ADVERTISEMENT
Monday, March 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೆಸ್ಟ್ ಕ್ರಿಕೆಟ್ ನ ಸುಪ್ರೀಂ ಯಾರು..?

admin by admin
February 4, 2021
in Newsbeat, Sports, ಕ್ರೀಡೆ
sachin tendulkar
Share on FacebookShare on TwitterShare on WhatsappShare on Telegram

ಟೆಸ್ಟ್ ಕ್ರಿಕೆಟ್ ನ ಸುಪ್ರೀಂ ಯಾರು..?

ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಗಂಟೆ ಕ್ರೀಸ್ ನಲ್ಲಿ ನಿಂತ ಬ್ಯಾಟ್ಸ್ ಮನ್ ಯಾರು..?

Related posts

guru raghavendra

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ.

March 9, 2026
team india icc t-20worldcup 2026 champions

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

March 9, 2026

ಭಾರತ ಮತ್ತು ಕ್ರಿಕೆಟ್ ಗೆ ಅವಿನಭಾವ ಸಂಬಂಧ ಇದೆ. ಕ್ರಿಕೆಟ್ ಅಂದ್ರೆ ನಮ್ಮಲ್ಲಿ ಕೇವಲ ಒಂದು ಕ್ರೀಡೆ ಮಾತ್ರವಲ್ಲ, ಅದೊಂದು ಧರ್ಮ. ಕ್ರಿಕೆಟ್ ಆಂಗ್ಲರ ಕ್ರೀಡೆಯಾದ್ರೂ, ಅದನ್ನ ಆರಾಧಿಸಿದ್ದು ಮಾತ್ರ ಭಾರತೀಯರು. ದೇಶದಲ್ಲಿ ಕ್ರಿಕೆಟ್ ಗೆ ಈ ಮಟ್ಟಿನ ಕ್ರೇಜ್ ಗೆ ಕಾರಣ, ನಮ್ಮ ಕ್ರಿಕೆಟ್ ಆಟಗಾರರು.

ಹೌದು..! ಭಾರತೀಯ ಕ್ರಿಕೆಟ್ ಇತಿಹಾಸದ ಪುಟಗಳನ್ನ ತೆರೆದರೇ ಅಲ್ಲಿ ಅಮೃತಾಕ್ಷರಗಳಿಂದ ಬರೆದಿರುವ ಸಾಲು ಸಾಲು ಆಟಗಾರರ ಹೆಸರುಗಳು ಸಿಗುತ್ವೆ. ಒಂದೊಂದು ಹಂತದಲ್ಲಿ, ಒಬ್ಬರ ಆಟಗಾರ ಅತ್ಯದ್ಭುತ ಆಟವಾಡಿ ಭಾರತದ ಪತಾಕೆಯನ್ನ ಹಾರಿಸಿದ್ದಾರೆ. ಅಂತಹ ದಿಗ್ಗಜ ಹೆಸರುಗಳಲ್ಲಿ ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್. ದಿ ಗ್ರೇಟ್ ವಾಲ್, ಜಂಟಲ್ ಮ್ಯಾನ್ ಗೇಮ್ ನ ರಿಯಲ್ ಜಂಟಲ್ ಮ್ಯಾನ್ ರಾಹುಲ್ ದ್ರಾವಿಡ್ ಅಗ್ರಸ್ಥಾನದಲ್ಲಿ ಇರ್ತಾರೆ.

ಯಾಕೆಂದ್ರೆ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಒಟ್ಟಿಗೆ ವಿಶ್ವಕ್ರಿಕೆಟ್ ದುನಿಯಾವನ್ನ ಆಳಿದವರು. ದಶಕಗಳ ಕಾಲ ಕ್ರಿಕೆಟ್ ಜಗತ್ತಿನ ಅನಾಭಿಷಕ್ತ ದೊರೆಗಳಾಗಿ ಮೆರೆದವರು. ಸಚಿನ್ ಭೀಮನಂತೆ ಗುಡುಗಿದರೇ ದ್ರಾವಿಡ್ ಅರ್ಜುನನಂತೆ ಮಿಂಚಿದವರು. ಸಚಿನ್ ಆಟ ಜ್ವಾಲಾಮುಖಿಯಾದ್ರೆ ದ್ರಾವಿಡ್ ಆಟ ಶಾಂತ ಸಾಗರದಲ್ಲಿ ಹುಟ್ಟುವ ಸುನಾಮಿಯಂತಿರುತ್ತಿತ್ತು. ಈ ಇಬ್ಬರು ಆಟದಲ್ಲಿ ಒಂದಿಷ್ಟು ಬದಲಾವಣೆಗಳಿದ್ದರೂ ರಿಸಲ್ಟ್ ಒಂದೇ ಆಗಿರುತ್ತಿತ್ತು.

