚಿನ್ ತೆಂಡುಲ್ಕರ್…!

ವಿಶ್ವ ಕ್ರಿಕೆಟ್ಗೆ ಕ್ರಿಕೆಟ್ ಬ್ರಹ್ಮ ಮೊದಲ ಹೆಜ್ಜೆಯನ್ನಿಟ್ಟ ದಿನ ನವೆಂಬರ್ 15
ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಸಚಿನ್ ತೆಂಡುಲ್ಕರ್
ಕೊನೆಯ ಬಾರಿ ಬ್ಯಾಟ್ ಹಿಡಿದಿದ್ದು ಕೂಡ ನವೆಂಬರ್ 15 ರಂದು
ನವೆಂಬರ್ 15 ಮತ್ತು ಸಚಿನ್ ತೆಂಡುಲ್ಕರ್

ನವೆಂಬರ್ 15. 1989.
ಅದು ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯ. 16ರ ಹರೆಯದ ಶಾಲಾ ಬಾಲಕÀ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ ದಿನ ಮತ್ತು ಪಂದ್ಯ. ಈ ದಿನವನ್ನು ಮತ್ತು ಈ ಪಂದ್ಯವನ್ನು ವಿಶ್ವದ ಕ್ರಿಕೆಟ್ ಅಭಿಮಾನಿಗಳು ಎಂದೂ ಮರೆಯಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಸಚಿನ್ ತೆಂಡುಲ್ಕರ್ ಹೇಗೆ ಮರೆಯಲು ಸಾಧ್ಯ…!

ಹೌದು, ನವೆಂಬರ್ 15. ಸಚಿನ್ ತೆಂಡುಲ್ಕರ್ ಅವಿಸ್ಮರಣೀಯ ದಿನ. ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನ. ಹಾಗೇ ಟೆಸ್ಟ್ ಕ್ರಿಕೆಟ್ನಲ್ಲಿ ಕೊನೆಯ ಬಾರಿ ಬ್ಯಾಟ್ ಹಿಡಿದು ಆಡಿದ ದಿನವೂ ಆಗಿದೆ. ವೆಸ್ಟ್ ಇಂಡೀಸ್ ವಿರುದ್ಧ 74 ರನ್ ಗಳಿಸಿ ಪೆವಿಲಿಯನ್ಗೆ ಒಲ್ಲದ ಮನಸ್ಸಿನಿಂದಲೇ ಹಿಂತಿರುಗಿದ್ದರು.

ಸುಮಾರು 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ನಲ್ಲಿ ಸಾರ್ವಭೌಮನಂತೆ ಮೆರದಾಡಿ ತೆರೆಮರೆಗೆ ಸರಿದಾಗ ಕೋಟಿ ಕೋಟಿ ಅಭಿಮಾನಿಗಳ ಕಣ್ಣಂಚಿನಲ್ಲಿ ಕಣ್ಣೀರ ಧಾರೆ ಸುರಿಯುತ್ತಿತ್ತು. ಇದೀಗ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ಗೆ ವಿದಾಯ ಹೇಳಿ ಐದು ವರ್ಷಗಳಾಗಿವೆ. ಆದ್ರೆ ನವೆಂಬರ್ 15 ಬಂತು ಅಂದ್ರೆ ಸಾಕು ಸ್ವತಃ ಸಚಿನ್ ತೆಂಡುಲ್ಕರ್ ಕೂಡ ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ.

Sachin Tendulkar saaksha tv

ನವೆಂಬರ್ 15. ಪ್ರತಿ ವರ್ಷ ಈ ದಿನ ನನಗೆ ಹಲವು ನೆನಪುಗಳನ್ನು ನೆನಪು ಮಾಡಿಕೊಳ್ಳುವಂತೆ ಮಾಡುತ್ತದೆ. ವಿಶ್ವ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೊದಲ ದಿನ. ಅದೊಂದು ಅದ್ಭುತ ಅನುಭವ. ಭಾರತ ದೇಶವನ್ನು ಪ್ರತಿನಿಧಿಸಿದ್ದ ಹೆಮ್ಮೆ ನನಗಿದೆ. 24 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿರೋದು ರೋಮಾಂಚಕ ಅನುಭವ. ಅದನ್ನು ಬಣ್ಣಿಸಲು ಸಾಧ್ಯವಿಲ್ಲ ಅಂತ ಹೇಳ್ತಾನೇ ಇರುತ್ತಾರೆ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್.

ಮೊದಲ ಪಂದ್ಯದಲ್ಲಿ 15 ರನ್ ಗಳಿಸಿ ನಿರಾಸೆ ಮೂಡಿಸಿದ್ರೂ ಸಚಿನ್ ಕಂಗೆಡಲಿಲ್ಲ. ವಾಸಿಂ ಅಕ್ರಂ, ವಕಾರ್ ಯೂನಸ್ ರಂತಹ ಘಾತಕ ಬೌಲರ್ಗಳ ಕೈಯಿಂದ ಏಟು ಮಾಡ್ಕೊಂಡು ಮೂಗಿನಲ್ಲಿ ರಕ್ತ ಬಂದ್ರೂ ಆಟ ಮುಂದುವರಿಸಿದ ಸಚಿನ್ ತೆಂಡುಲ್ಕರ್ ನಂತರ ವಿಶ್ವ ಕ್ರಿಕೆಟ್ನಲ್ಲಿ ಮಾಡಿರುವ ಒಡ್ಡೋಲಗ ಅಷ್ಟಿಷ್ಟಲ್ಲ.

ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಕ್ರಿಕೆಟ್ ದೇವ್ರರಾಗಿ ಮೆರೆದಾಡಿದ್ದು ಈಗ ಇತಿಹಾಸ. ಏನೇ ಆದ್ರೂ 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ನಲ್ಲಿ ಮೆರೆದಾಡಿದ ಕ್ರಿಕೆಟ್ ಬ್ರಹ್ಮನ ಹೆಜ್ಜೆ ಗೆಜ್ಜೆಯ ನಿನಾದಗಳು ನಮಗೆ ಗೊತ್ತಿಲ್ಲದ ಹಾಗೇ ಒಂದು ಕ್ಷಣ ಈಗಲೂ ಕಣ್ಣ ಮುಂದೆ ಹಾದು ಹೋಗುತ್ತವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd