ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಲೇಡಿ ಪವರ್ ಸ್ಟಾರ್ , ಸಹಜ ಸುಂದರಿ , ರೌಡಿ ಬೇಬಿ ಸಾಯಿ ಪಲ್ಲವಿಗೆ ದೊಡ್ಡ ಫ್ಯಾಂಡಮ್ ಇದೆ… ಸಾಯಿ ಪಲ್ಲವಿಗೆ ಎಷ್ಟು ದೊಡ್ಡ ಅಭಿಮಾನಿಗಳ ಬಳಗವಿದೆ ಅನ್ನೋದಕ್ಕೆ ಒಂದು ಸಣ್ಣ ಝಳಕ್ ಇತ್ತೀಚೆಗೆ ರಷ್ಮಿಕಾ ಮಂದಣ್ಣ ಸಿನಿಮಾ ಆಡವಾಳ್ಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲೇ ಸಿಕ್ಕಿತ್ತು..
ಅಲ್ಲದೇ ಇಂಡಸ್ಟ್ರಿಗೆ ಸಾಯಿ ಪಲ್ಲವಿ ಯಾಕೆ ಲೇಡಿ ಪವರ್ ಸ್ಟಾರ್ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿತ್ತು.. ಕಾರ್ಯಕ್ರಮ ರಶ್ಮಿಕಾ ಸಿನಿಮಾದೇ ಆದ್ರೂ ಅಲ್ಲಿದ್ದವರೆಲ್ಲಾ ನಾನ್ ಸ್ಟಾಪ್ ಚಪ್ಪಾಳೆ ಸಿಡಿಸಿದ್ದು ಸಾಯಿ ಪಲ್ಲವಿಗೆ..
ಪ್ರೇಮಂ ಸಿನಿಮಾ ಮೂಲಕ ಇಂಡಸ್ಟ್ರರಿಗೆ ಪಾದಾರ್ಪಣೆ ಮಾಡಿದ ಡ್ಯಾನ್ಸಿಂಗ್ ಕ್ವೀನ್ , ತಮ್ಮ ನ್ಯಾಚುರಲ್ ಅದಾ ಮೂಲಕ ಅಭಿಮಾನಿಗಳನ್ನ ‘ಫಿದಾ’ ಆಗುವಂತೆ ಮಾಡಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ..
ಗಾರ್ಗಿ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದು , ಕನ್ನಡ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ..
ಈ ಸಿನಿಮಾವನ್ನ ಕನ್ನಡಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಪ್ರೆಸೆಂಟ್ ಮಾಡ್ತಿರುವುದು ವಿಶೇಷ..
ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಈ ಸಿನಿಮಾವನ್ನು ಕನ್ನಡದಲ್ಲಿ ನಟ ರಕ್ಷಿತ್ ಶೆಟ್ಟಿ ತಮ್ಮ ಪರಮವ್ಹ ಸ್ಟುಡಿಯೋಸ್ ಮೂಲಕ ಪ್ರಸ್ತುತಿಪಡಿಸಲು ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಸಹ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.
ಗಾರ್ಗಿ ಸಿನಿಮಾದ ನಿರ್ದೇಶಕರಾದ ಗೌತಮ್ ಅವರು ರಕ್ಷಿತ್ ಶೆಟ್ಟಿ ಅವರ ಒಳ್ಳೆಯ ಸ್ನೇಹಿತರಾಗಿದ್ದಾರೆ. ನಾನು ಅವರು ಭೇಟಿಯಾದಾಗಲೆಲ್ಲ ಕತೆಗಳ ಬಗ್ಗೆ ಸಿನಿಮಾಗಳ ಬಗ್ಗೆಯೇ ಮಾತನಾಡುತ್ತಿದ್ದೆವು. ಗೌತಮ್ ಗೆ ಸಿನಿಮಾದ ಬಗ್ಗೆ ಇರುವ ಪ್ರೇಮ ಮತ್ತು ‘ಗಾರ್ಗಿ’ ಸಿನಿಮಾ ಮೂಡಿಬಂದಿರುವ ರೀತಿ ಈ ಚಿತ್ರವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಮತ್ತು ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನಟಿಸಿರುವುದು ಸಹ ಬಲವಾದ ಕಾರಣವೇ ಎನ್ನಬಹುದು. ಜೊತೆಗೆ ಸಿನಿಮಾವನ್ನು ವೀಕ್ಷಿಸಿದ ಬಳಿಕವಂತೂ ಈ ಸಿನಿಮಾವನ್ನು ಪ್ರಸ್ತುತ ಪಡಿಸಲು ನನಗೆ ಸಾವಿರ ಕಾರಣಗಳು ಸಿಕ್ಕವು ಎಂದಿದ್ದಾರೆ..
ಅಲ್ಲದೇ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಳಿಕ, ಹೃದಯ ಕದಲಿಸಿದ ಸಿನಿಮಾ ಎಂದರೆ ಗಾರ್ಗಿ ಎಂದರೆ ತಪ್ಪಾಗಲಾರದು. ಈ ಸಿನಿಮಾವು ನಿಮ್ಮನ್ನು ಗಾರ್ಗಿಯ ಪ್ರಪಂಚೊದಳಕ್ಕೆ ಸೆಳೆದು, ಅವಳ ಧೈರ್ಯ ಮತ್ತು ಹೋರಾಟದ ನಡುವೆ ಮನಕಲಕುವ ದೃಶ್ಯಗಳು ಮತ್ತು ಅವನ್ನು ಗೌತಮ್ ನಿರೂಪಿಸಿರುವ ರೀತಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಸಾಯಿ ಪಲ್ಲವಿ ‘ಗಾರ್ಗಿ’ ಪಾತ್ರವನ್ನು ಜೀವಿಸಿ ನಿಜ ಜೀವನಕ್ಕೆ ಹತ್ತಿರವಾಗಿರುವಂತೆ ಮಾಡಿದ್ದಾರೆ. ಕಾಳಿ ವೆಂಕಟ್ ಇಂದ್ರ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ..
ಅಂದ್ಹಾಗೆ ಸಿನಿಮಾ ಜುಲೈ 15 ರಂದು ಬಿಡುಗಡೆ ಆಗಲಿದೆ..