ಟಾಲಿವುಡ್ ನಲ್ಲಿ ನಟಿ ಸಾಯಿ ಪಲ್ಲವಿ ಕ್ರೇಜ್ ಕಡಿಮೆ ಏನು ಇಲ್ಲ.
ಇಂಡಸ್ಟ್ರೀ ಗೆ ಬಂದ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟಕ್ಕೇರಿದ ಪಲ್ಲವಿ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಹಜ ಸುಂದರಿ ಸಾಯಿ ಪಲ್ಲವಿ ಏನೇ ಹೇಳಿಕೆ ನೀಡಿದ್ರೂ ವಿರೋಧ ವ್ಯಕ್ತವಾಗುವುದು ಕಡಿಮೆಯೇ.. ಆದ್ರೆ ಇತ್ತೀಚೆಗೆ ಅವರು ನೀಡಿರೋ ಹೇಳಿಕೆಗಳಿಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ಬರುತ್ತಿವೆ..
ಹೌದು..! ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸಾಯಿ ಪಲ್ಲವಿ, ನಾನು ಎಡ ಮತ್ತು ಬಲ ಅಂತ ಕೇಳಿದ್ದೇನೆ. ಆದರೆ ಎರಡರ ಬಗ್ಗೆಯೂ ನನಗೆ ಆಳವಾದ ಜ್ಞಾನವಿಲ್ಲ. ಆದರೆ ನಾನು ಮನುಷ್ಯತ್ವದ ಪರ ಮಾತನಾಡುತ್ತೇನೆ.
ನನ್ನ ಮನೆಯಲ್ಲಿ ಕಲಿಸಿದ್ದು ನ್ಯೂಟ್ರಲ್ ನಿಯಮ. ಹಾಗಾಗಿ ಕಾಶ್ಮೀರದಲ್ಲಿ ಪಂಡಿತರ ಹತ್ಯೆಯನ್ನು ಹೇಗೆ ಧಾರ್ಮಿಕ ದೃಷ್ಟಿಕೋನದಿಂದ ನೋಡಲಾಯಿತೋ, ಹಾಗೆಯೇ ಲಾಕ್‌ಡೌನ್ ಸಮಯದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಟೆಂಪೋ ಡ್ರೈವರ್ ಮೇಲೆ ಜೈ ಶ್ರೀರಾಮ್ ಎಂದು ಹೇಳುತ್ತಾ ಕೊಚ್ಚಿಕೊಂದ ಘಟನೆಯನ್ನೂ ನಾನು ಹಾಗೆಯೇ ನೋಡಬೇಕಾಗುತ್ತದೆ. ಎರಡು ಹತ್ಯೆಯೂ ಒಂದೇ ಎಂದು ಹೇಳಿದ್ದಾರೆ.
ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಯಾತಕ್ಕಾಗಿ.. ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಅಭಿಪ್ರಾಯ ಪಟ್ಟಿದ್ದು , ಅವರ ಈ ಹೇಳಿಕೆ ಸಾಕಷ್ಟು ವೈರಲ್ ಆಗ್ತಿದೆ..








