Sachin | ಗುಜರಾತ್ ಟೈಟಾನ್ಸ್ ಬಗ್ಗೆ ಸಚಿನ್ ಹೇಳಿದ್ದೇನು..?
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಗುಜರಾತ್ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ಬಗ್ಗೆ ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಸಹಾ ಐಪಿಎಲ್‌ನಲ್ಲಿ ಮೋಸ್ಟ್ ಅಂಡರ್ ರೇಟಡ್ ಆಟಗಾರ ಎಂದಿದ್ದಾರೆ. ಸಹಾ ಅವರಲ್ಲಿ ಪ್ರತಿಭೆ ಇದ್ದರೂ ಅದೃಷ್ಟ ಕೂಡಿ ಬರುವುದಿಲ್ಲ ಎಂದು ಸಚಿನ್ ಹೇಳಿದ್ದಾರೆ.
ಪ್ರಸಕ್ತ ಐಪಿಎಲ್ ಋತುವಿನಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ಕಣಕ್ಕೆ ಇಳಿದಿರುವ ಸಹಾ ಅತ್ಯಂತ ‘ಅಪಾಯಕಾರಿ ಆಟಗಾರ‘.

ಸಹಾ.. ಯಾವುದೇ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸುವ ಪ್ರತಿಭಾವಂತ ಆಟಗಾರ ಎಂದು ಸಚಿನ್ ಹೊಗಳಿದ್ದಾರೆ.
ಅವರು ಕ್ರೀಸ್‌ನಲ್ಲಿ ನಿಂತರೆ ಅತ್ಯಂತ ಅಪಾಯಕಾರಿ ಆಟಗಾರ. ಸದ್ಯದ ಫಾರ್ಮ್ ಪರಿಗಣಿಸಿ ಸಹಾಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕು ಎಂದು ಆಯ್ಕೆಗಾರರಿಗೆ ಪರೋಕ್ಷ ಸಲಹೆ ನೀಡಿದ್ದಾರೆ.
ಸಹಾ ಐಪಿಎಲ್ 2022 ರ ಋತುವಿನಲ್ಲಿ 9 ಪಂದ್ಯಗಳನ್ನು ಆಡಿದರು ಮತ್ತು 39 ರ ಸರಾಸರಿಯಲ್ಲಿ 312 ರನ್ ಗಳಿಸಿದರು. ಇದರಲ್ಲಿ 3 ಅರ್ಧಶತಕಗಳಿವೆ.