ಕ್ರಿಕೆಟ್ ದೇವರಿಗೆ ಕೊರೊನಾ ಕಂಟಕ Sachin Tendulkar
ಬೆಂಗಳೂರು : ಕ್ರಿಕೆಟ್ ದೇವರು, ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಅವರಿಗೆ ಕೊರೊನಾ ಸೋಂಕಿರುವ ಬಗ್ಗೆ ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಟ್ವೀಟ್ ನಲ್ಲಿ ಸಚಿನ್, ಕೊರೊನಾ ಸೋಂಕಿನಿಂದ ದೂರ ಇರಬೇಕು ಎಂದು ಸಾಕಷ್ಟು ಮುಂಜಾಗ್ರತೆ ವಹಿಸಿದ ಬಳಿಕವೂ ನನಗೆ ಸೋಂಕಿರುವುದು ದೃಢವಾಗಿದೆ. ನಾನು ಸೋಂಕಿನ ಕೆಲ ಲಕ್ಷಣಗಳನ್ನ ಹೊಂದಿದ್ದು, ಮನೆಯ ಇತರೆ ಸದಸ್ಯರಿಗೆ ನೆಗಟಿವ್ ಬಂದಿದೆ.
ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು ವೈದ್ಯರು ಹೇಳಿದ ಎಲ್ಲಾ ಸೂಚನೆಗಳನ್ನ ಪಾಲಿಸುತ್ತಿದ್ದೇನೆ. ದೇಶದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯ ಲೋಕಕ್ಕೆ ನನ್ನ ಧನ್ಯವಾದ ಅರ್ಪಿಸುವೆ. ಎಲ್ಲರೂ ಕಾಳಜಿಯಿಂದಿರಿ ಎಂದು ಸಚಿನ್ ಮನವಿ ಮಾಡಿಕೊಂಡಿದ್ದಾರೆ.