ಹಾಲಿವುಡ್ ಅಂಗಳದಲ್ಲಿ ಭಾರತೀಯರು ಕಾಲಿಡುತ್ತಿರುವ ನಡುವೆ ಸದ್ಗುರು ಜಗ್ಗಿ ವಾಸುದೇವ್ ಕೂಡ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಹಾಲಿವುಡ್ನ ಗಾಯಕಿ ಜನ್ನಿಫರ್ ಲೊಪೇಜ್ ಅವರ ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಮ್ಯೂಸಿಕ್ ಚಿತ್ರದಲ್ಲಿ ಇಶಾ ಫೌಂಡೇಶನ್ ರೂವಾರಿ ಸದ್ಗುರು ಜಗ್ಗಿ ವಾಸುದೇವ್ ಅತಿಥಿ ಪಾತ್ರ ಮಾಡಿದ್ದಾರೆ. ‘ರಾಶಿಚಕ್ರ ಕೌನ್ಸಿಲ್’ ಹೆಸರಿನ ಗುಂಪು ಪ್ರವೇಶ ಮಾಡುವ ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಜೆನ್ನಿಫರ್ ಲೋಪೆಜ್ ಮತ್ತು ಆಕೆಯ ರಿಲೆಷನ್ಶಿಪ್ಗಳ ನಡುವಿನ ಸಮಸ್ಯೆಗಳು ಬಗ್ಗೆ ಚರ್ಚಿಸುವ ದೃಶ್ಯದಲ್ಲಿ ಸದ್ಗುರು ಪಾತ್ರ ನಿರ್ವಹಿಸಿದ್ದಾರೆ.
ಸಮಯ ಕಾಪಾಡುವ ದೇವರ ಸೇವಕರಲ್ಲಿ ಒಬ್ಬರಾಗಿ ಸದ್ಗುರು ನಟಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಹಾಲಿವುಡ್ ಸ್ಟಾರ್ಗಳು ನಟಿಸಿದ್ದಾರೆ. ಈ ಚಿತ್ರಕ್ಕೆ ಸದ್ಯ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಫೆ.16ರಂದು ಇದು ಒಟಿಟಿಯಲ್ಲಿ ಬಿಡುಗಡೆಯಾಗಿದೆ.