ದ್ರಾವಿಡ್ ಟೀಂ ಇಂಡಿಯಾದ ಕೋಟೆಯಂತೆ ನಿಂತ್ರೆ, ಸಚಿನ್ ಟೀಂ ಇಂಡಿಯಾ ತ್ರಿವಿಕ್ರಮರಾಗಿ ಎದುರಾಗಳಲ್ಲಿ ಭಯ ಹುಟ್ಟಿಸುತ್ತಿದ್ದರು. ಇಂತಹ ದಿಗ್ಗಜರ ಮಧ್ಯೆ ಯಾರು ಗ್ರೇಟ್ ಅನ್ನೋ ಚರ್ಚೆ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ಕೆಲವರು ಸಚಿನ್ ಪರ ಬ್ಯಾಟ್ ಬೀಸಿದ್ರೆ ಇನ್ನೂ ಕೆಲವರು ದ್ರಾವಿಡ್ ಪರ ನಿಲ್ಲುತ್ತಾರೆ. ಆದ್ರೆ ಈ ಉಭಯರೂ ಟೀಂ ಇಂಡಿಯಾ ಗರ್ಭಗುಡಿಯ ದೊರೆಗಳು ಅನ್ನೋದನ್ನ ಯಾರು ಹಳ್ಳಗೆಳೆಯುವುದಿಲ್ಲ.

ಆದ್ರೆ ಟೆಸ್ಟ್ ಕ್ರಿಕೆಟ್ ವಿಚಾರಕ್ಕೆ ಬಂದ್ರೆ ಸಚಿನ್ ಗಿಂತ ದ್ರಾವಿಡ್ ಒಂದು ಹೆಜ್ಜೆ ಮುಂದು ಅನ್ನೋ ಸಾರ್ವಕಾಲಿಕ ಸತ್ಯ. ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಸಚಿನ್ ಎಷ್ಟೋ ಮಿಂಚಿದ್ರೂ, ಕ್ರಿಕೆಟ್ ನ ಆತ್ಮ, ಅಸ್ತಿತ್ವವೇ ಆಗಿರುವ ಟೆಸ್ಟ್ ನಲ್ಲಿ ದ್ರಾವಿಡ್ ಮೆಗಾಸ್ಟಾರ್. ಟೆಸ್ಟ್ ನಲ್ಲಿ ಸ್ಟಾರ್ಸ್, ಸೂಪರ್ ಸ್ಟಾರ್ಸ್ ಎಷ್ಟೇ ಬಂದರೂ ಸ್ಟಾರ್ ಗಳಿಗೆ ಸ್ಟಾರ್ ಮೆಗಾಸ್ಟಾರ್ ಮಾತ್ರ ಒನ್ ಅಂಡ್ ಓನ್ಲಿ ನಮ್ಮ ಹೆಮ್ಮೆಯ ರಾಹುಲ್ ದ್ರಾವಿಡ್.

ಹೌದು..! ಇದು ಯಾರೋ ಒಬ್ಬರ ಅಭಿಪ್ರಾಯವಲ್ಲ. ಇದು ಇಡೀ ಕ್ರಿಕೆಟ್ ಜಗತ್ತು ಒಪ್ಪಿ ಅಪ್ಪಿಕೊಂಡಿರುವ ಸತ್ಯ. ಇದಕ್ಕೆ ಅಂಕಿಅಂಶಗಳು ಕೂಡ ಪುಷ್ಠಿ ನೀಡುತ್ವೆ.

sachin tendulkar
ರನ್ ಗಳಿಕೆಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ದ್ರಾವಿಡ್ ಗಿಂತ ಮುಂದೆ ಇದ್ದರೂ ಟೆಸ್ಟ್ ಗೆ ನಿಜವಾದ ಅರ್ಥ, ಬೆಲೆ ಮತ್ತು ಗೌರವ ಕೊಟ್ಟವರು ರಾಹುಲ್ ದ್ರಾವಿಡ್. ಅಂದಹಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಈವರೆಗೂ ಯಾರು ಮಾಡದಂತಹ, ಕೆಲ ವಿಶೇಷ ಸಾಧನೆಗಳು ಇರೋದು ದ್ರಾವಿಡ್ ಹೆಸರಲ್ಲೇ.. ಅವುಗಳಲ್ಲಿ ಪ್ರಮುಖವಾದದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಗಂಟೆಗಳ ಕಾಲ ಕ್ರೀಸ್ ನಲ್ಲಿ ನಿಂತಿರುವ ಬ್ಯಾಟ್ಸ್ ಮೆನ್ ದ್ರಾವಿಡ್.

