ಎಂದೂ ಎಂದೆಂದಿಗೂ ಹೊಳೆಯುತ್ತಿರುವ ಕ್ರಿಕೆಟ್ ಜಗತ್ತಿನ ವಜ್ರ ಸಚಿನ್ ತೆಂಡುಲ್ಕರ್
sachin tendulkar Diamond of World Cricket
ಸಚಿನ್ ತೆಂಡುಲ್ಕರ್ ಅವರ ಆಟದ ಖದರ್ ಇನ್ನೂ ಕಮ್ಮಿಯಾಗಿಲ್ಲ. ಮುಂದಿನ ಏಪ್ರಿಲ್ 24ಕ್ಕೆ 48ರ ಹರೆಯಕ್ಕೆ ಕಾಲಿಡುತ್ತಿರುವ ಮಾಸ್ಟರ್ ಬ್ಲ್ಯಾಸ್ಟರ್ ಗೆ ಕ್ರಿಕೆಟ್ ಮೇಲಿನ ಪ್ರೀತಿ ಇನ್ನೂ ಕಮ್ಮಿಯಾಗಿಲ್ಲ.
ರೋಡ್ ಸೇಫ್ಟಿ ವಲ್ರ್ಡ್ ಸೀರಿಸ್ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ 233 ರನ್ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಒಂಚೂರು ಬದಲಾವಣೆಯಾಗಿಲ್ಲ ಎಂಬುದನ್ನು ಇಳಿ ವಯಸ್ಸಿನಲ್ಲಿ ಸಚಿನ್ ತೆಂಡುಲ್ಕರ್ ನಿರೂಪಿಸಿದ್ದಾರೆ.
ಬಹುಶಃ ಇದೇ ಕಾರಣಕ್ಕೆ ಪದೇ ಪದೇ ಹೇಳುತ್ತಿರುವುದು ಸಚಿನ್ ತೆಂಡುಲ್ಕರ್ ಗೆ ಸಚಿನ್ ತೆಂಡುಲ್ಕರೇ ಸಾಟಿ ಅಂತ. ಅಷ್ಟಕ್ಕೂ ಸಚಿನ್ ತೆಂಡುಲ್ಕರ್ ಐಪಿಎಲ್ ಬಿಟ್ಟು ಅಂತಾರಾಷ್ಟ್ರೀಯ ಟಿ-ಟ್ವೆಂಟಿ ಪಂದ್ಯವನ್ನಾಡಿಲ್ಲ. ಆದ್ರೂ ಚುಟುಕು ಕ್ರಿಕೆಟ್ ನ ವೇಗಕ್ಕೆ ತಕ್ಕಂತೆ ಈಗಲೂ ಅವರು ಆಡುತ್ತಿರುವ ಪರಿಯನ್ನು ಕಂಡಾಗ ಅಚ್ಚರಿಯಾಗುತ್ತಿದೆ.
ಕ್ಲಾಸ್ ಗೂ ಸೈ ಮಾಸ್ ಗೂ ಜೈ ಅನ್ನೋ ರೀತಿಯಲ್ಲಿ ಬ್ಯಾಟ್ ಬೀಸುವ ಸಚಿನ್ ತೆಂಡುಲ್ಕರ್ ವಲ್ಡ್ ಸೇಫ್ಟಿ ಸಿರೀಸ್ ನಲ್ಲೂ ತನ್ನ ಟ್ರೇಡ್ ಮಾರ್ಕ್ ಶೈಲಿಯ ಹೊಡೆತಗಳ ಮೂಲಕ ಗತ ಕಾಲದ ಬ್ಯಾಟಿಂಗ್ ವೈಭವವನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ್ದರು. ಥ್ಯಾಂಕ್ಯೂ ಸಚಿನ್.
ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ಏಳೆಂಟು ವರ್ಷ ಕಳೆದ್ರೂ ಕ್ರಿಕೆಟ್ ಆಟ ಸಾಕು ಅಂತ ಅವರಿಗೆ ಅನ್ನಿಸಿಲ್ಲ. ವಿದಾಯದ ನಂತರ ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಾಲ ಕಳೆಯುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ತನ್ನ ಅಕಾಡೆಮಿಯಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ. ಜೊತೆಗೆ ಕೆಲವೊಂದು ಟೂರ್ನಿಗಳಲ್ಲಿ ವೀಕ್ಷಕ ವಿವರಣೆಕಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಪ್ರತಿ ದಿನ ಪ್ರತಿ ಕ್ಷಣವನ್ನು ಕ್ರಿಕೆಟ್ ಆಟದ ಜೊತೆಗೆ ಬದುಕು ಸಾಗುತ್ತಿರುವ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜಗತ್ತಿನಲ್ಲಿ ಎಂದೂ ಎಂದಿಗೂ ಹೊಳೆಯುತ್ತಿರುವ ವಜ್ರ.
#sachin tendulkar #DiamondofWorldCricket #teamindia #saakshatv #saakshatvsports #cricket #bcci #icc