Pushpa | “ಪುಷ್ಪ” ಸಿನಿಮಾ ತೆಗೆದವನನ್ನ ಚಪ್ಪಳಿಯಲ್ಲಿ ಹೊಡೀಬೇಕಂತೆ
ಪುಷ್ಪ ಸಿನಿಮಾ ಮಾಡಿದವನನ್ನ ಚಪ್ಪಳಿಯಲ್ಲಿ ಹೊಡೆಯಬೇಕು ಅಂತಾ ಟಿಆರ್ ಎಸ್ ಮುಖಂಡ ಹಾಗೂ ಜನಪದ ಹಾಡುಗಾರ ಸಾಯಿ ಚಂದ್ ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. Sai-chand-lambasted-on-pushpa-movie saaksha tv
ಸಾಯಿಚಂದ್ ಹೇಳಿಕೆಗೆ ಅಲ್ಲು ಅರ್ಜುನ್ ಅಭಿಮಾನಿಗಳು ಫುಲ್ ಗರಂ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು..! ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದರೂ ಕಲೆಕ್ಷನ್ ನಲ್ಲಿ ಮಾತ್ರ ಪುಷ್ಪ ಹಿಂದೆ ಬೀಳಲಿಲ್ಲ.
ಕೊರೊನಾ ಸೋಂಕಿನ ಕಾಟದ ಮಧ್ಯೆಯೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಪುಷ್ಪ ಸಿನಿಮಾ, ಈವರೆಗೂ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಅದರಲ್ಲೂ ಶ್ರೀವಲ್ಲಿ ಸಾಂಗ್, ಅಲ್ಲು ಅರ್ಜುನ್ ತಗ್ಗೇದೆ ಲೇ ಡೈಲಾಗ್ ಸೋಶಿಯಲ್ ಮೀಡಿಯಾಗಳಿಗೆ ಬೆಂಕಿ ಹಚ್ಚಿದೆ.
ಭಾಷೆಯ ಬೌಂಡರಿಗಳನ್ನ ದಾಟಿ ಕ್ರಿಕೆಟಿಗರು ಶ್ರೀವಲ್ಲಿ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ದೇಶ ವಿದೇಶದಲ್ಲಿ ಸದ್ಯ ಪುಷ್ಪ ಹವಾ ನಡೆಯುತ್ತಿದೆ.
ಇದು ಹೀಗಿದ್ದರೇ ಟಿಆರ್ಎಸ್ ಮುಖಂಡ ಹಾಗೂ ಜನಪದ ಹಾಡುಗಾರರೂ ಆಗಿರುವ ಸಾಯಿ ಚಂದ್ ‘ಪುಷ್ಪ’ ಸಿನಿಮಾದ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ್ದಾರೆ.
‘ಪುಷ್ಪ’ ಸಿನಿಮಾ ತೆಗೆದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು” ಅಂತಾ ಹೇಳಿದ್ದಾರೆ.
ಶಾಲಾ ಉದ್ಘಾಟನಾ ಕಾರ್ಯಕ್ರದಲ್ಲಿ ಮಾತನಾಡಿದ ಸಾಯಿ ಚಂದ್, ಮಕ್ಕಳು ಶಿಸ್ತಿನಿಂದ ಕೂರಬೇಕು ಎನ್ನುತ್ತಾ, ”ಅವನ್ಯಾರೊ ತನ್ನನ್ನು ತಾನು ‘ಪುಷ್ಪ’ ಎಂದುಕೊಂಡಿದ್ದಾನೆ.
ಅವನನ್ನು ಮೂಲೆಯಲ್ಲಿ ಕೂರಿಸಿ” ಎಂದು ಬಾಲಕನಿಗೆ ಹೇಳಿದ್ದಾರೆ. ಈ ರೀತಿಯ ಸಿನಿಮಾಗಳನ್ನು ತೆಗೆಯುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು” ಎಂದು ವೇದಿಕೆಯ ಮೇಲೆ ಹೇಳಿದ್ದಾರೆ. ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ.










