ಡಿಕೆ ಬ್ರದರ್ಸ್ ವಿರುದ್ದ ಹಾಸನದಲ್ಲಿ ಕೇಸರಿ ಪಡೆ ಪ್ರೋಟೆಸ್ಟ್ Saaksha tv
ಹಾಸನ: ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಗಲಾಟೆ ವಿಚಾರವಾಗಿ ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಿನ್ನೆ ರಾಮನಗರ ಜಿಲ್ಲಾಧಿಕಾರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವತ್ಥನಾರಾಯಣ ಭಾಷಣಕ್ಕೆ ಡಿ.ಕೆ.ಸುರೇಶ ಅಡ್ಡಿಪಡಿಸಿದರು. ಇದನ್ನು ಖಂಡಿಸಿ ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರುಯ ರಸ್ತೆಗೆ ಇಳದಿದ್ದರು.
ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಜಿಲ್ಲಾ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಡಿ.ಕೆ.ಬ್ರದರ್ಸ್ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ನಿನ್ನೆ ರಾಮನಗರದಲ್ಲಿ ಸಿಎಂ ಎದುರು ನಡೆದ ಡಿ.ಕೆ.ಸುರೇಶ ಮತ್ತು ಡಾ. ಅಶ್ವತನಾರಾಯಣ ಜಗಳವು ಸರ್ವಾಜನಿಕರ ಆಕ್ರೋಶಕ್ಕೆ ಒಳಗಾಗಿದೆ.