ದ್ರಾವಿಡ್ ಅವರು ಒರೋಬ್ಬರಿ 44,152 ನಿಮಿಷಗಳು ಅಂದ್ರೆ 736 ಗಂಟೆಗಳ ಕಾಲ ಕ್ರೀಸ್ ನಲ್ಲಿ ನಿಂತಿದ್ದಾರೆ. ಇದರಲ್ಲಿ ಅವರು 31,258 ಎಸೆತಗಳನ್ನ ಎದುರಿಸಿದ್ದಾರೆ.

ಅದೇ ಸಚಿನ್ ಸಚಿನ್ ತೆಂಡುಲ್ಕತ್ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟಾರೆ 688 ಗಂಟೆಗಳ ಕಾಲ ಕ್ರೀಸ್ ನಲ್ಲಿದ್ದು ಬ್ಯಾಟ್ ಬೀಸಿದ್ದಾರೆ. ಇದರಲ್ಲಿ ಅವರು 29,437 ಎಸೆತಗಳನ್ನ ಎದುರಿಸಿದ್ದಾರೆ.

ಇದು ದ್ರಾವಿಡ್ ಟೆಸ್ಟ್ ಕ್ರಿಕೆಟ್ ನ ಮೆಗಾಸ್ಟಾರ್ ಅನ್ನೋದಕ್ಕೆ ಒಂದು ಉದಾಹರಣೆ ಅಷ್ಟೆ, ಇಂತಹ ಅನೇಕ ಉದಾಹರಣಗಳು ವಿಶ್ವ ಟೆಸ್ಟ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿವೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Rahul Dravidsachintest cricket
ShareTweetSendShare
Join us on:

Related Posts

guru raghavendra

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ.

by admin
March 9, 2026
0

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ. ಮಾಂಡವ್ಯ ಮಹರ್ಷಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಬೆಂಗಳೂರಿನ ಹಲಸೂರಿನ ದಾಮೋದರ ಮುದಲಿಯಾರ್‌ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಬೃಂದಾವನ...

team india icc t-20worldcup 2026 champions

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

by admin
March 9, 2026
0

ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ. ಇನ್ನೊಂದೆಡೆ 2026ರ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್. ಭಾನುವಾರದ ಹೈವೋಲ್ಟೇಜ್ ಮ್ಯಾಚ್‍ನಲ್ಲಿ ನ್ಯೂಜಿಲೆಂಡ್ ಆಟಗಾರರು ಚೊಚ್ಚಲ ಐಸಿಸಿ ಟಿ-20 ಪ್ರಶಸ್ತಿ...

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

by Shwetha
March 9, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆಯಿಂದ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಬರೋಬ್ಬರಿ 1,069 ಕೋಟಿ ರೂಪಾಯಿಗಳ ಬೃಹತ್ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ...

ವೆನೆಜುವೆಲಾ ಆಯ್ತು, ಇರಾನ್ ತತ್ತರಿಸಿತು: ಹಾಗಾದರೆ ಡೊನಾಲ್ಡ್ ಟ್ರಂಪ್ ಮುಂದಿನ ಗುರಿ ಕ್ಯೂಬಾ ನಾ?

ವೆನೆಜುವೆಲಾ ಆಯ್ತು, ಇರಾನ್ ತತ್ತರಿಸಿತು: ಹಾಗಾದರೆ ಡೊನಾಲ್ಡ್ ಟ್ರಂಪ್ ಮುಂದಿನ ಗುರಿ ಕ್ಯೂಬಾ ನಾ?

by Shwetha
March 9, 2026
0

ಜಾಗತಿಕ ರಾಜಕೀಯ ನಕ್ಷೆಯಲ್ಲಿ ಅಮೆರಿಕದ ಪಾರುಪತ್ಯವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹಾಗೂ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಇರಾನ್ ವಿರುದ್ಧದ ತೀವ್ರ ಸಂಘರ್ಷ ಮತ್ತು...

ಕೇಂದ್ರ ಸರ್ಕಾರದಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹುದ್ದೆಯ ದುರುಪಯೋಗ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಕೇಂದ್ರ ಸರ್ಕಾರದಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹುದ್ದೆಯ ದುರುಪಯೋಗ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

by Shwetha
March 9, 2026
0

ಸಿಲಿಗುರಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿಗಳ ಸ್ಥಾನವನ್ನು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಕಾರ್ಯಸೂಚಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram