ಇದು ಸಚಿನ್ ತೆಂಡುಲ್ಕರ್ ಅವರ ಮತ್ತೊಂದು ಅವತಾರ. ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ಮೈದಾನದಲ್ಲೇ ಕಾಲ ಕಳೆದ ಸಚಿನ್ ತೆಂಡುಲ್ಕರ್ ನಿವೃತ್ತಿಯಾದ ನಂತರ ತಮ್ಮ ಕುಟುಂಬದ ಜೊತೆ ಹಾಯಾಗಿ ಜೀವನ ಕಳೆಯುತ್ತಿದ್ದಾರೆ. ಈ ನಡುವೆ, ಕ್ರಿಕೆಟ್ ಅಕಾಡೆಮಿ, ಕ್ರಿಕೆಟ್ ವಿಶ್ಲೇಷಣೆ, ಬಿಸಿನೆಸ್ ಸೇರಿದಂತೆ ನಾನಾ ಚಟುವಟಿಕೆಗಳಲ್ಲೂ ಭಾಗಿಯಾಗಿರುತ್ತಿದ್ದರು.
ಇದೀಗ ಲಾಕ್‍ಡೌನ್ ನಿಂದಾಗಿ ಸಚಿನ್ ಮನೆಯಲ್ಲೇ ಇದ್ದಾರೆ. ಆದ್ರೂ ಸಾಮಾಜಿಕ ಜಾಲ ತಾಣಗಳಲ್ಲಿ ಹಳೆಯ ದಿನಗಳ ಘಟನೆಗಳನ್ನು ಹೇಳಿಕೊಂಡು ತಮ್ಮ ಅಭಿಮಾನಿಗೆ ಕೆಲವೊಂದು ಮಾಹಿತಿಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಸಚಿನ್ ತನ್ನ ಮಗಳ ಜೊತೆ ಅಡುಗೆ ಮಾಡುವ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಮಗನ ಸರದಿ.
https://www.instagram.com/p/CAXhC5klnr-/?utm_source=ig_web_copy_link
ಆದ್ರೆ ಮಗನಿಗಾಗಿ ಸಚಿನ್ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಮಗ ಅರ್ಜುನ್ ತೆಂಡುಲ್ಕರ್ ನನ್ನು ತನ್ನಂತೆ ಕ್ರಿಕೆಟ್ ಆಟಗಾರನ್ನಾಗಿ ರೂಪಿಸಬೇಕು ಅಂತ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ತಂದೆಯಂತೆ ಮಗನಿಗೆ ಅಂತಹ ಅದೃಷ್ಟವಿಲ್ಲ. ಅದಿರಲಿ, ಹಾಗಿದ್ರೆ ಸಚಿನ್ ಅವರ ಹೊಸ ಅವತಾರ ಏನದು… ? ಹೌದು, ಸಚಿನ್ ತನ್ನ ಮಗನಿಗಾಗಿ ಕ್ಷೌರಿಕ ಕೆಲಸವನ್ನು ಮಾಡಿದ್ದಾರೆ. ಮಗ ಅರ್ಜುನ್ ಅವರ ಹೇರ್ ಕಟ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಅಲ್ಲದೆ ಒಬ್ಬ ತಂದೆಯಾಗಿ ನೀವು ಎಲ್ಲವನ್ನೂ ಮಾಡಬೇಕಾಗುತ್ತದೆ. ಮಕ್ಕಳೊಂದಿಗೆ ಆಟವಾಡುವುದು, ಜಿಮ್ ಮಾಡೋದು, ಸುಂದರವಾಗಿ ಕಾಣಲು ಹೇರ್‍ಕಟ್ ಮಾಡೋದು ಅಂತ ಸಚಿನ್ ಹೇಳಿಕೊಂಡಿದ್ದಾರೆ.








